ಲಕ್ಷಾಂತರ ಕ್ಯೂಸೆಕ್ ಕಾವೇರಿ ನೀರು ಸುಮ್ಮನೆ ವ್ಯರ್ಥವಾಗಿ ಸಮುದ್ರದ ಒಡಲು ಸೇರುತ್ತಿರುವುರಿಂದ ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ರೂಪಿಸಲು ರಾಜ್ಯದ ಎಲ್ಲ ಜನಪ್ರತಿನಿಧಿಗಳು ಕೇಂದ್ರದೊಂದಿಗೆ ಚರ್ಚೆ ನಡೆಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಮೋಹನ್‌ಕುಮಾರ್ ಪಾಪು ಆಗ್ರಹಿಸಿದ್ದಾರೆ.
ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ರಾಜ್ಯದ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು, ಮಂಡ್ಯ ಸಂಸದರೂ ಆದ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು, ಪಕ್ಷಾತೀತವಾಗಿ ಎಲ್ಲಾ ಪಕ್ಷದ ಸಂಸದರು, ಕೇಂದ್ರ ಸಚಿವರುಗಳು, ಶಾಸಕರುಗಳನ್ನು ಒಳಗೊಂಡಂತೆ ಪ್ರಧಾನಮಂತ್ರಿ ಮೋದಿಯವರ ಜೊತೆ ಸುದೀರ್ಘವಾಗಿ ಚರ್ಚಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಮೋಹನ್‌ಕುಮಾರ್ ಉ.ಕಿರಂಗೂರು ಪಾಪು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ರಾಜ್ಯದ ಹಿತ ಕಾಪಾಡಬೇಕಾದ ಸರ್ಕಾರಗಳು ಕಾವೇರಿ ಉಳಿವಿಗಾಗಿ ಕೆಆರ್‌ಎಸ್ ಅಣೆಕಟ್ಟಿನ ಜಲಾಶಯ ತುಂಬಿ ಲಕ್ಷಾಂತರ ಕ್ಯೂಸೆಕ್ ನೀರು ಕಾವೇರಿ ನದಿಯಿಂದ ಹೊರಹೋಗುತ್ತಿದೆ. ಆ ನೀರು ಪೋಲಾಗದಂತೆ ತಡೆಯಲು ಮೇಕೆದಾಟು ಯೋಜನೆ ತುಂಬಾ ಅನಿವಾರ್ಯವಾಗಿದೆ ಎಂದರು.
ತಮಿಳುನಾಡು ಸರ್ಕಾರ ಜಲಾಶಯದಲ್ಲಿ ನೀರು ಇಲ್ಲದಿದ್ದರೂ ನೀರು ಬಿಡಿ ಬಿಡಿ ಎಂದು ಕ್ಯಾತೆ ತೆಗೆದು ರಾಜ್ಯಕ್ಕೆ ಅನ್ಯಾಯ ಮಾಡುತ್ತಾ ಬಂದಿದೆ. ಈಗಲಾದರೂ ಮೇಕೆದಾಟು ಯೋಜನೆಯನ್ನು ರೂಪಿಸಿ ಲಕ್ಷಾಂತರ ಕ್ಯೂಸೆಕ್ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಿ ಅದನ್ನು ರೈತರ ಹಿತಕ್ಕಾಗಿ, ಪ್ರಾಣಿಪಕ್ಷಿಗಳು, ಜನಸಾಮಾನ್ಯರ ಕುಡಿಯುವ ನೀರಿಗಾಗಿ ಸಂಕಷ್ಟದ ಸಮಯದಲ್ಲಿ ಅಮೂಲ್ಯವಾದ ಜಲ ಬಳಕೆಯಾಗುತ್ತದೆ. ಆದ್ದರಿಂದ ತುಂಬಿ ಹರಿಯುತ್ತಿರುವ ಕಾವೇರಿ ನೀರು ಸಮುದ್ರದ ಪಾಲಾಗುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾವೇರಿ ನೀರಿನ ಸಮಸ್ಯೆ ಹಾಗೂ ಮೇಕೆದಾಟು ಯೋಜನೆ ಬಗ್ಗೆ ಭರವಸೆ ನೀಡಿದ್ದ ಕಾವೇರಿ ಕೊಳ್ಳದ ಸಂಸದರೂ, ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿರವರು ಕೊಟ್ಟ ಮಾತನ್ನು ಮೋದಿಯವರನ್ನು ಮನವೊಲಿಸಿ ಮಂಡ್ಯ ಜಿಲ್ಲೆಯ ರೈತರ, ಜನಸಾಮಾನ್ಯರ ಹಿತ ಕಾಪಾಡಲು ಮುಂದಾಗುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಹಣ ದುರುಪಯೋಗ : ನನ್ನಿವಾಳ ಗ್ರಾ.ಪಂ. ಪಿಡಿಒ ಅಮಾನತು
ಸಮಸ್ಯೆ ಇತ್ಯರ್ಥಪಡಿಸಲು ಮುಂದಾದರೆ ರಾಜ್ಯದ ರೈತರು ಅವರ ಪರ ನಿಲ್ಲುತ್ತಾರೆ. ಇಂಥ ಸಮಯದಲ್ಲಿ ಮೇಲ್ಕಂಡವರು ಯಾವುದೇ ತಾರತಮ್ಯ ಮಾಡದೆ ರಾಜ್ಯದ ರೈತರ ಹಿತಕ್ಕಾಗಿ ಹಾಗೂ ಕಾವೇರಿ ಉಳಿವಿಗಾಗಿ ಒಗ್ಗೂಡಿ ಶ್ರಮಿಸುವಂತೆ ಪಾಪು ಮತ್ತೊಮ್ಮೆ ಪಾಪು ಕಳಕಳಿ ವ್ಯಕ್ತಪಡಿಸಿದ್ದಾರೆ.
