ಮಂಗಳೂರಿನಲ್ಲಿ ಕ್ವಾರಿ ಮತ್ತು ಬಿಲ್ಡರ್ ಉದ್ಯಮ ನಡೆಸುತ್ತಿದ್ದ ಉದ್ಯಮಿಯೋರ್ವರು ಅಪಾರ್ಟ್ ಮೆಂಟ್‌ನ 17ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಮೋಹನ್ ಅಮೀನ್ (66) ಎಂಬವರು ನಗರದ ಬೆಂದೂರುವೆಲ್ ನ ಅಟ್ಲಾಂಟಿಕ್ ಅಪಾರ್ಟೆಂಟಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡವರು.
ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಹೊರಗೆ ಹೋಗಿದ್ದ ಮೋಹನ್ ಅಮೀನ್ ತಮ್ಮ ಮನೆ ಇರುವ ಅಟ್ಲಾಂಟಿಕ್ ಅಪಾರ್ಟೆಂಟಿಗೆ ಬಂದು 17ನೇ ಮಹಡಿಯಿಂದ ಹೊರಕ್ಕೆ ಹಾರಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಜಯವಾಹಿನಿ ಎಂಬ ಹೆಸರಿನ ಟಿಪ್ಪರ್, ಕ್ವಾರಿ, ಜಲ್ಲಿ ಕಲ್ಲು ಬಿಸಿನೆಸ್ ಹೊಂದಿದ್ದ ಮೋಹನ್ ಅಮೀನ್, ನಗರದ ಮಲ್ಲಿಕಟ್ಟೆಯಲ್ಲಿ ಕಚೇರಿ ಹೊಂದಿದ್ದರು. ಮಂಗಳೂರು ಗುರುಪುರ ಸಮೀಪದ ಪರಾರಿ ಎಂಬ ಗ್ರಾಮದ ಮೂಲದವರಾದ ಮೋಹನ್ ಅಮೀನ್, ಮಂಗಳೂರು, ವಾಮಂಜೂರು ಭಾಗದಲ್ಲಿ ವ್ಯವಹಾರ ಹೊಂದಿದ್ದರು.
ಸಾವಿಗೂ ಮುನ್ನ ಡೆತ್ ಟ್ ಬರೆದಿಟ್ಟಿದ್ದು, ‘ನನ್ನ ಸಾವಿಗೆ ನಾನೇ ಕಾರಣ. ಪತ್ನಿ ಮಕ್ಕಳಿಗೆ ಸಾರಿ’ ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.