‘ಟಿಕೆಟ್ ಕೊಡಿ ಅಜ್ಜಿ’ ಎಂದು ಕೇಳಿದ್ದಕ್ಕೆ ಸಿಟ್ಟಾದ ಮಹಿಳಾ ಕಂಡಕ್ಟರ್ ಒಬ್ಬರು ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿರುವ ಘಟನೆ ಮಂಡ್ಯದ ಭಾರತಿನಗರ ಬಸ್‍ನಲ್ಲಿ ನಡೆದಿದೆ.
ಭಾರತೀನಗರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿ ಕಾವ್ಯಶ್ರಿ ಎಂಬಾಕೆ ಟಿಕೆಟ್ ಪಡೆಯುವಾಗ ಮಹಿಳಾ ಕಂಡಕ್ಟರ್ ಸೌಭಾಗ್ಯ ಎಂಬುವವರಿಗೆ ‘ಅಜ್ಜಿ’ ಎಂದು ಕರೆದಿದ್ದಾಳೆ. ಪ್ರಯಾಣಿಕರು ಹೆಚ್ಚಿದ್ದ ಕಾರಣ ಅವರ ಕಣ್ಣು ಕೆಂಪಗಾಗಿದೆ. ‘ನಿನಗೆ ನಾನು ಅಜ್ಜಿಯಂತೆ ಕಾಣುತ್ತೇನಾ?’ ಎಂದು ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದಿದ್ದಾರಂತೆ.
ಮನನೊಂದ ವಿದ್ಯಾರ್ಥಿನಿ ಕಾವ್ಯಶ್ರೀ ಸ್ಥಳದಲ್ಲಿಯೇ ಬಸ್ ನಿಲ್ಲಿಸುವಂತೆ ಹೇಳಿ ನೇರವಾಗಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಸೌಭಾಗ್ಯ ವಿರುದ್ಧ ದೂರು ದಾಖಲಿಸಿದ್ದಾಳೆ.
“ಬಸ್‍ನಲ್ಲಿ ಪ್ರಯಾಣಿಕರು ಹೆಚ್ಚಿದ್ದ ಕಾರಣ ನನಗೆ ಮುಜುಗರವಾಗುವಂತೆ ವಿದ್ಯಾರ್ಥಿನಿ ನಡೆದುಕೊಂಡಿದ್ದಾಳೆ. ನನಗೆ ಅಜ್ಜಿ ಎಂದು ಕರೆಯುವ ಮೂಲಕ ಅವಮಾನ ಮಾಡಿದ್ದಾಳೆ. ಹೀಗಾಗಿ ನಾನು ಆಕೆಯ ಕಪಾಳಕ್ಕೆ ಹೊಡೆದೆ” ಎಂದು ನಿರ್ವಾಹಕಿ ಸೌಭಾಗ್ಯ ತಿಳಿಸಿರುವುದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಬಾಲಕನಿಗೆ ಪೂರ್ಣ ಟಿಕೆಟ್; ಬಡ್ಡಿ ಸಮೇತ್ ಹಣ ಹಿಂದಿರುಗಿಸಲು ಕಂಡಕ್ಟರ್‌ಗೆ ಆದೇಶ
ವಿದ್ಯಾರ್ಥಿನಿ ಕಾವ್ಯಶ್ರೀ ಸಂಬಂಧಿಕರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಠಾಣೆಯ ಎದುರು ಬಂದು ಪ್ರತಿಭಟನೆ ನಡೆಸಿದ್ದು, ನಿರ್ವಾಹಕಿ ಸೌಭಾಗ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ನಿರ್ವಾಹಕಿಯ ಮಾನಸಿಕ ಸ್ಥಿತಿ ಸರಿಯಿಲ್ಲ ಎನಿಸುತ್ತದೆ. ಹಲವಾರು ಬಾರಿ ನಾನು ಈ ನಿರ್ವಾಹಕಿಯ ವರ್ತನೆಯನ್ನು ನೋಡಿದ್ದೇನೆ.
ಯಾವುದೇ ಪ್ರಯಾಣಿಕರೊಂದಿಗೂ ಸರಿಯಾಗಿ ಗುರವಾಯುತವಾಗಿ ವರ್ತಿಸುವುದಿಲ್ಲ, ಹಾಗಾಗಿ ಇಲಾಖೆ ಈ ನಿರ್ವಾಹಕಿಯ ಬಗೆಗೆ ಸೂಕ್ತವಾದ ಕ್ರಮ ಜರುಗಿಸಬೇಕು.