ಜನವರಿ 16(ಗುರುವಾರ)ದಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದ ಅಡ್ಯಾರ್ ಪ್ರದೇಶದಲ್ಲಿರುವ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಪೋಷಕರಿಗೆ ‘ಪೇರೆಂಟಿಂಗ್’ನ ವಿಷಯದಲ್ಲಿ ತರಬೇತಿ ನೀಡಲು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅಂದು ಸಂಜೆ 6:30ಕ್ಕೆ ಶಾಲೆಯ ಬರಾಕಾ ಸಭಾಂಗಣದಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಪೇರೆಂಟಿಂಗ್‌ಗೆ ಸಂಬಂಧಿಸಿದ ಮೂರು ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಬರಕ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲ, ಅಂತಾರಾಷ್ಟ್ರೀಯ ಭಾಷಣಕಾರ ಶರ್ಫುದ್ದೀನ್ ಬಿ.ಎಸ್ ಅವರು ‘ನಿಮ್ಮ ಮಗುವನ್ನು ಶೈಕ್ಷಣಿಕವಾಗಿ ಉತ್ಕೃಷ್ಟರಾಗಲು ಹೇಗೆ ಪ್ರೇರೇಪಿಸುವುದು’ ಎಂಬ ಕುರಿತು ಮಾತನಾಡಲಿದ್ದಾರೆ. ಮತ್ತೊಬ್ಬ ಪ್ರಸಿದ್ಧ ಪ್ರೇರಕ ಭಾಷಣಕಾರ ಮತ್ತು ಹೋಪ್ ಫೌಂಡೇಶನ್‌ನ ಅಧ್ಯಕ್ಷ ಸೈಫ್ ಸುಲ್ತಾನ್ ‘ಆಧುನಿಕ ಯುಗದಲ್ಲಿ ಮಕ್ಕಳ ಪೋಷಣೆ ಹೇಗೆ?’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜಿನ ಇಸ್ಲಾಮಿಕ್ ವಿಭಾಗದ ಪ್ರಾಂಶುಪಾಲ ಮತ್ತು ಖತೀಬರಾದ ಮೊಹಮ್ಮದ್ ಹನೀಫ್ ಅವರು ‘ಇಸ್ಲಾಮಿಕ್ ಮೌಲ್ಯಗಳನ್ನು ಅನುಸರಿಸಲು ನಿಮ್ಮ ಮಕ್ಕಳಿಗೆ ತರಬೇತಿ ನೀಡಲು ಪೋಷಕರಲ್ಲಿ ಇರಬೇಕಾದ ಕೌಶಲ್ಯ ‘ ಎಂಬ ಕುರಿತು ಮಾತನಾಡಲಿದ್ದಾರೆ. ತಜ್ಞರಿಂದ ಈ ವಿಷಯದ ಬಗ್ಗೆ ಹೆಚ್ಚಿನ ಒಳನೋಟವನ್ನು ಪಡೆಯಲು ಕೊನೆಯಲ್ಲಿ ಪ್ರಶ್ನೋತ್ತರದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಸುವಿನ ಹರಿದ ಕೆಚ್ಚಲಿನಿಂದ ದ್ವೇಷದ ವಿಷ ಹಿಂಡಲು ಹೊರಟವರು…
ನೋಂದಣಿಯ ಆಧಾರದ ಮೇಲೆ ತಂದೆ ತಾಯಿಗಳಿಬ್ಬರೂ ಇದರಲ್ಲಿ ಹಾಜರಾಗಬಹುದು. ತಜ್ಞರಿಂದ ಈ ವಿಷಯದ ಬಗ್ಗೆ ಹೆಚ್ಚಿನ ಒಳನೋಟವನ್ನು ಪಡೆಯಲು ಕೊನೆಯಲ್ಲಿ ಪ್ರಶ್ನೋತ್ತರದ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ತಮ್ಮ ಹಾಜರಿಯನ್ನು ಖಚಿತಪಡಿಸಿಕೊಳ್ಳಲು ನೀಡಲಾಗಿರುವ ಫಾರ್ಮ್ ಅನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಲು ಪ್ರಕಟನೆ ತಿಳಿಸಿದೆ.
ಗೂಗಲ್ ಫಾರ್ಮ್ ಲಿಂಕ್ ಇಲ್ಲಿದೆ.
https://forms.gle/mKxsr4A1UGrpo7DJ9
