ಮಾರಾಟವಾಗಿರುವ ಕಾರಿನ ಹಣ ಪಡೆಯಲು ಬಂದ ವ್ಯಕ್ತಿಗೆ ಚಾಕುವಿನಿಂದ ಹಿರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಗುರುವಾರ ಸಂಜೆ ನಡೆದಿದೆ.
ಬೆಂಗಳೂರಿನ ಬೆಳ್ಳಂದೂರು ನಿವಾಸಿ ಆನಂದ್(36) ಹಲ್ಲೆಗೊಳಗಾದ ವ್ಯಕ್ತಿ.
ಚಿಂತಾಮಣಿ ತಾಲೂಕಿನ ಚಂದ್ರು ಎಂಬಾತನಿಗೆ ಆನಂದ್ ತನ್ನ ಕಾರು ಮಾರಾಟ ಮಾಡಿದ್ದು, ಗುರುವಾರ ಕಾರಿನ ಹಣ ಪಡೆಯಲು ಚಿಂತಾಮಣಿ ತಾಲೂಕಿನ ಸ್ವಾರಪಲ್ಲಿ ಗೇಟ್ ಬಳಿ ಬಂದಿದ್ದ. ಈ ವೇಳೆ ಪರಸ್ಪರ ಮಾತಿನ ಚಕಮಕಿ ಉಂಟಾಗಿದ್ದು, ಚಂದ್ರು ಹಾಗೂ ಸುರೇಶ್ ಎಂಬುವರು ಆನಂದ್ ಗೆ ಚಾಕು ಇರಿದಿದ್ದು, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೆ ಒಳಗಾದ ಆನಂದ್ ಎಂಬಾತನನ್ನು ಕೂಡಲೇ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.17, 18ರಂದು ಸಿಐಟಿಯು ಪ್ರತಿಭಟನೆ
ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.