ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕವಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 25ನೇ ವರ್ಷದ ಬೆಳ್ಳಿ ಹಬ್ಬ ರಜತ ರಂಗು ಸಂಭ್ರಮದಲ್ಲಿರುವ ಮಂಗಳೂರಿನ ಕಲ್ಲಚ್ಚು ಪ್ರಕಾಶನ ವಾರ್ಷಿಕವಾಗಿ ಕೊಡಮಾಡುವ ಕಲ್ಲಚ್ಚು ಪ್ರಶಸ್ತಿಯ 16ನೇ ಆವೃತ್ತಿಗೆ ರಾಜ್ಯದ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ದ.ಕ. | ಕ್ರೈಸ್ತ ಸನ್ಯಾಸಿನಿಯರ ಬಂಧನ ವಿರೋಧಿಸಿ ಪ್ರತಿಭಟನೆ
ಕವಿ, ಕಲಾವಿದ ಜಬೀವುಲ್ಲಾ ಎಂ. ಅಸದ್, ಗೋಕಾವಿ ಗೆಳೆಯರ ಬಳಗ ಬೆಳಗಾವಿ (ಪ್ರಾ.ಜಯಾನಂದ ಮಾದರ-ಸಂಸ್ಥಾಪಕ ಅಧ್ಯಕ್ಷ), ಭರತನಾಟ್ಯ ಕಲಾವಿದೆ ಮಂಗಳೂರಿನ ರೆಮೊನಾ ಎವೆಟ್ ಪೆರೇರಾ, ಬಹುಮುಖ ಪ್ರತಿಭಾವಂತ ಡಾ.ಎಸ್.ಎಂ.ಶಿವಪ್ರಕಾಶ್ ಸಾಹಿತಿ ಡಾ. ಪ್ರಕಾಶ್ ಕೆ. ನಾಡಿಗ್ ರವರನ್ನು ಆಯ್ಕೆ ಆಗಿದ್ದಾರೆ.
ಆ.31ರ ಸಂಜೆ 4ಕ್ಕೆ ಮಂಗಳೂರು ನಗರದ ಹ್ಯಾಟ್‌ಹಿಲ್‌ನಲ್ಲಿರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸಾಹಿತಿ, ಮಹೇಶ ಆರ್. ನಾಯಕ್ ಮಾಹಿತಿ ನೀಡಿದ್ದಾರೆ.
