ಬೆಂಗಳೂರು: ಕೆ.ಆರ್. ಪೇಟೆ ತಾಲೂಕು ಕತ್ತರಘಟ್ಟದಲ್ಲಿ ಜಮೀನು ವಿಷಯದಲ್ಲಿ ಜಯಕುಮಾರ್ ಎಂಬ ದಲಿತ ಯುವಕನನ್ನು ಹುಲ್ಲಿನ ಮೆದೆಯೊಳಗೆ ಹಾಕಿ ದಹಿಸಿರುವುದನ್ನು ಡಿವೈಎಫ್ಐ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.
“ಕೊಲೆ ಮಾಡಿದ ಆರೋಪಿ ಸಮಾಜಘಾತುಕ ರೌಡಿ ಶೀಟರ್ ಅನಿಲ್ ಕುಮಾರ್ ತಪ್ಪಿಸಿಕೊಂಡಿದ್ದಾನೆ. ಕೊಲೆಗಡುಕರನ್ನು ಪೊಲೀಸರು ಇನ್ನೂ ಬಂಧಿಸದಿರುವುದು ಕಾಣದ ಕೈಗಳ ಕೈವಾಡವು ಈ ಪ್ರಕರಣದಲ್ಲಿ ಸ್ಪಷ್ಟವಾಗಿದೆ, ಆದ್ದರಿಂದ ಈ ಕೊಲೆಯ ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ತಪಿತಸ್ಥ ಕೊಲೆಗಡುಕರಿಗೆ ಕಠಿಣ ಶಿಕ್ಷೆ ನೀಡಬೇಕು” ಎಂದು ಒತ್ತಾಯಿಸಿದೆ.
ಜಯಕುಮಾರ ಪತ್ನಿ ಇದು ಕೊಲೆ ಎಂದು ದೂರು ನೀಡಿದ್ದರೂ ಪೊಲೀಸರು ಆತ್ಮಹತ್ಯೆ ಎಂದು ಕೇಸು ದಾಖಲಿಸಿಕೊಂಡಿರುವುದು ಖಂಡನೀಯ. ಈ ಗಂಭೀರ ಪ್ರಕರಣವನ್ನು ಆತ್ಮಹತ್ಯೆ ಕೇಸ್ ಬದಲಾಗಿ ಕೊಲೆ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದೆ.