ಮಂಡ್ಯ | ಡಾ. ಬಿ. ಆರ್. ಅಂಬೇಡ್ಕರ್ ನಾಮಫಲಕ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕುಮಾರ್

Date:

Advertisements

ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಸಂಘಟನೆಗಳ ವತಿಯಿಂದ ಮಂಗಳವಾರ ಡಾ. ಬಿ. ಆರ್. ಅಂಬೇಡ್ಕರ್ ಬಡಾವಣೆಯ ನಾಮಫಲಕವನ್ನು ಜಿಲ್ಲಾಧಿಕಾರಿ ಡಾ. ಕುಮಾರ ಉದ್ಘಾಟಿಸಿದರು.

ಮಂಡ್ಯದ ಪಿಇಎಸ್ ಲಾ ಕಾಲೇಜಿನ ಬಳಿಯಿರುವ ಲ್ಯಾಂಡ್ ಅರ್ಮಿ ಸ್ಲಂನ್ನು ಡಾ. ಬಿ. ಆರ್. ಅಂಬೇಡ್ಕರ್ ಬಡಾವಣೆ ಎಂದು ನಾಮಕರಣ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ ” ಮಹಾನ್ ಚೇತನ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ನಿವಾಸಿಗಳು ವಾಸಿಸುವ ಬಡಾವಣೆಗೆ ಇಟ್ಟಿರುವುದು ಬಹಳ ಸಂತೋಷದ ವಿಚಾರ. ತಳ ಸಮುದಾಯದ ಜನರಾದ ತಾವು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಏಕೆಂದರೆ, ಸಮಾಜದಲ್ಲಿ ಸತ್ಪ್ರಜೆಯಾಗಿ ಬೆಳೆಯಲು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಪ್ರಮುಖವಾಗಿದೆ ” ಎಂದು ತಿಳಿಸಿದರು.

” ಈ ಬಡಾವಣೆಯಲ್ಲಿ ಕಳೆದ 60 ವರ್ಷಗಳಿಂದ ನೀವೆಲ್ಲರೂ ವಾಸಿಸುತ್ತಿದ್ದೀರಿ‌. ಇಲ್ಲಿನ ದಾಖಲೆಗಳಾದ ಪಡಿತರ ಚೀಟಿ. ವಿದ್ಯುತ್ ಬಿಲ್. ಅಧಾರ್ ಕಾರ್ಡ್ ಸೇರಿದಂತೆ ಅನೇಕ ದಾಖಲೆಗಳನ್ನು ಸಹ ಹೊಂದಿರುತ್ತೀರಿ. ಆದರೆ, ಅಧಿಕಾರಿಗಳು ಸಹ ಸರಿಯಾಗಿ ಕೆಲಸ ಮಾಡಿಲ್ಲ. ತಾವುಗಳು ಸಹ ಗಟ್ಟಿಯಾಗಿ ಕೇಳದೆ ಸಮಸ್ಯೆಗಳಿಗೆ ಸಿಕ್ಕಿಕೊಂಡಿರುತ್ತೀರಿ. ಈ ಸ್ಥಳವು ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದಲ್ಲಿರುವುದರಿಂದ. ಕೆಲವು ತಾಂತ್ರಿಕ ದೋಷಗಳನ್ನು ಪರಿಶೀಲಿಸಿದಾಗ ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸವಾಗಿದ್ದು ಈಗಾಗಲೆ, ತಮ್ಮ ಮನವಿಗಳನ್ನು ಪರಿಸಿಲಿಸಿ ವಸತಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿರುವುದಾಗಿ ” ಮಾಹಿತಿ ನೀಡಿದರು.

Advertisements

ನೀವುಗಳು ಸಹ ಸಂಘಟನೆಯ ಜೊತೆಯಲ್ಲಿ ನಿಮಗೆ ಸಲ್ಲ ಬೇಕಾದ ಹಕ್ಕುಗಳನ್ನು ಪಡೆದು ಕೊಳ್ಳಲು ಹೋರಾಡಬೇಕಿದೆ. ಗುರು ಮಠ, ಶ್ರಮಿಕ ನಗರದ ವಿಚಾರವಾಗಿ ಸಭೆಯ ಗಮನಕ್ಕೆ ತಂದಾಗ. ದಾಖಲಾತಿಯಲ್ಲಿ ಸರ್ಕಾರಿ ಕಟ್ಟೆ ಎಂದೇ ಇದೆ. ಆದರೆ, ಇಲ್ಲಿ ಯಾವುದೇ ಸರ್ಕಾರಿ ಕಟ್ಟೆ ಇಲ್ಲ ಬದಲಾಗಿ ಜನರು ವಾಸಿಸುತ್ತಿದ್ದಾರೆ. ದಾಖಲೆಯನ್ನು ಪರಿಶೀಲಿಸಲಾಗಿ ಇದನ್ನು ಒಂದು ವಿಶೇಷ ಪ್ರಕರಣವೆಂದು ಭಾವಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದು. ಸಾಧ್ಯವಾದಷ್ಟು ಮೂಲಭೂತ ಸೌಕರ್ಯ, ಇನ್ನಿತರ ವ್ಯವಸ್ಥೆಗಳನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ಕೊಟ್ಟರು.

