ಮಂಡ್ಯ ತಾಲೂಕಿನ ಮಂಗಲದ ನೆಲದನಿ ಬಳಗದ ವತಿಯಿಂದ ನಿರ್ದಿಗಂತ ಪ್ರಸ್ತುತಪಡಿಸುವ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನವು ಅ.8ರಂದು ಸಂಜೆ 6.15 ಗಂಟೆಗೆ ಮಂಡ್ಯ ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರ ನಡೆಯಲಿದೆ.
ಶಕೀಲ್ ಅಹ್ಮದ್ ನಿರ್ದೇಶನ, ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ನಾಟಕ ಮೂಡಿ ಬಂದಿದೆ. ಪ್ರವೇಶ ಉಚಿತವಾಗಿದ್ದು, ಮಂಡ್ಯ ಜಿಲ್ಲೆಯ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಣೆ ಮಾಡುವಂತೆ ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

