ಕುಂಬಾರ ಕೊಪ್ಪಲು ಬೃಂದಾವನ ಬಡಾವಣೆಯಲ್ಲಿ ತ್ಯಾಜ್ಯ ನೀರಿನ ನಿರ್ವಹಣೆ ಕಾಮಗಾರಿಗೆ ಶಾಸಕ ಹರೀಶ್ ಗೌಡ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಮೈಸೂರು ನಗರದ ಕುಂಬಾರ ಕೊಪ್ಪಲು ಬೃಂದಾವನ ಬಡಾವಣೆಯಿಂದ ಯಾದವ್ ಗಿರಿ ಇಂಡಸ್ಟ್ರಿಯಲ್ ಏರಿಯಾವರೆಗೆ ತ್ಯಾಜ್ಯ ನೀರಿನ ನಿರ್ವಹಣೆಗಾಗಿ, ಮುಖ್ಯ ಕೊಳವೆ ಮಾರ್ಗವನ್ನು ಅಳವಡಿಸಿ ಯಂತ್ರ ಗುಂಡಿಗಳನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. 15ನೇ ಹಣಕಾಸು ಯೋಜನೆ 2023-24ರ 3ಕೋಟಿ ಅನುಪಾತದಲ್ಲಿ ಯೋಜನೆ ಜಾರಿ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ನಗರಪಾಲಿಕ ಸದಸ್ಯರಾದ ಶ್ರೀನಿವಾಸ್, ಉಷಾ ಕುಮಾರ್, ನಗರಪಾಲಿಕ ಅಧಿಕಾರಿಗಳಾದ ಸಿಂಧು, ಅಶ್ವಿನ್, ಮುಸ್ತಫ, ಗಿರೀಶ್ ಹಾಗೂ ಸ್ಥಳೀಯ ಮುಖಂಡರಾದ ಮನೋಹರ್, ಕುಮಾರ್, ಗಿರೀಶ್ .ಕೆ, ಮಲ್ಲೇಶ್, ಪರಮೇಶ್ವರ, ವಿನಯ್, ನವೀನ್, ಸತ್ಯ ಹಾಗೂ ಇನ್ನಿತರರು ಹಾಜರಿದ್ದರು.