ಮೈಸೂರು | ನಾನಾ ರಾಜ್ಯಗಳ ರೈತ ಸಂಘದ ಮುಖಂಡರೊಂದಿಗೆ ‘ಕಾವೇರಿ ಸಮನ್ವಯ ಸಭೆ’

Date:

Advertisements

ಪ್ರಕೃತಿ ಒಲವು ತೋರಿದ ಸಂದರ್ಭದಲ್ಲಿ ಕಾವೇರಿ ವಿವಾದವಾಗದೆ ಒಬ್ಬರಿಗೊಬ್ಬರು ನೆಮ್ಮದಿ ಕಂಡುಕೊಂಡಿದ್ದೇವೆ. ಸಮಸ್ಯೆ ಇರುವುದು ಬರಗಾಲದ ಸಂದರ್ಭದಲ್ಲಿ ನಮಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ  ಬೆಳೆಗೆ ನೀರು ಕೊಡಿ ಎಂದಾಗ ನಮಗೆ ಧರ್ಮ ಸಂಕಟವಾಗುತ್ತದೆ. ಉದ್ದೇಶಿತ ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ನಾಲ್ಕು ರಾಜ್ಯಗಳ ಬೇಡಿಕೆ ಬಗೆ ಹರಿದು ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತದೆ. ಇದಕ್ಕೆ ಕಾವೇರಿ ಕುಟುಂಬ ಒಟ್ಟಾಗಿ ಪ್ರಯತ್ನಿಸಿದರೆ ದಶಕಗಳ ಸಮಸ್ಯೆ ಪರಿಹಾರವಾಗಲಿದೆ ಎಂದು ರೈತ ನಾಯಕ ಕುರುಬೂರು ಶಾಂತಕುಮಾರ್ ಹೇಳಿದರು.

ಅವರು ಅ.22ರ ಮಂಗಳವಾರ ಮೈಸೂರಿನ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ಕರ್ನಾಟಕ-ತಮಿಳುನಾಡು-ಕೇರಳ-ಪಾಂಡಿಚೇರಿ ರಾಜ್ಯಗಳ ರೈತ ಸಂಘಗಳ ನಿಯೋಗದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾವೇರಿ ಸಮನ್ವಯ ಸಭೆಯಲ್ಲಿ ಮಾತನಾಡಿದರು.

1002120550

ಇದರಲ್ಲಿ ತಮಿಳುನಾಡಿನ ತಮಿಜಗ ಕಾವೇರಿ ಫಾರ್ಮರ್ಸ್ ಅಸೋಸಿಯೇಷನ್ ಸಂಘಟನೆಯ ಪಿ.ಆರ್ ಪಾಂಡೊಯನ್ , ಕೇರಳದ ಬಿಜು ನೇತೃತ್ವದ ರೈತ ಸಂಘಟನೆಯ ರೈತರು ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಯ ರೈತರು ಭಾಗವಹಿಸಿದ್ದರು.

