ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೋಟ ಹಾಕಿಸುವುದಾಗಿ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ.
ಬಾಡೂಟವನ್ನು ಮದ್ಯ ಮತ್ತು ತಂಬಾಕಿನ ಜೊತೆ ಸಮೀಕರಿಸಿ ಕಸಾಪ ನಿಷೇದ ಹೇರಿತ್ತು. ಈ ತಾರತಮ್ಯದ ವಿರುದ್ಧ ಮಂಡ್ಯದ ಪ್ರಗತಿಪರರು ಸತತವಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. ಮಾಂಸಾಹಾರ ನೀಡುವ ಮೂಲಕ ಆಹಾರ ಅಸಮಾನತೆಯನ್ನು ಹೋಗಲಾಡಿಸಬೇಕು ಎಂಬುದು ಹೊರಟಗಾರರ ಬೇಡಿಕೆಯಾಗಿತ್ತು.
ಈ ಹೋರಾಟಕ್ಕೆ ಮಣಿದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಗುರುವಾರ ಕರೆದ ಮಾತುಕತೆ ವೇಳೆ ಬಾಡೂಟ ಹಾಕಿಸುವ ಭರವಸೆ ನೀಡಿದ್ದಾರೆ. ಸರ್ಕಾರ ಅಸಮಾನತೆಯ ವಿರುದ್ಧ ಇದ್ದೇವೆ ಎಂಬ ಸಂದೇಶ ನೀಡಿದ್ದಾರೆ. ಈ ಘಟನೆ ಮಂಡ್ಯದ ಜನತೆಯ ಸ್ವಾಭಿಮಾನದ ಹೋರಾಟದ ಪ್ರತಿಬಿಂಬವಾಗಿದೆ.
