ರೈತ ಚಳವಳಿ ಬಲಗೊಳ್ಳಲು ಶಿಸ್ತು, ಸಂಘಟನೆ ಮತ್ತು ಐಕ್ಯ ಹೋರಾಟ ಅಗತ್ಯ-ಶಿವಾನಂದ ಕುಗ್ವೆ

Date:

ರೈತ ಚಳವಳಿ ತನ್ನ ಆಶಯ ಹಾಗೂ ಮಹತ್ವವನ್ನು ಉಳಿಸಿಕೊಂಡು ಮುನ್ನಡೆಯಬೇಕಾದರೆ ಕಾರ್ಯಕರ್ತರು ಶಿಸ್ತಿಗೆ ಒಳಪಟ್ಟು, ಸಂಘಟನೆಯ ಜವಾಬ್ದಾರಿಯನ್ನು ಅರಿತುಕೊಂಡು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.

- Advertisement -

ಮೈಸೂರಿನ ಬನವಾಸಿ ತೋಟದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ‘ಪದಾಧಿಕಾರಿಗಳಿಗೆ ಒಂದು ದಿನದ ಅಧ್ಯಯನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ರೈತ ಚಳವಳಿಯ ಇತಿಹಾಸವು ಹೋರಾಟ, ತ್ಯಾಗ ಮತ್ತು ಸಾಮಾಜಿಕ ಬದಲಾವಣೆಯ ಇತಿಹಾಸವಾಗಿದೆ. ರೈತರು, ದಲಿತರು ಸೇರಿದಂತೆ ಶೋಷಿತ ಸಮುದಾಯಗಳ ಚಳವಳಿಗಳು ಸಮಾಜದಲ್ಲಿ ಹೊಸ ಬದಲಾವಣೆಗೆ ದಾರಿ ಮಾಡಿಕೊಟ್ಟಿವೆ. ಸರ್ಕಾರ ರೂಪಿಸುವ ಪ್ರತಿಯೊಂದು ನೀತಿಯನ್ನು ಒಪ್ಪಿಕೊಳ್ಳುವುದಲ್ಲ; ರೈತ ವಿರೋಧಿ ನೀತಿಗಳ ವಿರುದ್ಧ ಬಲವಾಗಿ ಧ್ವನಿ ಎತ್ತಿ, ಪ್ರತಿಭಟಿಸಿ ಹಕ್ಕುಗಳನ್ನು ಪಡೆಯುವ ಪರಂಪರೆಯನ್ನು ರೈತ ಚಳವಳಿ ಬೆಳೆಸಿಕೊಂಡಿದೆ ಎಂದು ಹೇಳಿದರು.

ರೈತರಿಗೆ ಭೂಮಿಯ ಹಕ್ಕು ದೊರೆಯಬೇಕು ಎಂಬ ಆಶಯದ ‘ಉಳುವವನೇ ಭೂಮಿಯ ಒಡೆಯ’ ಹೋರಾಟ ಸೇರಿದಂತೆ ಹಲವು ಐತಿಹಾಸಿಕ ಹೋರಾಟಗಳನ್ನು ಅವರು ಸ್ಮರಿಸಿದರು. ಮೈಸೂರು ದಸರಾ ಸಂದರ್ಭದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಬಂಧನಕ್ಕೊಳಗಾದ ಶಾಂತವೇರಿ ಗೋಪಾಲಗೌಡರ ಹೋರಾಟದ ನೆನಪನ್ನೂ ಪ್ರಸ್ತಾಪಿಸಿದರು.

ಹಿರಿಯ ಮುಖಂಡ ಕಡಿದಾಳ್ ಶಾಮಣ್ಣ ಅವರು 2020ರಲ್ಲಿ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ ಬಂದಾಗ ಅದನ್ನು ನಿರಾಕರಿಸಿದ ಘಟನೆ ಕುರಿತು ಮಾತನಾಡಿದ ಶಿವಾನಂದ ಕುಗ್ವೆ, ದಸರಾ ಉದ್ಘಾಟನೆಯಂತಹ ರಾಜಾಡಳಿತದ ಪಳೆಯುಳಿಕೆ ಹಾಗೂ ಅಸಮಾನತೆಯ ಸಂಕೇತವಾದ ಸಂಪ್ರದಾಯಗಳನ್ನು ಒಪ್ಪದ ನಿಲುವನ್ನು ಶಾಮಣ್ಣ ಅವರು ತೋರಿಸಿದ್ದರು. ರೈತರ ಆತ್ಮಹತ್ಯೆ, ಕಲಬುರಗಿಯಲ್ಲಿ ನಡೆದ ಹತ್ಯೆಯಂತಹ ಘಟನೆಗಳ ಹಿನ್ನೆಲೆಯಲ್ಲಿ ಅವರು ಆ ಆಹ್ವಾನವನ್ನು ಸ್ವೀಕರಿಸಿರಲಿಲ್ಲ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ನಡೆದ ಹೋರಾಟಗಳನ್ನು ಸ್ಮರಿಸಿದ ಅವರು, ರೈತರ ಒಗ್ಗಟ್ಟಿನ ಹೋರಾಟಕ್ಕೆ ಸರ್ಕಾರಗಳು ಮಣಿದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಘಟನೆ ಇದಕ್ಕೆ ಪ್ರಮುಖ ಉದಾಹರಣೆ ಎಂದರು.

ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ದೊರೆಯಬೇಕು ಎಂಬ ಬೇಡಿಕೆಗಾಗಿ ದಶಕಗಳಿಂದ ಹೋರಾಟಗಳು ನಡೆಯುತ್ತಿವೆ. ಆದರೆ ಇಂದಿಗೂ ರೈತರ ಉತ್ಪನ್ನಗಳಿಗೆ ಖಾತರಿಯ ಬೆಲೆ, ಸಮರ್ಪಕ ಮಾರುಕಟ್ಟೆ ಮತ್ತು ಆರ್ಥಿಕ ಭದ್ರತೆ ಸಂಪೂರ್ಣವಾಗಿ ದೊರೆತಿಲ್ಲ. ಆದರೂ ರೈತರ ಹೋರಾಟ ನಿಂತಿಲ್ಲ. ರೈತರು ಸಂಕಷ್ಟದಲ್ಲಿರುವ ಇಂತಹ ಸಂದರ್ಭದಲ್ಲಿ ಹೋರಾಟಕ್ಕೆ ನಿಲ್ಲುವುದು ಚಳವಳಿಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿಯುತ್ತಿರುವುದು ಅತ್ಯಂತ ಗಂಭೀರ ವಿಚಾರ. ‘32 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ’ ಎಂಬ ಅಂಕಿ-ಅಂಶಗಳು ವರದಿಗಳಲ್ಲಿ ಉಲ್ಲೇಖವಾಗುತ್ತಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಆಳವಾಗಿ ಪರಿಶೀಲಿಸಬೇಕು. ಬೆಳೆ ಬೆಳೆದರೂ ಸಾಲ, ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ ರೈತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ ಎಂದರು.

ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಬೇಕಾದರೆ ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ ಶೇ.50ರಷ್ಟು ಲಾಭ ಸೇರಿಸಿ ಬೆಲೆ ನಿಗದಿಪಡಿಸುವುದು, ಸರ್ಕಾರವೇ ಅಗತ್ಯ ಪ್ರಮಾಣದಲ್ಲಿ ಖರೀದಿ ಮಾಡುವುದು, ರೈತರಿಗೆ ಖಾತರಿಯ ಮಾರುಕಟ್ಟೆ ಕಲ್ಪಿಸುವುದು ಹಾಗೂ ಸಾಲದ ಹೊರೆಯಿಂದ ರೈತರನ್ನು ರಕ್ಷಿಸುವಂತಹ ಸಮಗ್ರ ಆರ್ಥಿಕ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಒತ್ತಾಯಿಸಿದರು.

ಮುಕ್ತ ಮಾರುಕಟ್ಟೆಯ ಪರಿಣಾಮವಾಗಿ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಲು ರೈತರ ಪರವಾಗಿ ನಿರಂತರ ಹೋರಾಟ ಅಗತ್ಯ. ಸಂಘಟಿತ ಹೋರಾಟದಿಂದ ಮಾತ್ರ ಇಂತಹ ಬದಲಾವಣೆ ಸಾಧ್ಯ. ವಿವಿಧ ಸಂಘಟನೆಗಳು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಯುಕ್ತ ಹೋರಾಟದ ಬಳಗವನ್ನು ಬಲಪಡಿಸಬೇಕು. ಹೋರಾಟದಲ್ಲಿ ಬಲವಿದೆ; ಒಗ್ಗೂಡಿದಾಗ ಆ ಬಲ ಮತ್ತಷ್ಟು ಹೆಚ್ಚುತ್ತದೆ ಎಂದು ಶಿವಾನಂದ ಕುಗ್ವೆ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರೈತ ಸಂಘಟನೆಯ ಪದಾಧಿಕಾರಿಗಳು ಹೋರಾಟದ ಜವಾಬ್ದಾರಿ ಹಾಗೂ ಸಂಘಟನೆಯ ಅಗತ್ಯತೆಯನ್ನು ಅರಿತುಕೊಳ್ಳಬೇಕು ಎಂದರು.

