ಮೈಸೂರು ನಗರದಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೈಕ್, ಟ್ಯಾಕ್ಸಿ ಚಾಲಕರ ಅಸೋಸಿಯೇಷನ್ ಸಂಘದ ವತಿಯಿಂದ ಭಾನುವಾರ ಒಂಟಿಕೊಪ್ಪಲ್ ನ ಚೆಲುವಾಂಬ ಪಾರ್ಕ್ ನಲ್ಲಿ ಸಭೆ ನಡೆಯಿತು. ಸಂಘದ ಅಧ್ಯಕ್ಷ ಮಹಾದೇವ ನಾಯಕ ಮಾತನಾಡಿ ತಮ್ಮ ಕೋರಿಕೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.
ಮೈಸೂರು ನಗರದಲ್ಲಿ ಸುಮಾರು 250 ಕ್ಕೂ ಹೆಚ್ಚು ಬೈಕ್, ಟ್ಯಾಕ್ಸಿ ಚಾಲಕರುಗಳಿದ್ದು. ಇವರುಗಳು, ರಾಪಿಡ್ ಆಟೋ, ಉಬರ್ ಆಟೋ, ಓಲಾ ಆಟೋಗಳಂತೆ ತಮ್ಮ ಬೈಕುಗಳಲ್ಲಿ ಆನ್ಲೈನ್ ಮೂಲಕ ಪ್ರಯಾಣಿಕರು ಬುಕ್ ಮಾಡಿದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಡುವ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ. ಇವರುಗಳು ಆನ್ಲೈನ್ ಮುಖಾಂತರ ಬುಕ್ ಮಾಡಿದ ಗ್ರಾಹಕರ ಸ್ಥಳಗಳಿಗೆ ತೆರಳಿ ಅವರನ್ನು ತಮ್ಮ ಬೈಕುಗಳಲ್ಲಿ ಕೂರಿಸಿಕೊಂಡು 3 km ಗೆ 30 ರೂಪಾಯಿ ಮಾತ್ರ ಪ್ರಯಾಣ ದರ ತೆಗೆದುಕೊಂಡು ಗ್ರಾಹಕರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಇದರಿಂದ, ಚಾಲಕರ ಕುಟುಂಬದ ಜೀವನ ಸಾಗುತ್ತದೆ.
ಈ ಕಾಯಕದಲ್ಲಿ ಸರ್ಕಾರಕ್ಕೂ ಕೂಡ ಜಿಎಸ್‌ಟಿ ತೆರಿಗೆ ರೂಪದಲ್ಲಿ ಹಣ ಪಾವತಿಸುತ್ತಾರೆ. ಹೀಗಿರುವಾಗ, ನ್ಯಾಯಾಲಯಗಳು ಬೈಕ್, ಟ್ಯಾಕ್ಸಿ ವೃತ್ತಿಯನ್ನು ರದ್ದುಗೊಳಿಸಲು ಆದೇಶ ಹೊರಡಿಸಿದೆ. ಇದರಿಂದ, ನಮಗೆ ತುಂಬಾ ತೊಂದರೆ ಆಗಿದೆ. ನಮ್ಮ ಹೆಂಡತಿ, ಮಕ್ಕಳ ಸಾಕಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ, ಸರ್ಕಾರ ನಮಗೆ ಬೇರೊಂದು ಪರಿಹಾರ ಮಾರ್ಗ ಒದಗಿಸಿಕೊಡಬೇಕು. ಇಲ್ಲದಿದ್ದರೆ, ನ್ಯಾಯಾಲಯಕ್ಕೆ ಮನದಟ್ಟು ಮಾಡಿ ಬೈಕ್, ಟ್ಯಾಕ್ಸಿ ಓಡಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಘನ ನ್ಯಾಯಾಲಯವು