ಕಲಬುರಗಿ ಸಮೀಪದ ಪಟ್ಟಣ ಗ್ರಾಮದ ರೌಡಿ ಶೀಟರ್ ಸೋಮು ತಾಳಿಕೋಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಉಪನಗರ ಠಾಣೆ ಪೆÇಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಲಕ್ಷ್ಮೀಪುತ್ರ, ಅಣ್ಣಾರಾಯ, ಮಾಳಪ್ಪ, ಸಿದ್ದು ಸೇರಿದಂತೆ ಆರು ಜನ ಬಂಧಿತರು.
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ನ.12ರಂದು ಮಧ್ಯರಾತ್ರಿ ಜೂಜು ಆಡುತ್ತಿದ್ದ ವೇಳೆ ಸೋಮು ತಾಳಿಕೋಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದ ಹಂತಕರು ರಸ್ತೆ ಮಾರ್ಗವಾಗಿ ಸೋಲಾಪುರ ಸೇರಿಕೊಂಡಿದ್ದರು.
ಖಚಿತ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಸೋಲಾಪುರ-ಅಫಜಲಪುರ ಮಾರ್ಗದಲ್ಲಿ ಬಸ್‌ನಲ್ಲಿ ತೆರಳುತ್ತಿದ್ದಾಗ ಆರೋಪಿಗಳನ್ನು ಬಂಧಿಸಿದ್ದಾರೆ.
ಹಳೇ ವೈಷ್ಯಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಪಟ್ಟಣದ ಡ್ರೈವರ್ ದಾಬಾ ಬಳಿ ನಡೆದ ಗಲಾಟೆಯೇ ಕೊಲೆಗೆ ಕಾರಣ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಧ್ವಂಸ ಸಂಸ್ಕೃತಿಗೆ ಸುಪ್ರೀಂ ಸುತ್ತಿಗೆ ಏಟು
ರೌಡಿ ಶೀಟರ್ ಸೋಮು ಹಾಗೂ ಆತನ ಮತ್ತೋರ್ವ ರೌಡಿ ಸಹಚರ ಅವತಾರ್ ಸಿಂಗ್ ಸೇರಿ ದಾಬಾ ಮಾಲೀಕರ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ, ದಾಬಾ ಮಾಲೀಕನ ಸಹೋದರ ಲಕ್ಷ್ಮೀಪುತ್ರ ಮತ್ತು ಗ್ಯಾಂಗ್ ಈ ಕೊಲೆಗೆ ಸಂಚು ರೂಪಿಸಿತ್ತು ಎಂಬುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.