ಕೊಡಗು | ಶಾಸಕ ಪೊನ್ನಣ್ಣ ಅವರಿಗೆ ಮಂತ್ರಿಗಿರಿ ಲಭಿಸುವ ವಿಶ್ವಾಸವಿದೆ: ಕೆಪಿಸಿಸಿ ವಕ್ತಾರ ಟಿ.ಎಂ ಶಹೀದ್

Date:

Advertisements
  • ಕಾಂಗ್ರೆಸ್‌ ನೀಡಿರುವ ಐದು ಗ್ಯಾರಂಟಿಗಳು ಖಂಡಿತವಾಗಿ ಈಡೇರಲಿವೆ
  • ಕೊಡಗಿನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು

ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ನೀಡಿರುವ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಟಿ.ಎಂ ಶಹೀದ್ ಹೇಳಿದರು.

ಮಡಿಕೇರಿ ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಕೊಡಗು ಜಿಲ್ಲೆಯಲ್ಲಿ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಲಭಿಸುವ ವಿಶ್ವಾಸವಿದೆ” ಎಂದರು.

“ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಭಿಸಿರುವ ಅಭೂತಪೂರ್ವ ಫಲಿತಾಂಶ ಮುಂಬರುವ 2024ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಮಂದಿ ಕಾಂಗ್ರೆಸ್‌ ಸಂಸದರು ಆಯ್ಕೆಯಾಗಿ ಪಾರ್ಲಿಮೆಂಟ್‌ಗೆ ಹೋಗಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisements

“ಅಲ್ಪಸಂಖ್ಯಾತ ಸಮುದಾಯದ ಯುವಕರು ಯಾರ ವಂಚನೆ ಕುತಂತ್ರಕ್ಕೆ ಬಲಿಯಾಗ ಬಾರದು. ಸಾಮಾಜಿಕ ಜಾಲತಾಣಗಳಾಸ ಫೇಸ್‌ಬುಕ್‌, ವಾಟ್ಸ್‌ ಆಪ್‌ಗಳಲ್ಲಿ ಬರುವಂತಹ, ಬರಹ, ಸಂದೇಶಗಳ ಪ್ರಚೋದನೆಗೆ ಕಿವಿಗೊಡಬಾರದು” ಎಂದು ಸಲಹೆ ನೀಡಿದರು.

“ವಿಜಯೋತ್ಸವ ಸಂಧರ್ಭದಲ್ಲಿ ವ್ಯೆಕ್ತಿಯೊಬ್ಬರು  ಇಸ್ಲಾಮೀ ಧ್ವಜವನ್ನು ಪ್ರದರ್ಶಿಸಿದಾಗ ಸಂಘಪರಿವಾರ ಅದನ್ನು ಪಾಕಿಸ್ಥಾನದ ದ್ವಜ ಎಂದು ಬಿಂಬಿಸಿ ಗಲಬೆಯ ಹುನ್ನಾರಕ್ಕೆ ಯತ್ನಿಸಿತ್ತು. ಇಂತಹದಕ್ಕೆ ಅವಕಾಶ ಮಾಡಬಾರದು” ಎಂದು ಮನವಿ ಮಾಡಿದರು.

“ಮುಸ್ಲಿಂ ಸಮುದಾಯದಲ್ಲಿ ಕೂಡ ಕೆಲವು ಕೋಮುವಾದಿ ಗಳಿದ್ದಾರೆ. ಇದನ್ನು ಅರಿತು ಸೌಹಾರ್ದದಲ್ಲಿ  ಬದುಕಬೇಕು. ಕೋಮು ಸಂಘರ್ಷದ ವಾತಾವರಣವನ್ನು ಸೃಷ್ಟಿಸುವ ಮೂಲಕ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಹೊರಟ ಭಾರತಿಯ ಜನತಾ ಪಕ್ಷಕ್ಕೆ ಕನ್ನಡ ನಾಡಿನ ಜನತೆ ಅತ್ಯುತ್ತಮ ಗದ ಪ್ರಹಾರ ಮಾಡಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ದ. ಕನ್ನಡ | ಕಟೀಲ್‌ ಬ್ಯಾನರ್‌ಗೆ ಚಪ್ಪಲಿ ಹಾರ ಪ್ರಕರಣ; ಆರೋಪಿಗಳಿಗೆ ಥಳಿಸಿದ್ದ ಪಿಎಸ್‌ಐ, ಪೇದೆ ಅಮಾನತು

“ಕೊಡಗಿನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು. ರಾಜ್ಯದಲ್ಲಿ ನಡೆದಿರುವ ಕಾಮಗಾರಿ ಹಾಗೂ ಇತರ ಜನ ಕಲ್ಯಾಣ ಯೋಜನೆಗಳ ಅವ್ಯವಹಾರಗಳ ಬಗ್ಗೆ ಹಾಗೂ ಕೊಡಗು ಜಿಲ್ಲಾಧಿಕಾರಿ ಕಚೇರಿ ಬಳಿಯ ತಡೆಗೋಡೆ ಕಳಪೆ ಕಾಮಗಾರಿಯ ಬಗ್ಗೆ ಸೂಕ್ತ ತನಿಖೆ ಮಾಡಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಎಂ ಎ ಉಸ್ಮಾನ್, ನಗರ ಕಾಂಗ್ರೆಸ್‌ ಉಪಾಧ್ಯಕ್ಷ ಎಂ ಎಂ ಯಾಕುಬ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಜಫ್ರುಲ್ಲಾ ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X