ಮಂಗಳೂರು | ಕರಾವಳಿಯ ಇತಿಹಾಸವನ್ನು ಕಟ್ಟಿದವರು ಮಿಷನರಿಗಳು; ಪ್ರೊ. ಪುರುಷೋತ್ತಮ ಬಿಳಿಮಲೆ

Date:

Advertisements

ಕರಾವಳಿಯ ಇತಿಹಾಸ ಬರೆದವರಲ್ಲಿ ಪ್ರಮುಖ ಪಾತ್ರವನ್ನು ಬಿ.ಎ ಸಾಲೆತ್ತೂರು, ಗೋವಿಂದ ಪೈ ಮೊದಲಾದವರುಗಳು ಹೊಂದಿದ್ದಾರೆ. ಆದರೆ, ನಮ್ಮ ಕರಾವಳಿಯ ಇತಿಹಾಸವನ್ನು ಕಟ್ಟಿದವರು ಯಾರು ಎಂಬ ಪ್ರಶ್ನೆ ಬಂದಾಗ ಅದರಲ್ಲಿ ಮೊದಲ ಸ್ಥಾನವನ್ನು ಪಡೆಯುವುದು ಬಾಸೆಲ್ ಮಿಷನರಿಗಳು. ಕರಾವಳಿಗೆ ಒಂದು ಚಲನೆಯನ್ನು ಕೊಟ್ಟಿದ್ದು ಮಿಷನರಿಗಳು ಎಂದು ಹಿರಿಯ ಚಿಂತಕ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಮಂಗಳೂರಿನಲ್ಲಿ ನಡೆಯುತ್ತಿರುವ ಡಿವೈಎಫ್‌ಐನ 12ನೇ ರಾಜ್ಯ ಸಮ್ಮೇಳನದ ಎರಡನೇಯ ದಿನ ನಡೆದ ʼಕರಾವಳಿ ಕಟ್ಟಿದ ಬಗೆʼ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪಾರಂಪರಿಕತೆಯನ್ನು ಸಾರ್ವತ್ರಿಕಗೊಳಿಸಿದ ಕ್ರಾಂತಿ ಕರಾವಳಿಯಲ್ಲಿ ಮಿಷನರಿಗಳು ಮಾಡಿವೆ. ಈ ಮಿಷನರಿಗಳಿಗೆ ನಾವೆಲ್ಲರೂ ಆಭಾರಿಯಾಗಿರಬೇಕು ಎಂದರು.

ನಮ್ಮಲ್ಲಿರುವ ಮಠಗಳು ಸಾವಿರಾರು ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತದೆ. ಆದರೆ, ನಮ್ಮ ಕರಾವಳಿಯಲ್ಲಿ ಮೊದಲ ಬಾರಿಗೆ ಮುದ್ರಣಾಲಯವನ್ನು ಈ ಮಠದವರು ಹಾಕಿದ್ದಾರಾ? ಅದಕ್ಕಾಗಿ ಮಿಷನರಿಗಳು ಬರಬೇಕಾಯಿತು. ಈ ನಿಟ್ಟಿನಲ್ಲಿ ನಾವು ಮಿಷನರಿಗಳ ಕೊಡುಗೆಯನ್ನು ನಾವು ಸ್ಮರಿಸಬೇಕು ಎಂದು ಶ್ಲಾಘಿಸಿದರು.

Advertisements

ನಾನು ಕೋಮುವಾದ ಮಾಡುತ್ತೇನೆ, ಅದರಲ್ಲಿ ತಪ್ಪೇನಿಲ್ಲ, ಅದುವೇ ಸರಿ ಎನ್ನುವವರ ನಡುವೆ ಕೋಮುವಾದ ಮಾಡುವುದು ತಪ್ಪು ಎನ್ನುವ ಒಬ್ಬರು ಇದ್ದರೆ ಸಾಕು ಎಂದ ಬಿಳಿಮಲೆ ಅವರು, ಈ ಹಿಂದೆ ಬ್ರಾಹ್ಮಣರೇನು ಮತಾಂತರ ಆಗುತ್ತಿರಲಿಲ್ಲ. ಮತಾಂತರ ಆದವರು ಅಸ್ಪೃಶ್ಯರು, ಎಂಜಲು ತಿನ್ನುತ್ತಿದ್ದವರು, ಭಿಕ್ಷೆ ಬೇಡುತ್ತಿದ್ದವರು. ಆದರೆ, ಈಗ ಅವರು ಕೂಡಾ ತಮ್ಮ ಸ್ವ ಇಚ್ಛೆಯಿಂದ ಮತಾಂತರವಾಗಲು ಸಾಧ್ಯವಾಗದಂತಾಗಿದೆ ಎಂದರು.

ಈ ಹಿಂದೆ ಸಮಾಜಕ್ಕೆ ಕೊಡುಗೆ ನೀಡಿದವರು ಎಂದರೆ ಮಂಗಳೂರಿಗರು ಆಗಿದ್ದರು. ಆದರೆ, ಈಗ ಯಾವುದೇ ಜಿಲ್ಲೆ, ಪ್ರದೇಶದಲ್ಲಿ ಗಲಾಟೆ, ಗಲಭೆ ನಡೆದರೂ ಆ ಜಿಲ್ಲೆಯನ್ನು ʼಮಂಗಳೂರಿನಂತೆʼ ಎಂದು ಹೋಲಿಕೆ ಮಾಡಲಾಗುತ್ತದೆ. ಆ ಮಟ್ಟಿಗೆ ನಮ್ಮ ನಗರ ತಲುಪಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಒಂದು ಮೇಲ್ಸೇತುವೆ ನಿರ್ಮಾಣ ಮಾಡಲು ಮೂರು ಬಾರಿ ಗೆದ್ದು ಬಂದ ಎಂಪಿಗಳ ನಡುವೆ ನಾವು ಶ್ರೀನಿವಾಸ ಮಲ್ಯರ ಕೊಡುಗೆಯನ್ನು ನೆನೆಯಬೇಕು ಎಂದರು. ಜಾತಕವನ್ನು ಬರೆಯುವಾಗ ಇಂದಿಗೂ ಕೂಡಾ ಬ್ರಾಹ್ಮಣರೇತರಿಗೆ ವಿದ್ಯೆ ಇಲ್ಲ ಎಂದು ಬರೆಯಲಾಗುತ್ತದೆ. ನನಗೂ ಹಾಗೆಯೇ ಬರೆಯಲಾಗಿತ್ತು. ಆದರೆ, ಆ ಜ್ಯೋತಿಷಿ ಬರೆದ ಜಾತಕಕ್ಕೆ ಸಡ್ಡು ಹೊಡೆದವರು ನಮ್ಮ ತಾಯಿ. ನನಗೆ ತನ್ನ ಕಿವಿಯೋಲೆ ಅಡವಿಟ್ಟು ವಿದ್ಯೆ ನೀಡಿದರು. ಇಂದು ನಾನು ಪ್ರೊಫೆಸರ್ ಆಗಿ ಬೆಳೆದಿದ್ದೇನೆ ಎಂದರು.

ಕನ್ನಡ ಪರ ಹೋರಾಟಗಾರ ರಮೇಶ್ ಬೆಲ್ಲದಕೊಂಡ, ಡಿವೈಎಫ್‌ಐ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X