ಮಂಗಳೂರು ನಗರದ ಸ್ಮೈಲ್ ಫೌಂಡೇಶನ್ ಕುಲಾಯಿ ಎಂಬ ಸಂಸ್ಥೆ ಕಳೆದ 7 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಹಾಗೂ ರಕ್ತದಾನ ಶಿಬಿರದ ಮೂಲಕ ಜಿಲ್ಲೆಯಲ್ಲಿ ಮೆಚ್ಚುಗೆ ಗಳಿಸಿಕೊಂಡಿದ್ದು, 7ನೇ ವರ್ಷದ ಅಂಗವಾಗಿ ಬ್ಲಡ್ ಡೋನಾರ್ಸ್ ಮಂಗಳೂರು ಹಾಗೂ ಸ್ಟೈಲ್ ಫೌಂಡೇಶನ್ ಕುಲಾಯಿ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ಒಟ್ಟು 103 ರಕ್ತದಾನಿಗಳು ಭಾಗವಹಿಸಿ ಜೀವದಾನಿ ಆಗುವುದರ ಜೊತೆಗೆ ಸಂಸ್ಥೆಯ ಜೊತೆ ಕೈ ಜೋಡಿಸಿದ್ದಾರೆ.
ಸಮಾಜಮುಖಿ ಕೆಲಸದ ಮೂಲಕ ಸಂಸ್ಥೆಯು ಬಡವರ ಪಾಲಿನ ಆಶಾಕಿರಣವಾಗಿದೆ. ಬಡವರಿಗೆ ರೇಷನ್ ಕಿಟ್, ರಕ್ತದ ಕೊರತೆ ಉಂಟಾದಾಗ ಸಂಸ್ಥೆಯ ಸದಸ್ಯರ ಮೂಲಕ ರಕ್ತದಾನ, ಬಡ ಶಾಲಾ ಮಕ್ಕಳಿಗೆ ಬೇಕಾದ ವ್ಯವಸ್ಥೆ, ಹೀಗೆ ಹಲವಾರು ಸಾಮಾಜಿಕ ಸೇವೆಯ ಮೂಲಕ ಸ್ಮೈಲ್ ಫೌಂಡೇಶನ್ ಸಂದೇಶ ಸಾರಿದೆ.

ಮಂಗಳೂರಿನ ಹಲವಾರು ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಉಂಟಾಗಿದ್ದು ಇದನ್ನು ಮನಗಂಡ ಸ್ಮೈಲ್ ಫೌಂಡೇಶನ್ ಸಂಸ್ಥೆಯ ಅಡ್ಮಿನ್ ಬಳಗ ಹಾಗೂ ಸದಸ್ಯರ ಸಹಾಯದಿಂದ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಎ. ಜೆ. ಆಸ್ಪತ್ರೆ, ಫಾದರ್ ಮುಲ್ಲರ್ಸ್ ಆಸ್ಪತ್ರೆ, ಹಾಗೂ ಕೆ. ಎಮ್. ಸಿ ಆಸ್ಪತ್ರೆ ಅತ್ತಾವರ ಈ ಆಸ್ಪತ್ರೆಗಳಿಗೆ ಸದಸ್ಯರನ್ನು ಕಳಿಸಿ ರಕ್ತದಾನ ಮಾಡಿಸಿ ರೋಗಿಗಳ ಪಾಲಿಗೆ ಜೀವದಾನಿಯಾದರು. ಒಟ್ಟು 103 ಯೂನಿಟ್ ರಕ್ತವನ್ನು ದಾನ ಮಾಡಿದ್ದಾರೆ.
