ಮೈಸೂರು ಜಿಲ್ಲಾ ನ್ಯಾಯಾಲಯದ ಪಾರ್ಕಿಂಗ್ ದ್ವಾರದಲ್ಲಿ ಲಾ ಗೈಡ್ ಬಳಗದಿಂದ ಸುರಕ್ಷಿತ ಕನ್ನಡಿ ಅಳವಡಿಕೆಯಿಂದ ವಕೀಲರು ಪಾರ್ಕಿಂಗ್ ಸ್ಥಳದಿಂದ ವಾಹನದಲ್ಲಿ ಸುಗಮವಾಗಿ ತೆರಳುವಂತಾಗಿದ್ದು, ಎಲ್ಲರಲ್ಲು ಸಂಸಸ ತಂದಿದೆ.
ಮೈಸೂರು ಹೊಸ ನ್ಯಾಯಲಯದ ಪಾರ್ಕಿಂಗ್ ದ್ವಾರದಲ್ಲಿ ಅಳವಡಿಸಿರುವ ಸುರಕ್ಷಿತ ಕನ್ನಡಿಯನ್ನು ಮೈಸೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾ.ರವೀಂದ್ರ ಹೆಗಡೆ ಲೋಕಾರ್ಪಣೆಗೊಳಿಸಿದರು.
ವಕೀಲರು ಪಾರ್ಕಿಂಗ್ ಸ್ಥಳದಿಂದ ವಾಹನದಲ್ಲಿ ತೆರಳುವಾಗ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕರು ಹಾಗೂ ಹಿರಿಯ ವಕೀಲರಾದ ಹೆಚ್ ಎನ್ ವೆಂಕಟೇಶ್ ಗಿರೀಶ್, ಜೈ ಶಂಕರ್, ಸ್ವಾಮಿ ವಕೀಲರ ಸುರಕ್ಷತೆಗಾಗಿ ಎರಡು ದ್ವಾರಗಳಲ್ಲಿ ಸುರಕ್ಷತಾ ಕನ್ನಡಿಯನ್ನು ಅಳವಡಿಸಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗಾಳಿಯ ಗುಣಮಟ್ಟ ಉತ್ತಮಗೊಳಿಸಲು ಕ್ರಿಯಾ ಯೋಜನೆ ರೂಪಿಸಬೇಕು: ಪಾಲಿಕೆ ಆಯುಕ್ತೆ ರೇಣುಕಾ
ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನ್ಯಾ. ನಾಗರಾಜ್, ಪುಟ್ಟಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್, ಕಾರ್ಯದರ್ಶಿ ಸುಧೀರ್, ಉಪಾಧ್ಯಕ್ಷ ಚಂದ್ರಶೇಖರ್, ಹಿರಿಯ ವಕೀಲರು, ಮಹಿಳಾ ವಕೀಲರು, ಕಿರಿಯ ವಕೀಲರು ಇದ್ದರು.
