ಮಂಡ್ಯ | ಕಬ್ಬು ಅರೆಯುವಿಕೆ ವಿಚಾರ: ರೈತರು- ಎನ್‌ಎಸ್ಎಲ್ ಶುಗರ್ಸ್ ಅಧಿಕಾರಿಗಳ ನಡುವೆ ಮಾತುಕತೆ

Date:

ಮಂಡ್ಯದ ಕಬ್ಬು ಬೆಳೆಗಾರರು, ರೈತ ಮುಖಂಡರು ಹಾಗೂ ಮದ್ದೂರು ತಾಲೂಕು ಕೊಪ್ಪ ಎನ್‌ಎಸ್‌ಎಲ್ ಶುಗರ್ಸ್ ಸಕ್ಕರೆ ಕಾರ್ಖಾನೆ ಅಧಿಕಾರಿಗಳು 2024-25 ಸಾಲಿನ ಕಬ್ಬು ಅರೆಯುವಿಕೆ ವಿಚಾರದಲ್ಲಿ ಸಭೆ ಸೇರಿದ್ದರು.

- Advertisement -

ಈ ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಸೊ ಸಿ ಪ್ರಕಾಶ್, ಈ ಬಾರಿ ಕಬ್ಬು ಬೆಳೆಗಾರರು ತುಂಬಾ ಸಂಕಷ್ಟದಲ್ಲಿದ್ದು ಕಾರ್ಖಾನೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಲು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಕಬ್ಬು ಅರೆಯುವಿಕೆಯ 15 ದಿನಗಳ ಒಳಗಾಗಿ ಕಬ್ಬು ಹಣವನ್ನು ಪಾವತಿ ಮಾಡಬೇಕು, ಎಫ್‌ಆರ್‌ಪಿ ದರ 3151 ರೂ ಜೊತೆಗೆ ಪ್ರೋತ್ಸಾಹ ಧನ 250 ಕೊಡಬೇಕು, ಬಿತ್ತನೆ ಕಬ್ಬನ್ನು ಈ ಬಾರಿ ರೈತರಿಗೆ ಉಚಿತವಾಗಿ ಹಂಚಿಕೆ ಮಾಡಬೇಕು ಮತ್ತು ರಸಗೊಬ್ಬರ ಮತ್ತು ವ್ಯವಸಾಯದ ಖರ್ಚಿಗೆ ಮುಂಗಡ ಹಣ ಎಕರೆಗೆ 40,000 ರೂ.ಗಳನ್ನು ಪಾವತಿಸಬೇಕು. ಕಬ್ಬು ಕಟಾವು ನಂತರ ಅವಧಿ ಸಾಲದ ರೂಪದಲ್ಲಿ ಕಬ್ಬು ಸರಬರಾಜು ಮಾಡಿದ ನಂತರ ಹಣ ಹಿಡಿದುಕೊಳ್ಳುವಂತೆ ಆಗ್ರಹಿಸಿದರು.

mandya 7

ಕಬ್ಬು ಕಟಾವು ಮಾಡುವ ಹಂತದಲ್ಲಿ ಕಾರ್ಖಾನೆ ಸಿಬ್ಬಂದಿ ನಿಗಾ ವಹಿಸಬೇಕು, ಒಂದು ಟನ್ ಕಬ್ಬಿಗೆ ನಾನೂರು ರೂಪಾಯಿ ಕಟಾವು ದರ ನಿಗದಿಪಡಿಸಬೇಕು, ಪ್ರೆಸ್‌ಮಡ್ ಮತ್ತು ಬೂದಿಯನ್ನು ಕಬ್ಬು ಬೆಳೆಗಾರರಿಗೆ ಉಚಿತವಾಗಿ ಕೊಡಬೇಕು, ರೈತರ ಜಮೀನುಗಳಿಗೆ ಹೋಗಲು ಬಂಡಿ ದಾರಿ ಅಭಿವೃದ್ಧಿ ಮಾಡಿಸಲು ಒತ್ತು ಕೊಡಬೇಕು ಎಂಬುದು ರೈತರ ಹಕ್ಕೊತ್ತಾಯವಾಗಿತ್ತು.

ಕಬ್ಬು ಬೆಳೆಗಾರರಿಗೆ ಉಚಿತವಾಗಿ ಅರ್ಧ ಕೆಜಿ ಸಕ್ಕರೆ ಕೊಡಬೇಕು ಹಾಗೂ ತಿಂಗಳಲ್ಲಿ ಎರಡು ಬಾರಿ ಸಕ್ಕರೆ ವಿತರಿಸಬೇಕು, ಆಸಕ್ತ ರೈತರಿಗೆ ಅಂತಾರಾಜ್ಯ ಅಧ್ಯಯನದ ಪ್ರವಾಸ ಮಾಡಿಸಬೇಕು. ಹೀಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ನಡುವೆ ಅನೇಕ ವಿಷಯಗಳ ಚರ್ಚೆ ಆಗಿದ್ದು, ಆಡಳಿತ ಮಂಡಳಿಯ ಮುಂದೆ ರೈತರ ಬೇಡಿಕೆ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಲು ಬಗ್ಗೆ ಅಧಿಕಾರಿಗಳಲ್ಲಿ ಒತ್ತಾಯಿಸಿದರು.

ಇದನ್ನು ಓದಿದ್ದೀರಾ? ಚಿತ್ರದುರ್ಗ | ಶಸ್ತ್ರಚಿಕಿತ್ಸೆಗಾಗಿ 4 ಸಾವಿರ ಲಂಚ ಪಡೆದಿದ್ದ ಸರ್ಜನ್ ಡಾ. ಸಾಲಿ ಮಂಜಪ್ಪ ಅಮಾನತು

ಸಭೆಯಲ್ಲಿ ರೈತ ಮುಖಂಡರಾದ ಪ್ರಭುಲಿಂಗ ರಾಮಲಿಂಗೇಗೌಡ, ಪಣ್ಣೆದೊಡ್ಡಿ ವೆಂಕಟೇಶ್, ಶಿವಲಿಂಗಯ್ಯ, ನಂಜುಂಡಯ್ಯ ನಾಗರಾಜ್, ಲಿಂಗರಾಜ್, ಕೊಪ್ಪ ಯೋಗಾನಂದ, ತಮ್ಮಯ್ಯ, ದೇಶಹಳಿ ಮಹೇಶ್, ಸತೀಶ್, ರಾಮಕೃಷ್ಣ, ರಾಮಸ್ವಾಮಿ, ಜಗದೀಶ್ ಮುದ್ದುಂಗೆರೆ, ಕೆ.ಜಿ. ಉಮೇಶ್, ಕಾರ್ಖಾನೆಯ ಡಿಜಿಎಂ ರಾಮಚಂದ್ರರಾವ್, ಪರಿಮಳ ರಂಗನ್, ಗೌರಿ ಪ್ರಕಾಶ್, ಸೋಮಶೇಖರ್, ತಮ್ಮಯ್ಯ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...