ಬೀದರ್‌ | ಹೋರಾಟದ ಚಿಂತನೆಯಿಲ್ಲದ ಸಾಹಿತ್ಯ ಉಳಿಯದು : ಗಂಧರ್ವ ಸೇನಾ

Date:

Advertisements

ಸಮತಾ ಸಂಸ್ಕ್ರತಿ ವೇದಿಕೆ ಸ್ಥಾಪಿಸಿ, ಅದರ ಮೂಲಕ ಬಡವರ, ನಿರ್ಗತಿಕರ ಬಾಳು ಬೆಳಗಿಸಲು ವೈಯಕ್ತಿಕ ಬದುಕು ಲೆಕ್ಕಿಸದೆ ಸದಾ ಅನ್ಯರ ಹಿತಕ್ಕಾಗಿ ಬದ್ಧತೆ ಮೈಗೂಡಿಸಿಕೊಂಡಿರುವ ಕಂಟೆಪ್ಪ ಗುಮ್ಮೆ ಅವರ ಬದುಕು ರೋಮಾಂಚಕಾರಿ ಎಂದು ಹಿರಿಯ ಪತ್ರಕರ್ತ ಗಂಧರ್ವ ಸೇನಾ ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತಿ ಕಂಟೆಪ್ಪ ಗುಮ್ಮೆ ಅವರ ನಿವಾಸದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ʼ74ನೇ ಮನೆಯಂಗಳದಲ್ಲಿ ಮಾತುಕತೆʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ಸಮಾಜದಲ್ಲಿ ಇಂದಿಗೂ ಶೋಷಣೆ ಮುಂದುವರೆದಿದೆ. ಬರಹಗಾರರು ಇಂತಹ ಸೂಕ್ಷ್ಮತೆಗಳ ಕುರಿತು ಗಮನಹರಿಸಬೇಕು. ಸಾಹಿತ್ಯದಲ್ಲಿ ಹೋರಾಟದ ಚಿಂತನೆ ಇಲ್ಲದಿದ್ದರೆ ನೂರು ಕೃತಿ ರಚಿಸಿದ ಲೇಖಕರು ಸಮಾಜದಲ್ಲಿ ಮರೆಯಾಗುತ್ತಾರೆ. ಕೇವಲ ಪ್ರೀತಿ-ಪ್ರೇಮ, ನಿಸರ್ಗ ವಿಷಯಗಳ ಸಾಹಿತ್ಯ ಅಷ್ಟೇ ಅಲ್ಲದೆ ಬದುಕು, ಹಸಿವು ಸೇರಿದಂತೆ ಸಾಮಾಜಿಕ ಸಂಕಟಗಳ ಕುರಿತು ಸಾಹಿತ್ಯ ರಚಿಸಿಬೇಕು” ಎಂದು ಸಲಹೆ ನೀಡಿದರು.

Advertisements

ಕವಿ, ಸಾಹಿತಿ ಕಂಟೆಪ್ಪ ಗುಮ್ಮೆ ಮಾತನಾಡಿ, “ನನ್ನ ಸಾಮಾಜಿಕ ಹೋರಾಟಕ್ಕೆ ಕಾರ್ಲ್ ಮಾರ್ಕ್ಸ್ ಹಾಗೂ ಲೆನಿನ್ ಚಿಂತನೆಗಳು ಪ್ರೇರಣೆಯಾಗಿವೆ.  ಕೆ.ಆರ್.ದುರ್ಗಾದಾಸ, ಕಾಶಿನಾಥ ಅಂಬುಲಗಿ, ಚನ್ನಣ್ಣ ವಾಲಿಕಾರ, ಸೌದತ್ತಿ ಮಠ, ಮ.ಗು.ಬಿರಾದಾರ, ಜಿ ಎಸ್ ಶಿವರುದ್ರಪ್ಪ ಸೇರಿದಂತೆ ಅನೇಕ ಲೇಖಕರು, ಸಾಹಿತಿಗಳ ಮಾರ್ಗದರ್ಶನದಿಂದ ಸಾಹಿತ್ಯ ಸೃಷ್ಟಿಗೆ ಕಾರಣವಾಯಿತು” ಎಂದು ಹೇಳಿದರು.

