ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಮತ್ತು ನರಿಂಗಾನ ಗ್ರಾಮ ಪಂಚಾಯಿತ್ ಸಹಯೋಗದಲ್ಲಿ ದಶಮಾನೋತ್ಸವದ ಪ್ರಯುಕ್ತ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು
ಮಾ.7ರ ಸೋಮವಾರ ಬೆಳಗ್ಗೆ 9 ಗಂಟೆಗೆ ನರಿಂಗಾನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನೆರವೇರಲಿದೆ.
ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್ ಫರೀದ್ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಲಿರುವರು. ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವಾಝ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜನಾಡಿ ಇಲ್ಲಿನ ಪ್ರಧಾನ ಅರ್ಚಕರಾದ ಸುಬ್ರಮಣ್ಯ ಭಟ್ ಹಾಗೂ ಸಂತ ಲಾರೆನ್ಸ್ ದೇವಾಲಯ ಬೋಳ ನರಿಂಗಾನದ ಧರ್ಮ ಗುರುಗಳಾದ ಫಾ.ರೆ ಫೆಡ್ರಿಕ್ ಕೊರೆಯ ಆಶೀರ್ವಚನ ನೀಡಲಿದ್ದಾರೆ.
ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ಎನ್ ಅಮೀನ್ ಪಕ್ಕಲಡ್ಕರವರು ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಹರೀಶ್ ಕುಮಾರ್ ಕುತ್ತಡ್ಕ ನಿವೃತ್ತ ಅಧೀಕ್ಷಕರು, ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ,. ನಿಯಾಝುರ್ರಹ್ಮಾನ್ ಪೆರ್ಲ ಉಪಾಧ್ಯಕ್ಷರು, BSWT ಮಂಗಳೂರು, ಅಶ್ರಫ್ ಎಂ.ಸಿ ಅಧ್ಯಕ್ಷರು, ಖತೀಜಾ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಜ್ಯೋತಿ ಡಿಸೋಜ ಉಪಾಧ್ಯಕ್ಷೆ, ನರಿಂಗಾನ ಗ್ರಾಮ ಪಂಚಾಯತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಜನಿ ಡಿ ಗಟ್ಟಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗ ನರಿಂಗಾನ ಗ್ರಾಮ ಪಂಚಾಯತ್, ಕಾರ್ಯಕ್ರಮದ ಸಂಚಾಲಕ ಅಶೀರುದ್ದೀನ್ ಸಾರ್ತಬೈಲ್ ಹಾಗೂ ಸರ್ವ ಸದಸ್ಯರು ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.