ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಮೈಸೂರಿನಲ್ಲಿ ‘ ಮಹಾನ್ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ‘ ರ 95 ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
” ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳಿಗೆ ಸಿಂಹ ಸ್ವಪ್ನರಾಗಿದ್ದ ಚಂದ್ರಶೇಖರ್ ಆಜಾದ್ ಕ್ರಾಂತಿಕಾರಿ ಹೋರಾಟದ ಅಗ್ನಿಕುಂಡಕ್ಕೆ ತಮ್ಮನ್ನೇ ತಾವು ಅರ್ಪಿಸಿಕೊಂಡ ಧೀರ.ತಮ್ಮ ಧೈರ್ಯ, ಸಾಹಸಗಳಿಂದ ಬ್ರಿಟಿಷರ ಪಾಲಿಗೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿನ ಅವರ ಜೀವನ ಸಂಘರ್ಷವು ಇಂದಿನ ವಿದ್ಯಾರ್ಥಿ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ “.
‘ ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿ ಕಂಡ ಅಪ್ರತಿಮ ಕ್ರಾಂತಿಕಾರಿಗಳಲ್ಲೊಬ್ಬರಾದ ಆಜಾದ್ ವಿದೇಶಿ ಆಳ್ವಿಕೆಯ ದಾಸ್ಯದ ಸಂಕೋಲೆಗಳಿಂದ,ಎಲ್ಲಾ ಬಗೆಯ ಅನ್ಯಾಯ, ಶೋಷಣೆಗಳಿಂದ ವಿಮೋಚನೆಗೊಳಿಸುವುದು ಸಶಸ್ತ್ರ ಕ್ರಾಂತಿಯ ಮೂಲಕ ಮಾತ್ರವೇ ಸಾಧ್ಯವೆಂದು ನಂಬಿದ್ದರು ‘.

ಆಜಾದ್ ರ ವಿಚಾರಗಳನ್ನು ಜನ ಸಾಮಾನ್ಯರಿಗೆ, ವಿದ್ಯಾರ್ಥಿಗಳ ನಡುವೆ ಕೊಂಡ್ಯೊಯ್ಯುವ ಮೂಲಕ ಯೋಗ್ಯ ರೀತಿಯಲ್ಲಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಕುಕ್ಕರಹಳ್ಳಿ ಕೆರೆ ಉದ್ಯಾನವನ, ಮಹಾರಾಜ ಫೆವಿಲಿಯನ್ ಮೈದಾನ ಹಾಗೂ ಶಾಲಾ, ಕಾಲೇಜುಗಳಲ್ಲಿ ಆಜಾದ್ ಅವರ ವಿಚಾರ ಮೌಲ್ಯಗಳನ್ನು ತಿಳಿಸುವ ಮೂಲಕ ಕಾರ್ಯಕ್ರಮ ಆಚರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಶಿಲಾಫಲಕದ ಮೇಲೆ ಮೂಡಿದ ‘ಸಂವಿಧಾನ ಪೀಠಿಕೆ’
ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಅಂಜಲಿ, ಚಂದನ ಉಪಸ್ಥಿತರಿದ್ದರು

