ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಾರ್ಥ್ ಬ್ಯಾಂಕ್ ಬಳಿಯ ವಿಸಿ ಕಾಲುವೆಯಲ್ಲಿ ಮುಳುಗಿದ್ದ ಸ್ಯಾಂಟ್ರೋ ಕಾರೊಂದರಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಕಾಲುವೆಯ ನೀರನ್ನು ಇತ್ತೀಚೆಗೆ ಕಡಿಮೆ ಮಾಡುತ್ತಿರುವ ಸಂದರ್ಭ ಕಾರು ಕಾಣಿಸಿಕೊಂಡಿದ್ದು, ಬಳಿಕ ನೀರಿನಿಂದ ಹೊರತೆಗೆಯಲಾದ ಕಾರಿನಲ್ಲಿ ಮೂರು ಶವಗಳು ಪತ್ತೆಯಾಗಿವೆ.
ಮೃತರನ್ನು ಹಾಸನ ಜಿಲ್ಲೆಯ ಕೆ ಆರ್ ನಗರ ತಾಲೂಕಿನ ನಿವಾಸಿಗಳಾದ ಕುಮಾರಸ್ವಾಮಿ (38), 3 ಹಾಗೂ 8 ವರ್ಷದ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.
ಏ.16ರಂದು ಬೆಂಗಳೂರಿನಿಂದ ಹೊರಟ ನಂತರ ಅವರ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆ ಕುಟುಂಬಸ್ಥರು ಏ.19ರಂದು ಕೆ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಕಾರು ಮುಳುಗಿ ಅವರು ಮೃತ ಪಟ್ಟಿರುವುದು ಬೆಳಕಿಗೆ ಬಂದಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯ | ನಿವೇಶನ ಹಾಗೂ ವಸತಿ ವಂಚಿತರ ಸಮಾವೇಶ ನಡೆಸಲು ತೀರ್ಮಾನ