ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಐದು ಜನರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಮದುಗಿರಿ ತಾಲೂಕಿನ ಕಾಟಗಾನ ಹಟ್ಟಿ ಗ್ರಾಮದ ಬಳಿ ದುರ್ಘಟನೆ ನಡೆದಿದೆ.
ಪಾವಗಡದ ಎತ್ತಿನಹಳ್ಳಿ ಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಹಾಗೂ ತುಮಕೂರಿನಿಂದ ಬರುತ್ತಿದ್ದ ಮತ್ತೊಂದು ಕಾರಿನ ನಡುವೆ ಪರಸ್ಪರ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಒರ್ವ ಮಹಿಳೆ , 3 ಪುರುಷರು ಸೇರಿ ಒಟ್ಟು 4 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು 8 ವರ್ಷದ ಗಂಡು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಎತ್ತಿನಹಳ್ಳಿಯ ಗೀತಾ ಅವರ ಪುತ್ರ ಯೋಧ , ಚಾಲಕ ಆನಂದ್ ಹಾಗೂ ಸಿಂಧೂರವರ ಒಂದು ವರ್ಷ ಪ್ರಾಯದ ಮಗು ವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ವರ್ಷದ ಮಗುವಿನ ತಾಯಿ ಸಿಂಧೂ ಹಾಗೂ ಮತ್ತೊಬ್ಬ ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾರೆ.
ತುಮಕೂರು ಮಾರ್ಗವಾಗಿ ಬರುತ್ತಿದ್ದ ಕಾರಿನಲ್ಲಿದ್ದ ಚಾಲಕ ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿಯ ವಾಸಿ ನಾಗರಾಜು ಇಬ್ಬರು ಸಹ ಮೃತಪಟ್ಟಿದ್ದು ವಿಳಾಸ ಪತ್ತೆಯಾಗಿಲ್ಲ.
ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಮೃತಪಟ್ಟ ದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
