ಹೆಚ್ಚುವರಿ ಕುಟುಂಬಗಳು ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವ ನಿವೇಶನ ಹಾಗೂ ವಸತಿ ವಂಚಿತರು 80ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದವರು ಸೇರಿದಂತೆ ರಾಜ್ಯ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಜನಶಕ್ತಿಯಿಂದ ಸಭೆ ನಡೆಸಿದ್ದು, ಡಿಸಿ, ಎಸಿ ಮತ್ತು ತಹಶೀಲ್ದಾರರನ್ನು ಭೇಟಿ ಮಾಡಿ ಏಪ್ರಿಲ್ 29ರಂದು ಎಲ್ಲ ನಿವೇಶನ ವಂಚಿತರು ಒಟ್ಟಾಗಿ ಹೋಗಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಲಾಗುವುದು ಎಂದು ತಿಳಿಸಲಾಗಿದೆ.
ಮಂಡ್ಯ ಜಿಲ್ಲೆಯ ಎಲ್ಲ ತಾಲೂಕಿನಲ್ಲಿರುವ ಭೂಮಿ ವಸತಿ ವಂಚಿತರನ್ನು ಮೇ 15ರೊಳಗೆ ಭೇಟಿ ಮಾಡಿ ಸಭೆಗಳನ್ನು ನೇಡೆಸಿ ಮೇ 15ರಂದು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಅಯ್ಕೆ ಮಾಡಿ ಒಂದು ಸಮಾವೇಶ ಹಮ್ಮಿಕೊಳ್ಳಲಾಗುವುದು. ಈ ಸಮಾವೇಶಕ್ಕೆ ಜಿಲ್ಲಾಧಿಕಾರಿ, ಎಸಿ, ತಹಶೀಲ್ದಾರರು ಹಾಗೂ ನಗರಸಭೆ ಅಯುಕ್ತರನ್ನು ಬರಮಾಡಿಕೊಳ್ಳುವುದಾಗಿ ಎಲ್ಲರೂ ತಿರ್ಮಾನಿಸಿದ್ದಾರೆ.
ಸಭೆಯ ಬಳಿಕ ಮಂಡ್ಯದ ಭೂಮಿ ವಸತಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಸಂಘಟನೆ ಸದಸ್ಯರಾಗಿ ಕೆ ವಿ ದೇವಿ, ಅಂಜಲಿ, ಸುಮತಿ, ಅಂಜನಾ, ರೇಖಾ, ಶ್ರಿವೇಣಿ, ಸ್ನೇಹ, ಆಹಿಷಾ, ಲಕ್ಷ್ಮಿ, ನಾಗರಾಜು, ಶಿವ, ಶಿವರಂಜನಿ, ನಾಗಮಣಿ, ಬನ್ನಾರಿ, ಶಿವಣ್ಣ ಸೇರಿದಂತೆ ಹಲವರು ತಾವೇ ತಮ್ಮ ಸಮಾಕ್ಷಮದಲ್ಲಿ ಸದಸ್ಯರಾಗಲು ಒಪ್ಪಿಕೊಂಡರು.

ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಸಭೆ ಮಾಡಿ ಪದಧಿಕಾರಿಗಳನ್ನು ತೊಡಗಿಸಿಕೊಳ್ಳಲಾಗುವುದು. ಜತೆಗೆ 26ರಂದು ದಾವಣಗೆರೆಯಲ್ಲಿ ನಡೆಯುವ ಸಂವಿಧಾನ ಸಂರಕ್ಷಣಾ ಪಡೆ ಸಮಾವೇಶಕ್ಕೆ ಭೂಮಿ ವಸತಿ ತಂಡದಿಂದ ಒಂದು ಬಸ್‌ನಲ್ಲಿ ಹೊರಡುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಏ.29ರಂದು ಬೃಹತ್ ರ‍್ಯಾಲಿ, ಹಕ್ಕೊತ್ತಾಯ ಸಮಾವೇಶ
ಈ ಸಂದರ್ಭದಲ್ಲಿ ಮರಿಯಪ್ಪ, ಶ್ರಿರಂಗಚಾರಿ, ರಾಜ್ಯ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಬನ್ನಾರಿ K R ಪೇಟೆ, ನಿಂಗಮ್ಮ, ಶಿವಣ್ಣ, ಕರ್ನಾಟಕ ಜನಶಕ್ತಿಯ ಜಗದೀಶ್ ನಗರಕೆರೆ, ಪೃಥ್ವಿ, ಮದ್ದೂರು, ಸಿದ್ದರಾಜು ಎಂ ಸೇರಿದಂತೆ ಹಲವು ಮುಖಂಡರು ಇದ್ದರು.