ನಮ್ಮ ಈ ಮನವಿಯನ್ನು ಪರಿಷ್ಕರಿಸಿ ಬೈಕ್ ಟ್ಯಾಕ್ಸಿ ರದ್ದತಿ ಆದೇಶವನ್ನು ಹಿಂಪಡೆಯಬೇಕೆಂದು ಕೋರಿಕೊಂಡಿದ್ದೇವೆ, ಈ ತಿಂಗಳ 15ನೇ ತಾರೀಖಿನೊಳಗೆ ನಮಗೆ ನಿಖರವಾದ ಮಾಹಿತಿ ಬೇಕು. ನ್ಯಾಯ ಬೇಕು. ಇಲ್ಲದಿದ್ದಲ್ಲಿ, ಎಲ್ಲಾ 250 ಬೈಕ್, ಟ್ಯಾಕ್ಸಿ ಚಾಲಕರುಗಳು ಅವರವರ ಕುಟುಂಬದವರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಮ್ಮ ಬೈಕ್, ಟ್ಯಾಕ್ಸಿ ಸೇವೆಯಿಂದ ಗ್ರಾಹಕರಿಗೆ ಉಪಯೋಗವಾಗುತ್ತದೆ.ಆಸ್ಪತ್ರೆಗಳಿಗೆ, ಕಚೇರಿಗಳಿಗೆ, ಬಸ್, ನಿಲ್ದಾಣ, ರೈಲು ನಿಲ್ದಾಣಗಳಿಂದ ತಮ್ಮ ಮನೆಗಳಿಗೆ ತೆರಳಲು, ಇನ್ನಿತರೇ ಕೆಲಸಗಳಿಗೆ ಕರೆ ಮಾಡಿದ ತಕ್ಷಣ ಅವರು ಇರುವ ಸ್ಥಳಗಳಿಗೆ ಹೋಗಿ ಅಲ್ಲಿಂದ ಅವರು ಹೇಳುವ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದೊಯ್ದು ಬಿಟ್ಟು ಬರುತ್ತೇವೆ. ನಮ್ಮಿಂದ ಗ್ರಾಹಕರಿಗೆ ತೊಂದರೆ ಆಗುವುದಿಲ್ಲ. ಅವರ ಸುರಕ್ಷತೆಯೇ ನಮ್ಮ ಧ್ಯೇಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿರುತ್ತೇವೆ. ಹೀಗಿದ್ದರೂ, ಸಹ ಬೈಕ್, ಟ್ಯಾಕ್ಸಿ ವೃತ್ತಿ ಜೀವನಕ್ಕೆ ಕಡಿವಾಣ ಹಾಕಿರುವುದು ನಮ್ಮ ಬದುಕನ್ನು ಹಳ್ಳಕ್ಕೆ ತಳ್ಳಿದಂತಿದೆ ಎಂದು ಬೈಕ್ ಟ್ಯಾಕ್ಸಿ ಚಾಲಕರುಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಭೂ ವಿವಾದ; ದಲಿತ ಮಹಿಳೆ ಪೂವಮ್ಮ ಬಂಗಾರುಗೆ ಭೂಮಿ ಹಸ್ತಾಂತರ
ಸಂಘಟನೆಯ ಸದಸ್ಯ ಎಂ. ಶಂಕರ್ ಮಾತನಾಡಿ ಸರ್ಕಾರ ಯಾವುದೇ ತೀರ್ಮಾನಕ್ಕೆ ಬರದಿದ್ದಲ್ಲಿ ನಾವು ಜನತಾ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಆದ್ದರಿಂದ, ಸರ್ಕಾರವು ನಮ್ಮ ಬದುಕಿಗೆ ಆಶ್ರಯವಾಗಬೇಕು ಮತ್ತೆ ಬೈಕ್, ಟ್ಯಾಕ್ಸಿ ಓಡಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಸಭೆಯಲ್ಲಿ ನೂರಕ್ಕೂ ಹೆಚ್ಚು ಸದಸ್ಯರು ಇದ್ದರು.