ಮಂಡ್ಯ ನಗರದ ಗಾಂಧಿಭವನದಲ್ಲಿ ಚಿತ್ರಕೂಟದ ವತಿಯಿಂದ ಅ.6ರಂದು ಭಾನುವಾರ ಸಂಜೆ 4ರಿಂದ 6.30ವರೆಗೆ ಹಾಡು, ಹಸೆ, ಕವಿತೆಗಳ ಜತೆ ಮಾತುಕತೆ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.
ಡಾ.ಹೊ. ಶ್ರೀನಿವಾಸಯ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ನಾಡೋಜ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಶಿಕ್ಷಣ ತಜ್ಞ ವೂಡೇ ಪಿ. ಕೃಷ್ಣ ಉದ್ಘಾಟನೆ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ, ಲಂಕೇಶ್ ಪತ್ರಿಕೆ ಅಂಕಣಕಾರ ಬಿ. ಚಂದ್ರೇಗೌಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಮಹಾಮನೆ ಭಾಗವಹಿಸಲಿದ್ದಾರೆ.
ಸಾಮಾಜಿಕ ಚಿಂತಕ ಹೆಚ್.ಕೆ. ವಿವೇಕಾನಂದ, ಈ ದಿನ.ಕಾಮ್ ವಿಡಿಯೋ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ. ಬಸವರಾಜು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಶಿಲ್ಪಶ್ರೀ ಹರವು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ದಾರುಣ ಘಟನೆ: ಕಬ್ಬು ತುಂಬಿದ್ದ ಟ್ರಾಲಿ ಉರುಳಿ ಕಾರ್ಮಿಕ ದಂಪತಿಯ ಮಗು ಸಾವು
ಹರವು ದೇವೇಗೌಡ ಕಾರ್ಯಕ್ರಮ ನಿರೂಪಣೆ ಮಾಡಲಿರುವರು. ನಾರಾಯಣ ತಿರುಮಲಾಪುರ, ಕೆ.ಪಿ.ಮೃತ್ಯುಂಜಯ, ವಿನಯ್ ಕುಮಾರ್ ಎಂ.ಜಿ., ಸದ್ಧಾಂ ತಗ್ಗಹಳ್ಳಿ, ರಂಜಿತಾ ದರ್ಶಿನಿ ಕವಿತಾ ವಾಚನ ಮಾಡುವರು. ಇದೇ ಸಂದರ್ಭದಲ್ಲಿ ಕೊಪ್ಪದ ಸೌಹಾರ್ದ ಸಂಘಕ್ಕೆ ಚಿತ್ರಕೂಟ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