Advertisements

ರಾಮನಗರ ಜಿಲ್ಲೆಯ ರೈತರ ನಿಯೋಗದ ಪರವಾಗಿ ಭಾಗವಹಿಸಿದ್ದ ಪ್ರಶಾಂತ್ ಹೊಸದುರ್ಗ ಮಾತನಾಡಿ ನಮ್ಮ , ನೆಲ, ಜೀವರಾಶಿ, ಅರಣ್ಯ ಸಂಪತ್ತು, ಧನ ಸಂಪತ್ತು, ಜನ ಜೀವನ ಎಲ್ಲವನ್ನೂ ನಾವು ನಿಮಗಾಗಿ  ಕಳೆದುಕೊಂಡು ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಿದರೆ , ವ್ಯರ್ಥವಾಗಿ ಹೋಗುವ ನೀರನ್ನು ಸಂರಕ್ಷಿಸಿಕೊಂಡು ನಿಮಗೆ ನೀಡಲು ಸಿದ್ದವಿದ್ದೇವೆ. ಇದರ ಬಹುಪಾಲು ಫಲಾನುಭವಿಗಳು ನೀವೇ ಆಗಿರುವಿರಿ. ನಮ್ಮ ತಾತ, ತಂದೆ ಕಾಲದಲ್ಲಿ ಪರಿಹಾರ ಕಾಣದೆ ಬಸವಳಿದು ನಾವು ಉಂಡ ನೋವನ್ನು ನಮ್ಮ ಮಕ್ಕಳಿಗೆ ಉಳಿಸಿ ಹೋಗಲು ಸಾಧ್ಯವಿಲ್ಲ. ದಯವಿಟ್ಟು ಈ ಸೌಹಾರ್ದ ಸಭೆಯಲ್ಲಿ ಮೇಕೆದಾಟು ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದರೆ ಅದು ಕೇವಲ ಅಣೆಕಟ್ಟು ಎನಿಸಿಕೊಳ್ಳದೆ ಎರಡು ರಾಜ್ಯಗಳ ಶಾಂತಿ ಸೌಹಾರ್ದತೆಯ ಸೇತುವೆಯಾಗುತ್ತದೆ ಎಂದು ಪ್ರಾರ್ಥಿಸಿದರು.

1002120551

ಹಲವು ವರ್ಷಗಳ ಹಿಂದೆ ಕಾವೇರಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾವೇರಿ ಕುಟುಂಬ ಎಂಬ ಹೆಸರಿನಲ್ಲಿ ಒಂದುಗೂಡಿದ್ದ ನಾಲ್ಕು ರಾಜ್ಯಗಳ ರೈತರು ನಂತರದ ದಿನಗಳಲ್ಲಿ ಕಾವೇರಿ ವಿವಾದದ ಬಗ್ಗೆ ದೂರ ಉಳಿದಿದ್ದರು. ಈಗ ಸೌಹಾರ್ದ ವಾಗಿ ಬಗೆಹರಿಸುವ ನಿಟ್ಟಿನಲ್ಲಿ  ಎರಡನೇ ಬಾರಿ ಸಭೆ ಸೇರಲಾಗಿತ್ತು.

ಸಭೆಯಲ್ಲಿ ಕರ್ನಾಟಕದ ಪರ ರೈತ ನಾಯಕರು ಮೇಕೆದಾಟು ಯೋಜನೆ ಬಗ್ಗೆ ಸಹಕಾರ ಕೋರಿದರೆ, ತಮಿಳುನಾಡು ಹಾಗೂ ಪಾಂಡಿಚೆರಿಯ ರೈತ ನಾಯಕರು ಮೇಕೆದಾಟು ನಿರ್ಮಾಣ ಬೇಡ ಗಡಿಭಾಗದಲ್ಲಿ ರಾಶಿ ಮನಾಲ್ ಡ್ಯಾಮ್ ನಿರ್ಮಾಣಕ್ಕೆ ಸಹಕಾರ ಕೋರಿದರು. ಕೇರಳದ ರೈತರು ಹೆಚ್ಚಿನ ಟಿಎಂಸಿ ನೀರಿಗಾಗಿ ಬೇಡಿಕೆಯಿತ್ತರು. ಬುಧವಾರ ಈ ರೈತರ ನೇತೃತ್ವದ ನಿಯೋಗವು ಕನಕಪುರ ತಾಲೂಕಿನ ಉದ್ದೇಶಿತ ಮೇಕೆದಾಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ರಾಜ್ಯ ರೈತ ಸಂಘ ಕಗ್ಗಲೀಪುರ ವೃತ್ತದ ಅಧ್ಯಕ್ಷ ನದೀಂ ಪಾಷ, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಬಿ.ಎಂ ಪ್ರಕಾಶ್, ಗಜೇಂದ್ರ ಸಿಂಗ್, ಶ್ರೀನಿವಾಸ್, ಬಡಗಲಪುರ ನಾಗರಾಜು, ಮುಂತಾದವರು ಹಾಜರಿದ್ದರು.

1002120552
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X