ಗುಡ್ಡದ ಇಳಿಜಾರು ತಗ್ಗು ಕಾಡು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಶವವು, ಬುಧವಾರ ತಡಸಂಜೆಯಲ್ಲಿ ಪತ್ತೆಯಾಗಿರುವ ಘಟನೆಯು ನಡೆದಿದೆ. ಮೃತ ವ್ಯಕ್ತಿಯನ್ನು ವಾರದ ಹಿಂದೆ ನಾಪತ್ತೆಯಾಗಿರುವ ಮಣಿಪಾಲ ಪ್ರಗತಿನಗರದ ನಿವಾಸಿ ಚೌರಪ್ಪ ದಂಡಾವತಿ (51ವ) ಎಂದು ಗುರುತಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿದ್ದು ಮಣಿಪಾಲ ಪೋಲಿಸ್ ಠಾಣೆಯ ಎ ಎಸ್ ಐ ವಿವೇಕಾನಂದ, ಎ ಎಸ್ ಐ ವಿಜಯ, ಪ್ರಸನ್ನ ಉಪ್ಪೂರು, ಸಂಗೀತ ಮಣಿಪಾಲ ಮಹಜರು ಪ್ರಕ್ರಿಯೆ ನಡೆಸಿದರು.
ಶವ ಪತ್ತೆಯಾದ ಸ್ಥಳವು ಗಿಡಗಂಟಿ ಬೆಳೆದು ಪೊದೆಗಳಾಗಿರುವ ಕಾಡು ಪ್ರದೇಶವಾಗಿತ್ತು. ಕತ್ತಲಲ್ಲಿ ಶವವನ್ನು ಆಂಬುಲೆನ್ಸ್ ವಾಹನ ನಿಲುಗಡೆ ಇರುವ ಸ್ಥಳದೆಡೆಗೆ ಶವ ಹೊತ್ತು ತರಲು ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕತ್ತಲಲ್ಲಿ ಪ್ರಯಾಶ ಪಡಬೇಕಾಯಿತು. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಒಳಕಾಡುವರು ನೆರವಾದರು.