ಲೋಕಸಭಾ ಚುನಾವಣಾ ಹಿನ್ನೆಲೆ, ಗಸ್ತು ತಿರುಗುತ್ತಿದ್ದ ಕೆ.ಆರ್. ಪೇಟೆ ಪೊಲೀಸರು 25,000 ರೂ. ಬೆಲೆಬಾಳುವ ಸುಮಾರು 58 ಲೀಟರ್ ವಿವಿಧ ಮಾದರಿಯ ಅಕ್ರಮ ಮಮದ್ಯ ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಜಿಲ್ಲಾ ಲೋಕಸಭಾ ಚುನಾವಣೆ ಹಿನ್ನೆಲೆ ಕೆ.ಆರ್.ಪೇಟೆ ಪೊಲೀಸರು ಗಸ್ತನ್ನು ಚುರುಕುಗೊಳಿಸಿದ್ದು, ದಿ.30ರಂದು ಸಂಜೆ 5:45 ಸಮಯದಲ್ಲಿ ಸಂತೆಬಾಚಹಳ್ಳಿ ಹೋಬಳಿಯ ಚೋಟ್ಟನಹಳ್ಳಿ ಗೇಟ್‌ನ ಬಳಿ ಇರುವ ಚಲುವೇಗೌಡ ಎನ್ನುವವರ ಪೆಟ್ಟಿಗೆ ಅಂಗಡಿ ಬಳಿಯಲ್ಲಿ ವಿವಿಧ ಮಾದರಿಯ ಅಕ್ರಮ ಮದ್ಯವನ್ನು ಮಾರಾಟ ಮಾಡಲು ಸಂಗ್ರಹ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಆಧಾರಿಸಿ ಕೆ.ಆರ್. ಪೇಟೆ ಪೊಲೀಸರು ದಾಳಿ ಮಾಡಿದ್ದರು.
ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಸುಮರಾಣಿ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಜೀಶನ್, ಉಮೇಶ್ ಹಾಗೂ ಪ್ರದೀಪ ಸಹಕಾರ ದೊಂದಿಗೆದಾಳಿ ಮಾಡಿದ ಅವರು ದಾಳಿಯಲ್ಲಿ ವಿವಿಧ ಮಾದರಿಯ ಸುಮಾರು 58 ಲೀಟರ್ ನ ಸುಮಾರು 25,000 ರೂ.ಗಳ ಮದ್ಯವನ್ನು ವಶ ಪಡಿಸಿಕೊಂಡಿದ್ದು, ಈ ಪ್ರಕರಣ ಕುರಿತು ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಪತ್ತೆಗೆ ಪಟ್ಟಣ ಪೊಲೀಸರು ಬಲೆ ಬೀಸಿದ್ದಾರೆ.
