ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಸಾಹಿತ್ಯ ಪರಿಷತ್‌ನಿಂದ ಹಲಗೇರಿಯಲ್ಲಿ ಹಮ್ಮಿಕೊಂಡಿರುವ 10ನೇ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಮಾಲಾ ಡಿ ಬಡಿಗೇರ ಅವರನ್ನು ಆಯ್ಕೆ ಮಾಡಲಾಗಿದೆ.
ಕೊಪ್ಪಳ ತಾಲೂಕು ಪರಿಷತ್ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ “ಹಲಗೇರಿಯ ಸಾಹಿತ್ಯ ಪ್ರೇಮಿ ಸದಾ ಕನ್ನಡ ಭಾಷೆಗಾಗಿ ಸಂಘಟನಾತ್ಮಕವಾಗಿ ನಾಡು-ನುಡಿಗಾಗಿ ಸಕ್ರಿಯ ದುಡಿಯುತ್ತಿದ್ದ ದಿ. ರಾಜಶೇಖರ ಅಂಗಡಿ ಅವರ ನೆನಪಿಗಾಗಿ ಹತ್ತನೇ ತಾಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಲಾ ಡಿ ಬಡಿಗೇರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ” ಎಂದು ಹೇಳಿದರು.
ಹನಮಂತ ಹಳ್ಲಿಕೇರಿಮಾತನಾಡಿ, “ರಾಜಶೇಖರ್ ಅಂಗಡಿ ಅವರ ಸವಿನೆನಪಿಗಾಗಿ ಸಾಹಿತ್ಯ ಸಮ್ಮೇಳನ ಮಾಡಲು ತೀರ್ಮಾನಿಸಲಾಗಿದೆ. ವರ್ಷದ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿ ಸಂತಸ” ಎಂದರು
ದಾನಪ್ಪ ಪೂಜಾರ ಮಾತಾಡಿ, “ತಾಲೂಕು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಲಾ ಅವರನ್ನು ಆಯ್ಕೆ ಮಾಡಿದ್ದು ತುಂಬಾ ಖುಷಿಯ ವಿಷಯ” ಎಂದರು.
ಸಿಕಾ ಬಡಿಗೇರ ಮಾತನಾಡಿ, “ಮೊದಲ ಮನಸು ಕಟ್ಟಿ, ಕವನ ಸಂಕಲನ, ಮನದಾಳದ, ಪ್ರಬಂಧ ಸಂಕಲನ ಸಾಹಿತ್ಯ ಪ್ರೇಮಿಗಳಲ್ಲಿ ಸಂಚಲನ ಮೂಡಿಸಿದ ಕೃತಿಗಳು ಮೊದಲ ಬಾರಿಗೆ ಮಹಿಳಾ ಸಾಹಿತ್ಯ ಆಯ್ಕೆ ಮಾಡಿದ್ದು ಹೆಮ್ಮಯ ವಿಷಯ” ಎಂದರು.
ರಮೇಶ ಕುಲಕರ್ಣಿ ಮಾತನಾಡಿ, “ಇತ್ತೀಚೆಗೆ ಮಹಿಳೆಯರಿಗೆ ಉತ್ತಮ ಸ್ಥಾನಮಾನ ಸಿಕ್ಕಿರುವುದಿಲ್ಲ ಅದರೆ, ಅಂತಹ ಅವಕಾಶ ಮಾಲಾ ಬಡಿಗೇರ ಅವರಿಗೆ ಸಿಕ್ಕಿರುವುದು ಸಂತಸ ತಂದಿದೆ” ಎಂದರು.
ಸಾಹಿತಿ ಈಶ್ವರ ಹತ್ತಿ ಮಾತನಾಡಿ, “ಮಾಲಾ ಬಡಿಗೇರ ಅವರ ಮನೆ ಸಾಹಿತ್ಯದ ಮನೆ. ಪ್ರತಿ ತಿಂಗಳು ಬಡಿಗೇರ ಅವರ ಮನೆಯಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯುತ್ತವೆ. ಇಂತಹ ಸಾಹಿತ್ಯ ಪ್ರೇಮಿಗಳಿಗೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು ಸಂತಸ. ಮಾಲ ಅವರು ಕಲಾವಿದೆ ಕೂಡ ಹೌದು. ಅಸ್ಮಿ ಎಂಬ ಕಿರುಚಿತ್ರ ಮಾಡಿ ಮನಸೆಳೆದಿದ್ದರು. ರಂಗಕಲಾವಿದರು, ಜಾನಪದ ಗಾಯಕಿ, ಬರಹಗಾರರು, ಕವಯಿತ್ರಿಯೂ ಹೌದು. ಇವರು ಅಧ್ಯಕ್ಷರಾಗಿದ್ದು ಸೂಕ್ತ” ಎಂದು ಹೇಳಿದರು.
ಶರಣಪ್ಪ ಬಚಲಾಪೂರ ಮಾತನಾಡಿ, “ರಾಜಶೇಖರ ಅಂಗಡಿಯವರ ಗೌರವಾರ್ಥವಾಗಿ 10ನೇ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಉತ್ತಮ ನಟಿ, ಲೇಖಕಿ ಈ ಸಮ್ಮೇಳನಕ್ಕೆ ಸ್ಪೂರ್ತಿ ಶಕ್ತಿ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿವಿಧೆಡೆ ದಾಳಿ; 20 ಬಾಲ ಕಾರ್ಮಿಕರ ರಕ್ಷಣೆ
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಮಾಲಾ ಅವರ ಪ್ರಬಂಧಗಳ ಮೂಲಕ ಪರಿಚಿತರಾದವರು, ಅವರ ಒಂದು ಕಥೆ ಕಿರುಚಿತ್ರವಾಗಿರುವುದು ಖುಷಿಯ ವಿಷಯ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ವಿಚಾರ, ವಿಷಯ ಮಂಡನೆಯಾದರೆ ಸಾಲದು. ಬಿಎಸ್‌ಪಿಎಲ್, ಎಮ್‌ಎಸ್‌ಪಿಎಲ್ ಹಾಗೂ ವಿದ್ಯುತ್ ಅಣುಸ್ಥಾವರದ ಕುರಿತು ಚರ್ಚೆಯಾಗಲಿ ಕೊಪ್ಪಳ ಪರಿಸರದ ಕುರಿತು ಸಮ್ಮೇಳನದಲ್ಲಿ ಮುನ್ನಲಗೆ ಬರಲಿ” ಎಂದರು.
ಮಾಲಾ ಡಿ ಬಡಿಗೇರ ಮಾತಾಡಿ, ” ಮಹಿಳೆಯರ ವಿಷಮ ಸ್ಥಿತಿಯಲ್ಲಿ ಇರುವಾಗಲೇ ನನ್ನನ್ನು ಆಯ್ಕೆ ಮಾಡಿದ್ದು, ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ” ಎಂದು ಹರ್ಷಿತರಾದರು.