ಮೈಸೂರು | ಬೈಕ್, ಟ್ಯಾಕ್ಸಿ ಚಾಲಕರ ಸಭೆ; ಪ್ರತಿಭಟನೆಗೆ ನಿರ್ಧಾರ

Date:

ಮೈಸೂರು ನಗರದಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೈಕ್, ಟ್ಯಾಕ್ಸಿ ಚಾಲಕರ ಅಸೋಸಿಯೇಷನ್ ಸಂಘದ ವತಿಯಿಂದ ಭಾನುವಾರ ಒಂಟಿಕೊಪ್ಪಲ್ ನ ಚೆಲುವಾಂಬ ಪಾರ್ಕ್ ನಲ್ಲಿ ಸಭೆ ನಡೆಯಿತು. ಸಂಘದ ಅಧ್ಯಕ್ಷ ಮಹಾದೇವ ನಾಯಕ ಮಾತನಾಡಿ ತಮ್ಮ ಕೋರಿಕೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.

- Advertisement -

ಮೈಸೂರು ನಗರದಲ್ಲಿ ಸುಮಾರು 250 ಕ್ಕೂ ಹೆಚ್ಚು ಬೈಕ್, ಟ್ಯಾಕ್ಸಿ ಚಾಲಕರುಗಳಿದ್ದು. ಇವರುಗಳು, ರಾಪಿಡ್ ಆಟೋ, ಉಬರ್ ಆಟೋ, ಓಲಾ ಆಟೋಗಳಂತೆ ತಮ್ಮ ಬೈಕುಗಳಲ್ಲಿ ಆನ್ಲೈನ್ ಮೂಲಕ ಪ್ರಯಾಣಿಕರು ಬುಕ್ ಮಾಡಿದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಡುವ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ. ಇವರುಗಳು ಆನ್ಲೈನ್ ಮುಖಾಂತರ ಬುಕ್ ಮಾಡಿದ ಗ್ರಾಹಕರ ಸ್ಥಳಗಳಿಗೆ ತೆರಳಿ ಅವರನ್ನು ತಮ್ಮ ಬೈಕುಗಳಲ್ಲಿ ಕೂರಿಸಿಕೊಂಡು 3 km ಗೆ 30 ರೂಪಾಯಿ ಮಾತ್ರ ಪ್ರಯಾಣ ದರ ತೆಗೆದುಕೊಂಡು ಗ್ರಾಹಕರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಇದರಿಂದ, ಚಾಲಕರ ಕುಟುಂಬದ ಜೀವನ ಸಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಈ ಕಾಯಕದಲ್ಲಿ ಸರ್ಕಾರಕ್ಕೂ ಕೂಡ ಜಿಎಸ್‌ಟಿ ತೆರಿಗೆ ರೂಪದಲ್ಲಿ ಹಣ ಪಾವತಿಸುತ್ತಾರೆ. ಹೀಗಿರುವಾಗ, ನ್ಯಾಯಾಲಯಗಳು ಬೈಕ್, ಟ್ಯಾಕ್ಸಿ ವೃತ್ತಿಯನ್ನು ರದ್ದುಗೊಳಿಸಲು ಆದೇಶ ಹೊರಡಿಸಿದೆ. ಇದರಿಂದ, ನಮಗೆ ತುಂಬಾ ತೊಂದರೆ ಆಗಿದೆ. ನಮ್ಮ ಹೆಂಡತಿ, ಮಕ್ಕಳ ಸಾಕಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ, ಸರ್ಕಾರ ನಮಗೆ ಬೇರೊಂದು ಪರಿಹಾರ ಮಾರ್ಗ ಒದಗಿಸಿಕೊಡಬೇಕು. ಇಲ್ಲದಿದ್ದರೆ, ನ್ಯಾಯಾಲಯಕ್ಕೆ ಮನದಟ್ಟು ಮಾಡಿ ಬೈಕ್, ಟ್ಯಾಕ್ಸಿ ಓಡಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಘನ ನ್ಯಾಯಾಲಯವು ನಮ್ಮ ಈ ಮನವಿಯನ್ನು ಪರಿಷ್ಕರಿಸಿ ಬೈಕ್ ಟ್ಯಾಕ್ಸಿ ರದ್ದತಿ ಆದೇಶವನ್ನು ಹಿಂಪಡೆಯಬೇಕೆಂದು ಕೋರಿಕೊಂಡಿದ್ದೇವೆ, ಈ ತಿಂಗಳ 15ನೇ ತಾರೀಖಿನೊಳಗೆ ನಮಗೆ ನಿಖರವಾದ ಮಾಹಿತಿ ಬೇಕು. ನ್ಯಾಯ ಬೇಕು. ಇಲ್ಲದಿದ್ದಲ್ಲಿ, ಎಲ್ಲಾ 250 ಬೈಕ್, ಟ್ಯಾಕ್ಸಿ ಚಾಲಕರುಗಳು ಅವರವರ ಕುಟುಂಬದವರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ನಮ್ಮ ಬೈಕ್, ಟ್ಯಾಕ್ಸಿ ಸೇವೆಯಿಂದ ಗ್ರಾಹಕರಿಗೆ ಉಪಯೋಗವಾಗುತ್ತದೆ.ಆಸ್ಪತ್ರೆಗಳಿಗೆ, ಕಚೇರಿಗಳಿಗೆ, ಬಸ್, ನಿಲ್ದಾಣ, ರೈಲು ನಿಲ್ದಾಣಗಳಿಂದ ತಮ್ಮ ಮನೆಗಳಿಗೆ ತೆರಳಲು, ಇನ್ನಿತರೇ ಕೆಲಸಗಳಿಗೆ ಕರೆ ಮಾಡಿದ ತಕ್ಷಣ ಅವರು ಇರುವ ಸ್ಥಳಗಳಿಗೆ ಹೋಗಿ ಅಲ್ಲಿಂದ ಅವರು ಹೇಳುವ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದೊಯ್ದು ಬಿಟ್ಟು ಬರುತ್ತೇವೆ. ನಮ್ಮಿಂದ ಗ್ರಾಹಕರಿಗೆ ತೊಂದರೆ ಆಗುವುದಿಲ್ಲ. ಅವರ ಸುರಕ್ಷತೆಯೇ ನಮ್ಮ ಧ್ಯೇಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿರುತ್ತೇವೆ. ಹೀಗಿದ್ದರೂ, ಸಹ ಬೈಕ್, ಟ್ಯಾಕ್ಸಿ ವೃತ್ತಿ ಜೀವನಕ್ಕೆ ಕಡಿವಾಣ ಹಾಕಿರುವುದು ನಮ್ಮ ಬದುಕನ್ನು ಹಳ್ಳಕ್ಕೆ ತಳ್ಳಿದಂತಿದೆ ಎಂದು ಬೈಕ್ ಟ್ಯಾಕ್ಸಿ ಚಾಲಕರುಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?ಮೈಸೂರು | ಭೂ ವಿವಾದ; ದಲಿತ ಮಹಿಳೆ ಪೂವಮ್ಮ ಬಂಗಾರುಗೆ ಭೂಮಿ ಹಸ್ತಾಂತರ

