ಕೊಡಗು ವಿಶ್ವವಿದ್ಯಾಲಯ ಮುಚ್ಚಬಾರದು, ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಯೋಜನೆಗಳಿಗೆ ದುರುಪಯೋಗಪಡಿಸಕೊಳ್ಳಬಾರದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ಕೊಡಗು ಜಿಲ್ಲಾ ಘಟಕ ಅಹೋರಾತ್ರಿ ಧರಣಿ ನಡೆಸಿದೆ.
ನಿನ್ನೆ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ನಾಯಕ ಪ್ರತಾಪ್ ಸಿಂಹ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿವಿಗಳನ್ನು ಆರಂಭಿಸಿದ್ದು ಬಿಜೆಪಿ ಸರ್ಕಾರ. ಇದೀಗ ಕಾಂಗ್ರೆಸ್ ಸರ್ಕಾರ ಅವುಗಳನ್ನು ಕಡೇಪಕ್ಷ ನಿರ್ವಹಣೆ ಮಾಡಲೂ ಆಗದೇ ಮುಚ್ಚಲು ಮುಂದಾಗಿರುವುದು ನಾಚಿಕೆಗೇಡಿನ ವಿಚಾರ ಎಂದರು.
ನಿನ್ನೆ ಪ್ರತಿಭಟನೆ ಆರಂಭವಾದಾಗ ಮಾತನಾಡಿದ ಮುಖಂಡ ಎಂ ಪಿ ಅಪ್ಪಚ್ಚುರಂಜನ್, “ವಿವಿ ಮುಚ್ಚಬಾರದು, ಎಸ್, ಎಸ್‌ಟಿ ಅನುದಾನ ದುರ್ಬಳಕೆ ಮಾಡಬಾರದು ಹಾಗೂ ಸರ್ಕಾರಿ ಸ್ವಾಮ್ಯದ ʼಸಿʼ & ʼಡಿʼ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬಾರದು.. ಈ ಮೂರು ಬೇಡಿಕೆಗಳನ್ನು ಕಡ್ಡಾಯವಾಗಿ ಈಡೇರಿಸಬೇಕು. ಇಲ್ಲದಿದ್ದರೆ ಇದೇ ಮಾ.11ರಂದು ಕೊಡಗು ಬಂದ್ ಮಾಡಲಾಗುವುದು. ಜತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮಡಿಕೇರಿ | ಹೋರಾಟದಿಂದ ಹಿಂದೆ ಸರಿಯುವ ಪ್ರೆಶ್ನೆಯೇ ಇಲ್ಲ: ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್
ಪ್ರತಿಭಟನೆಯಲ್ಲಿ ಮುಖಂಡ ಸುನಿಲ್ ಸುಬ್ರಮಣಿ, ರಾಬಿನ್ ದೇವಯ್ಯ, ಮಹೇಶ್ ಜೈನಿ, ಡಾ. ನವೀನ್ ಕುಮಾರ್, ಉಮೇಶ್ ಸುಬ್ರಮಣಿ, ನೆಲ್ಲಿರ ಚೆಲನ್, ರವಿ ಕುಶಾಲಪ್ಪ, ಸತೀಶ್, ಪಿಎಂ ರವಿ, ಅನಿತಾ ಪೂವಯ್ಯ, ಸಬಿತಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