ಕಡಿದಾಳ್ ಶಾಮಣ್ಣ ಅವರಂತಹ ಹಿರಿಯ ಹೋರಾಟಗಾರರ ಚಿಂತನೆ ಮತ್ತು ಹೋರಾಟದ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಇಂದಿನ ಕಾರ್ಯಕರ್ತರ ಮೇಲಿದೆ. ರೈತ ಸಂಘಟನೆಗೆ ತನ್ನದೇ ಆದ ಮಹತ್ವವಿದ್ದು, ಯಾವುದೇ ಕಾರಣಕ್ಕೂ ಸಂಘಟನೆಯನ್ನು ವೈಯಕ್ತಿಕ ಲಾಭಕ್ಕಾಗಿ ಅಥವಾ ಸಮಾಜಘಾತಕ ಚಟುವಟಿಕೆಗಳಿಗೆ ದುರುಪಯೋಗಪಡಿಸಿಕೊಳ್ಳಬಾರದು. ರೈತರ ಕಾಳಜಿ ಮತ್ತು ಹಿತಾಸಕ್ತಿಯೊಂದಿಗೆ ಸಂಘಟನೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಈ ವಿಶೇಷ ವೀಡಿಯೊ ವೀಕ್ಷಿಸಿ: https://www.youtube.com/watch?v=b9DxzsqEiYo&t=75s

ಚಳವಳಿ ತನ್ನ ಮಹತ್ವವನ್ನು ಕಳೆದುಕೊಳ್ಳದಂತೆ ಕಾರ್ಯಕರ್ತರು ಎಚ್ಚರ ವಹಿಸಬೇಕು. ಸಂಘಟನೆಯ ಹೆಸರಿನಲ್ಲಿ ನಡೆಯುವ ದುರುಪಯೋಗವನ್ನು ತಡೆಯಲು ಇಂತಹ ಅಧ್ಯಯನ ಶಿಬಿರಗಳು ಅಗತ್ಯ. ಕಾರ್ಯಕರ್ತರು ಚಳವಳಿಯ ಇತಿಹಾಸ, ಆಶಯ, ಜವಾಬ್ದಾರಿ ಹಾಗೂ ಸಂಘಟನಾ ಶಿಸ್ತನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?43.81 ಲಕ್ಷ ನೋಟಿಸ್‌: 7.31 ಲಕ್ಷ ಮಾತ್ರ ವಿತರಣೆ; ‘SIR’ ಪ್ರಕ್ರಿಯೆಯ ವೇಗಕ್ಕೆ ಸವಾಲು

ಶಿಬಿರದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎ. ಎಂ. ಮಹೇಶ್ ಪ್ರಭು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ. ವಸಂತ್ ಕುಮಾರ್, ರಮ್ಯ ಶಾಮಣ್ಣ, ಯಧುಶೈಲ ಸಂಪತ್, ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಸಂಘಟನಾ ಕಾರ್ಯದರ್ಶಿ ಪಿ. ಮರಂಕಯ್ಯ, ಮಂಟಕಳ್ಳಿ ಮಹೇಶ್, ಬೆಂಕಿಪುರ ಚಿಕ್ಕಣ್ಣ, ತೋಟಗಾರಿಕಾ ನಿರ್ದೇಶಕಿ ಎಸ್. ನೇತ್ರಾವತಿ, ಸಹಾಯಕ ಕೃಷಿ ಅಧಿಕಾರಿ ಪ್ರಸಾದ್ ಸೇರಿದಂತೆ ಕಾರ್ಯಕರ್ತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮನವಿ

ಚಂದ್ರಂಪಳ್ಳಿ ಜಲಾಶಯ ಶೇ.80ರಿಂದ 90ರಷ್ಟು ಭರ್ತಿಯಾಗಿದ್ದರೂ ಮಳೆಯ ಕೊರತೆಯಿಂದ ಸುತ್ತಮುತ್ತಲಿನ ಗ್ರಾಮಗಳ...

ಕಲಬುರಗಿ | ಅ. 24ರಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳ ಪದಗ್ರಹಣ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಸೇಡಂ ತಾಲೂಕು ಘಟಕದ ನೂತನ...

ಕಲಬುರಗಿ | ಗಾಂಜಾ ಸೇವನೆ ಆರೋಪ: 19 ವರ್ಷದ ಯುವಕನ ಬಂಧನ

ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾಕೀಜಾ ಸಮೀಪದ ಸಾರ್ವಜನಿಕ ಸ್ಥಳದಲ್ಲಿ...

ಕಲಬುರಗಿ | 20 ಪ್ರಕರಣಗಳ ಆರೋಪಿಗೆ ಗುಂಡಾ ಕಾಯ್ದೆ ಅಡಿ ಬಂಧನ

ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಸೇರಿದಂತೆ...