ಮಂಗಳೂರು | 29 ವರ್ಷ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಮಂಜುನಾಥ್ ಭಟ್‌ರಿಗೆ ಬೀಳ್ಕೊಡುಗೆ

Date:

Advertisements

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ದೇರಳಕಟ್ಟೆ ಸಮೀಪದ ಅಸೈ ಮದಕದಲ್ಲಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಕಳೆದ 29 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುಂದಿನ ಮಾರ್ಚ್‌ ತಿಂಗಳಲ್ಲಿ ನಿವೃತ್ತರಾಗಲಿರುವ ಶಿಕ್ಷಕ ಮಂಜುನಾಥ್ ಭಟ್‌ರಿಗೆ ಅದ್ಧೂರಿಯ ಬೀಳ್ಕೊಡುಗೆ ಸಮಾರಂಭವು ಸಂಸ್ಥೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಫೆ.3ರಂದು ನಡೆಸಲಾಯಿತು.

ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪೂರ್ಣಿಮಾ, “ಒಂದೇ ಸಂಸ್ಥೆಯಲ್ಲಿ 29 ವರ್ಷ ಸರ್ಕಾರಿ ಕೆಲಸ ಮಾಡುವುದು ಎಂದರೆ ಅದೊಂದು ಸರಳ ವಿಷಯವಲ್ಲ. ಗಣಿತ ಶಿಕ್ಷಕರಾದ ಮಂಜುನಾಥ್ ಭಟ್‌ ಅದನ್ನು ಸಾಧಿಸಿ, ತೋರಿಸಿದ್ದಾರೆ. ಅವರ ನಿವೃತ್ತಿ ಜೀವನವು ಸಂತಸದಿಂದ ಕೂಡಿ” ಎಂದು ಹಾರೈಸಿದರು.

ಸಹ ಶಿಕ್ಷಕ ಮುಹಮ್ಮದ್ ಹನೀಫ್ ಮಾತನಾಡಿ, “ಕಳೆದ 29 ವರ್ಷಗಳಿಂದ ಮುಸ್ಲಿಮ್ ಮಕ್ಕಳ ನಡುವೆಯೇ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾರೆ. ಎಷ್ಟೇ ಸಾಂಪ್ರದಾಯಿಕ ವ್ಯತ್ಯಾಸಗಳಿದ್ದರೂ ಕೂಡ ಈವರೆಗೆ ಒಂದೇ ಒಂದು ಚಕಾರವೆತ್ತದೆ ಕಾರ್ಯ ನಿರ್ವಹಿಸುವ ಮೂಲಕ ಮಾದರಿ ಶಿಕ್ಷಕರಾಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ದೇವರು ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತಿ ಜೀವನದ ನಂತರ ಹಳ್ಳಿಗಾಡಿನಲ್ಲಿ ಕೃಷಿ ಮಾಡುವ ಬಯಕೆ ಹೊಂದಿದ್ದಾರೆ. ಅದು ಈಡೇರಲಿ” ಎಂದು ಆಶಿಸಿದರು.

Advertisements
sanmana 1

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಮುಹಮ್ಮದ್ ಅನ್ವರ್ ಎ.ಎಸ್ ಮಾತನಾಡಿ, “ನಾವು ಎಷ್ಟೇ ದೊಡ್ಡ ಹುದ್ದೆಗೆ ಹೋದರೂ ಶಿಕ್ಷಕರನ್ನು ಮರೆಯುವಂತಿಲ್ಲ. ನಾನು ಇಂದು ವೈದ್ಯಕೀಯ ಕಾಲೇಜೊಂದರ ಪ್ರೊಫೆಸರ್ ಆಗುವುದಕ್ಕೆ ಮಂಜುನಾಥ್ ಭಟ್ ಅಂಥವರ ಶಿಕ್ಷಕರ ಪಾತ್ರವೂ ಇದೆ” ಎಂದು ವಸತಿ ಶಾಲೆಯ ದಿನಗಳನ್ನು ನೆನಪಿಸಿದರು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಗಣಿತ ಶಿಕ್ಷಕ ಮಂಜುನಾಥ್ ಭಟ್‌ ಮಾತನಾಡಿ, “ಇಷ್ಟೊಂದು ಅದ್ಧೂರಿಯ ಬೀಳ್ಕೊಡುಗೆ ಸಮಾರಂಭ ನನಗೆ ನಿರೀಕ್ಷಿಸಿರಲಿಲ್ಲ. ಎರಡು ಪೇಪರ್‌ನ ಮೇಲೆ ಅಂಟು(ಗಮ್) ಹಾಕಿ ಅಂಟಿಸಿದರೆ, ಆ ಅಂಟು ಕಾಣಿಸುವುದಿಲ್ಲ. ಆದರೆ, ಪೇಪರ್ ಬೇರೆ ಬೇರೆಯಾಗುವುದಿಲ್ಲ. ಅದೇ ರೀತಿ ನನ್ನ ಹಾಗೂ ವಿದ್ಯಾರ್ಥಿಗಳ ನಡುವಿನ ಸ್ನೇಹ. ಅದೊಂದು ರೀತಿಯಲ್ಲಿ ಅಂಟಿನಂತಿದೆ. ಈ ಸ್ನೇಹವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅದು ಗಟ್ಟಿ ಇರುವುದರಿಂದಲೇ ಇಷ್ಟೊಂದು ಅದ್ಧೂರಿಯ ಬೀಳ್ಕೊಡುಗೆ ಸಮಾರಂಭ ನನಗೆ ದೊರಕಿದೆ” ಎಂದು ಸಂತಸ ವ್ಯಕ್ತಪಡಿಸಿದರು.

sanmana 2

ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ಪ್ರಾಚಾರ್ಯರಾದ ಉಮರಬ್ಬ ವಹಿಸಿ ಮಾತನಾಡಿ, ನನ್ನ ಒಡನಾಡಿಯಾಗಿರುವ ಮಂಜುನಾಥ್ ಭಟ್ ಅವರು ಸಸ್ಯಾಹಾರಿ. ಆದರೂ ಕೂಡ ಮಾಂಸಾಹಾರ ಸೇವಿಸುವವರ ನಡುವೆ ಇಷ್ಟೊಂದು ವರ್ಷ ಸೇವೆ ಸಲ್ಲಿಸಿದ್ದರೂ ಕೂಡ ಈವರೆಗೆ ಯಾವುದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ತೋರಿಸಿದವರಲ್ಲ. ಏನೇ ಸಮಸ್ಯೆ ಬಂದರೂ ಕೂಡ ಬಹಳ ಚಾಕಚಕ್ಯತೆಯಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಅವರು ಮಾದರಿ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿವೃತ್ತಿ ಜೀವನವು ಸಂತಸದಿಂದ ಕೂಡಿರಲಿ. ಸಂಸ್ಥೆಗೆ ನಿವೃತ್ತಿಯ ನಂತರವೂ ಸದಾ ಭೇಟಿ ನೀಡಬೇಕು” ಎಂದು ಹೇಳಿ, ಶುಭ ಹಾರೈಸಿದರು.

sanmana 3

ಕಲಾ ಶಿಕ್ಷಕರಾದ ಅಶೋಕ್, ಧಾರ್ಮಿಕ ಗುರುಗಳಾದ ಉಮರುಲ್ ಫಾರೂಕ್, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರಾದ ಮಹಾಬಲೇಶ್ವರ ನಾಯಕ್, ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಫಾರೂಕ್, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಮುಹಮ್ಮದ್ ಅಸೈ, ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಶಕೀಲ್ ತುಂಬೆ ಮಾತನಾಡಿ, ಶುಭ ಹಾರೈಸಿದರು. ಕಚೇರಿಯ ಸಹಾಯಕಿ ಉಷಾರವರು ಹಾಡಿನ ಮೂಲಕ ಶುಭ ಹಾರೈಸಿದರು. ಸಹ ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕಿ ಹಸೀನಾ ಅವರು ಧನ್ಯವಾದ ಸಲ್ಲಿಸಿದರು.

ಇದನ್ನು ಓದಿದ್ದೀರಾ? ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ: ಸಚಿವ ಝಮೀರ್ ಭರವಸೆ

ಸಮಾರಂಭದಲ್ಲಿ ಶಿಕ್ಷಕ ಮಂಜುನಾಥ್ ಭಟ್‌ರಿಗೆ ಹಳೆ ವಿದ್ಯಾರ್ಥಿಗಳ ಸಹಿತ ಹಲವು ಮಂದಿ ಹಳೆಯ ವಿದ್ಯಾರ್ಥಿಗಳು ಚಿನ್ನದುಂಗರ ಸೇರಿದಂತೆ ಹಲವು ಅಮೂಲ್ಯವಾದ ಕೊಡುಗೆಗಳನ್ನು ನೀಡುವ ಮೂಲಕ ಗೌರವಿಸಿದರು.

ಸಮಾರಂಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿದ ಶಿಕ್ಷಕ ಮಂಜುನಾಥ್ ಭಟ್‌ ಅವರ ಪತ್ನಿ ಸಹನಾ, ಮಕ್ಕಳಾದ ಶ್ರೀವತ್ಸ, ಸಿಂಧೂರ ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್ ಆರ್, ಸರ್ಕಾರಿ ವಸತಿ ಶಾಲೆಯ ಸಿಬ್ಬಂದಿಗಳಾದ ರಾಮಚಂದ್ರ, ಬಿ ಪಿ ಓಝ್ವಾಲ್ಡ್ ಕುವೆಲ್ಹೋ, ಮಣಿರಾಜ್, ಹಸನಬ್ಬ, ಆದಂ, ಅಬ್ದುಲ್ ಮಜೀದ್, ಮೈಮೂನಾ, ಅಬ್ದುಲ್ ಅಝೀಝ್, ಅಬೂಬಕ್ಕರ್ ತುಂಬೆ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

umarabba
kotekar1 1
ashok 4
sanmana 7
sanmana 5
sanmana 4
kotekar2
kotekar3
rekha
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X