ಪ್ರಗತಿಪರ ಚಿಂತಕರು ಹಾಗೂ ವಕೀಲರಾದ ಬಿ. ಟಿ. ವಿಶ್ವನಾಥ್ ಮಾತನಾಡಿ ” ಬಡವರನ್ನು ತುಳಿಯಲು ದಮನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ, ಸಂದರ್ಭದಲ್ಲಿ ತುಳಿತಕ್ಕೊಳಗಾದವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು ಆಗ ಮಾತ್ರ ತಮ್ಮ ಹಕ್ಕುಗಳನ್ನು, ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯ. ನೀವೆಲ್ಲರೂ ಒಟ್ಟಿಗೆ ಇದ್ದರೆ ನಾವು ಕೂಡ ನಿಮ್ಮ ಜೊತೆ ಗಟ್ಟಿಯಾಗಿ ನಿಲ್ಲುತ್ತೇವೆ ” ಎಂದು ಭರವಸೆ ನೀಡಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ ” ಮಂಡ್ಯದಲ್ಲಿ ಕರ್ನಾಟಕ ಜನಶಕ್ತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಶ್ರಮಿಕ ನಿವಾಸಿಗಳ ಪರವಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಕಸಿದು ಕಾರ್ಪೊರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿತ್ತು. ಆದರೆ, ನಮ್ಮ ಸಂಘಟನೆಯು ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸಿದ್ದರಿಂದ ಆ ಭೂಮಿ ಇಂದು ರೈತರಿಗೆ ಧಕ್ಕಿದೆ. ಇದು ಹೋರಾಟದ ಜಯ. “

” ಅದೇ ರೀತಿ ಮಂಡ್ಯದಲ್ಲಿ ಶ್ರಮಿಕ ನಿವಾಸಿಗಳ ವಸತಿಗಾಗಿ ಹೋರಾಟ ಮಾಡುತ್ತಿದ್ದಾಗ ಬಲಾಡ್ಯರು ನಮಗೆ ಬಹಳ ತೊಂದರೆ ಕೊಟ್ಟರು. ನಾವು ಇದಕ್ಕೆ ಬಾಗದೆ ವಿವಿಧ ಬಗೆಯ ಹೋರಾಟಗಳನ್ನು ಮಾಡಿ, ಜೈಲಿಗೂ ಸಹ ಹೋಗಿದ್ದೇವೆ. ಇಂತಹದನ್ನೆಲ್ಲ ಎದುರಿಸಿ ಇಂದು ಸ್ಲಂ ಬೋರ್ಡ್ ನಿಂದ ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಇದೆಲ್ಲಾ ಹೋರಾಟದ ಫಲ. ಇನ್ನು ಮುಂದೆ ಈ ಬಡಾವಣೆಯನ್ನು ಅಂಬೇಡ್ಕರ್ ಬಡಾವಣೆ ಎಂದು ಬಹಳ ಹೆಮ್ಮೆಯಿಂದ ಕರೆಯೋಣ. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯು ನಿಮ್ಮ ಪರವಾಗಿ, ನಿಮ್ಮ ಮೂಲಭೂತ ಹಕ್ಕು ಹಾಗೂ ಸೌಕರ್ಯಗಳಿಗಾಗಿ ಹೋರಾಡುತ್ತೇವೆ ” ಎಂದು ನಿವಾಸಿಗಳಿಗೆ ಧೈರ್ಯ ನೀಡಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಲಂಚ ಪಡೆವಾಗ ಲೋಕಾಯುಕ್ತ ಬಲೆಗೆ ಮೂವರು ನೌಕರರು

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಶಿವಲಿಂಗು, ಕಂದೇಗಾಲ ಶ್ರೀನಿವಾಸ್, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಜಿ. ಪೂರ್ಣಿಮ, ಜಾಗ್ರತ ಕರ್ನಾಟಕದ ಜಿ. ಸಂತೋಷ್, ರೇಣುಕಾ, ಪದಾಧಿಕಾರಿಗಳಾದ ನಾಗರತ್ನ, ಯಾಶೋದ, ಶಾಂತ, ಸಾವಿತ್ರಿ, ಮೀನಾ, ರೇಖಾ, ಕಾಳಯ್ಯ, ಸರೋಜಮ್ಮ, ರಾಮಕೃಷ್ಣ, ಲೋಕಿ, ಧನುಷ್, ಮುನಿಯಮ್ಮ ಸೇರಿದಂತೆ ಸ್ಥಳೀಯ ನಿವಾಸಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X