“ಕವಿ ತನ್ನ ಬದುಕಿನ ಅನುಭವ ಸಾರವನ್ನು ಸಾಹಿತ್ಯದಲ್ಲಿ ಹಿಡಿದಿಡಬೇಕು. ನನ್ನ ʼಒಡೆದ ಬಳೆʼ ಕಿರು ಕಾದಂಬರಿ, ʼಬೆಂಕಿ ಕಾರಿತು ಕೆಂಡʼ, ʼಸತ್ತಾಗ ಹೆಗಲು ಕೊಡುʼ, ʼಗೊಡ್ಡು ಎಮ್ಮೆʼ ಸೇರಿದಂತೆ ಅನೇಕ ಕವಿತೆಗಳು ರಚನೆಯಾದರೂ ಆರ್ಥಿಕ ಮುಗ್ಗಟ್ಟಿನಿಂದ ಕೃತಿಗಳು ಮುದ್ರಿಸಲು ಸಾಧ್ಯವಾಗಿಲ್ಲ. ಮೂಲಭೂತ ಸೌಕರ್ಯಗಳಿಂದ ವಂಚಿತವಾದ ನನ್ನೂರಿಗೆ ಹೋರಾಟದ ಪ್ರತಿಫಲವಾಗಿ ರಸ್ತೆ , ಶಾಲೆ ಹಾಗೂ ಬೀದಿ ದೀಪ ವ್ಯವಸ್ಥೆ ಕಲ್ಪಿಸಿದರು” ಎಂದು ಬದುಕಿನ ಘಟನೆಗಳನ್ನು ಮೆಲಕು ಹಾಕಿದರು.

ಚುಟುಕು ಸಾಹಿತಿ ವೀರಶೆಟ್ಟಿ ಚೌಕನಪಳ್ಳಿ ಹಾಗೂ ಸಾಹಿತಿ ಪ್ರಭು ಮಾಲೆ ಸಂವಾದ ನಡೆಸಿಕೊಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿ ನುಡಿದರು.

ಇದೇ ಸಂದರ್ಭದಲ್ಲಿ ಪರಪ್ಪನ ಅಗ್ರಹಾರದಲ್ಲಿ ಪೊಲೀಸ್ ಸಿಬ್ಬಂದಿಯಾಗಿರುವ ಅಮಲಾಪುರ ಗ್ರಾಮದ ಮಮಿತಾ ಅವರು ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ ನಲ್ಲಿ ಚಿನ್ನದ ಪದಕ ಪಡೆದ ಪ್ರಯುಕ್ತ ಜಿಲ್ಲಾ ಕಸಾಪದಿಂದ ಗೌರವಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೈಕ್‌ಗೆ ಸಾರಿಗೆ ಬಸ್ ಢಿಕ್ಕಿ; ಒಂದೇ ಊರಿನ ಮೂವರು ಯುವಕರು ದುರ್ಮರಣ

ಕಾರ್ಯಕ್ರಮದಲ್ಲಿ ಬೀದರ್‌ ತಾಲೂಕು ಕಸಾಪ ಅಧ್ಯಕ್ಷರಾದ ಎಂ.ಎಸ್.ಮನೋಹರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಗನಾಥ ಕಮಲಾಪುರೆ ನಿರೂಪಿಸಿದರು. ಶಿವಶಂಕರ ಟೋಕರೆ ಸ್ವಾಗತಿಸಿದರು. ಬಾಬು ಮಡಕಿ ವಂದಿಸಿದರು. ಕಸಾಪದ ಪ್ರಮುಖರಾದ ಶಿವಕುಮಾರ ಕಟ್ಟೆ, ದಾನಿ ಬಾಬುರಾವ, ಶಂಭುಲಿಂಗ ವಾಲ್ದೊಡ್ಡಿ, ಡಾ.ಸಂಜೀವಕುಮಾರ ಅತಿವಾಳೆ, ಮಾರುತಿ ಕಂಟೆ, ನರಸಿಂಗ ಸಾಮ್ರಾಟ್, ಮಹಾದೇವ ಕಾಂಬಳೆ, ಚಂದ್ರಕಾಂತ ಹೊಸಮನಿ, ರಮೇಶ ಬಾಬು, ಅಶೋಕ ಸಂಗಮ, ಸಿಮ್ಲಾಬಾಯಿ ಶಾಸ್ತ್ರಿ, ಕೀರ್ತಿಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X