ಸಂಘಟನೆಯ ಸದಸ್ಯ ಎಂ. ಶಂಕರ್ ಮಾತನಾಡಿ ಸರ್ಕಾರ ಯಾವುದೇ ತೀರ್ಮಾನಕ್ಕೆ ಬರದಿದ್ದಲ್ಲಿ ನಾವು ಜನತಾ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಆದ್ದರಿಂದ, ಸರ್ಕಾರವು ನಮ್ಮ ಬದುಕಿಗೆ ಆಶ್ರಯವಾಗಬೇಕು ಮತ್ತೆ ಬೈಕ್, ಟ್ಯಾಕ್ಸಿ ಓಡಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಸಭೆಯಲ್ಲಿ ನೂರಕ್ಕೂ ಹೆಚ್ಚು ಸದಸ್ಯರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ಬಾಚಣಕಿ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಉತ್ತರಾಖಂಡ ಮೂಲದ ಯುವಕ ಸಾವು

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮದ ಡ್ಯಾಂ ಹಿನ್ನೀರಿನಲ್ಲಿ ಈಜಾಡಲು ತೆರಳಿದ್ದ ಹೋಟೆಲ್‌...

ಚಿಕ್ಕಮಗಳೂರು | ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ; ಮಾವಳ್ಳಿ ಶಂಕರ್

ಚಿಕ್ಕಮಗಳೂರಿನ ಮಹಾರಾಜ ಗ್ರ್ಯಾಂಡ್ ಹೋಟೆಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...