ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಸೂರು ನಗರ ಪೊಲೀಸರು ಬಂಧಿಸಿದ್ದಾರೆ.
“ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೋಂದಣಿ ಫಲಕಗಳಿಲ್ಲದ ಎರಡು ವಾಹನಗಳಲ್ಲಿ ಸಂಚರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅನುಮಾನಾಸ್ಪದವಾಗಿ ವಶಕ್ಕೆ ಪಡೆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ” ಎಂದು ನಗರ ಪೊಲೀಸರು ತಿಳಿಸಿದ್ದಾರೆ.
“ಇವರ ಬಂಧನದಿಂದ ಮೈಸೂರು ನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ವರದಿಯಾದ ಒಂಬತ್ತು ವಾಹನ ಕಳ್ಳತನ ಪ್ರಕರಣಗಳನ್ನು ಪರಿಹರಿಸಲು ಪೊಲೀಸರಿಗೆ ಸಹಾಯವಾಗಿದ್ದು, ಕದ್ದ ಎಲ್ಲ ವಾಹನಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಸುದ್ದಿ ಓದಿದ್ದೀರಾ? ಮೈಸೂರು | ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕ್ರಮ; ಮುಡಾ ಅಧ್ಯಕ್ಷ ಎಚ್ಚರಿಕೆ
ಪೊಲೀಸರು ನೀಡಿದ ಅಂದಾಜಿನ ಪ್ರಕಾರ, ಅವರಿಂದ ವಶಪಡಿಸಿಕೊಂಡ ಒಟ್ಟು ವಾಹನಗಳ ಮೌಲ್ಯ 6 ಲಕ್ಷ ರೂ. ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಅಂತರ್ ಜಿಲ್ಲಾ ವಾಹನ ಕಳ್ಳರ ಜಾಲವನ್ನು ಭೇದಿಸಿದ ಮೇಟಗಳ್ಳಿ ಪೊಲೀಸರು, ಅವರಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
