ರೈತ ಚಳುವಳಿ ಪ್ರಜಾಪ್ರಭುತ್ವದ ಚಳುವಳಿ: ಬಡಗಲಪುರ ನಾಗೇಂದ್ರ

Date:

ರೈತ ಚಳುವಳಿಯ ಇತಿಹಾಸ, ಸೈದ್ಧಾಂತಿಕ ನೆಲೆ, ಹೋರಾಟದ ಅನುಭವ ಹಾಗೂ ಸಮಾಜದ ವಿವಿಧ ವರ್ಗಗಳೊಂದಿಗೆ ಬೆಳೆಸಿಕೊಳ್ಳಬೇಕಾದ ಬಾಂಧವ್ಯದ ಕುರಿತು ಕಾರ್ಯಕರ್ತರು ಆಳವಾದ ಅಧ್ಯಯನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕರೆ ನೀಡಿದರು.

- Advertisement -

ಮೈಸೂರಿನ ಬನವಾಸಿ ತೋಟದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ‘ಪದಾಧಿಕಾರಿಗಳಿಗೆ ಒಂದು ದಿನದ ಅಧ್ಯಯನ ಶಿಬಿರ’ದಲ್ಲಿ ಮಾತನಾಡಿದ ಅವರು, ಅಧಿಕಾರ ಮತ್ತು ಆರ್ಥಿಕ ವಿಕೇಂದ್ರೀಕರಣದ ಆಶಯಗಳೊಂದಿಗೆ ರೈತ ಚಳುವಳಿ ಮುನ್ನಡೆಯಬೇಕು. ಹೋರಾಟ ಯಶಸ್ವಿಯಾಗಬೇಕಾದರೆ ಕಾರ್ಯಕರ್ತರಲ್ಲಿ ಬದ್ಧತೆ ಹಾಗೂ ಸಕ್ರಿಯ ತೊಡಗಿಸಿಕೊಳ್ಳುವಿಕೆ ಅಗತ್ಯ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಹೋರಾಟಕ್ಕೆ ಮನೆಯ ಬೆಂಬಲ ಸಹಜವಾಗಿ ಮೂಡಬೇಕು. ಚಳುವಳಿಯ ಮಹತ್ವವನ್ನು ಕಾರ್ಯಕರ್ತರು ಮೊದಲು ಅರಿತುಕೊಳ್ಳಬೇಕು. ಅದಕ್ಕಾಗಿ ಅಧ್ಯಯನ ಬಹುಮುಖ್ಯ. ಪ್ರತಿಯೊಂದು ಹೋರಾಟದ ಹಿಂದೆ ಹಲವರ ತ್ಯಾಗ ಮತ್ತು ಕೊಡುಗೆ ಇರುತ್ತದೆ. ರೈತ ಸಂಘದ ಇತಿಹಾಸ, ಸಿದ್ಧಾಂತ, ಮಹನೀಯರ ಕೊಡುಗೆ ಹಾಗೂ ರೈತ ಚಳುವಳಿ ನಡೆದು ಬಂದ ಹಾದಿಯ ಅರಿವು ಪ್ರತಿಯೊಬ್ಬ ಕಾರ್ಯಕರ್ತನಿಗೂ ಇರಬೇಕು ಎಂದು ಹೇಳಿದರು.

ಓದು, ವಿಷಯ ಗ್ರಹಿಕೆ ಹಾಗೂ ಬರವಣಿಗೆಯ ಸಾಮರ್ಥ್ಯ ಕಾರ್ಯಕರ್ತರಿಗೆ ಅತ್ಯಗತ್ಯ. ಹೋರಾಟದ ಅಧ್ಯಯನ ಮತ್ತು ತಿಳುವಳಿಕೆಯೇ ನಾಯಕತ್ವದ ತಳಹದಿ. ತಿಳುವಳಿಕೆಯೇ ಮೊದಲ ಅಧ್ಯಾಯ ಎಂದು ಅವರು ಹೇಳಿದರು.

ಜಾತಿಯಾಚೆಗಿನ ರೈತ ಸಂಘದ ಬಾಂಧವ್ಯ

ರೈತ ಚಳುವಳಿಯಲ್ಲಿ ಜಾತಿಗೆ ಯಾವುದೇ ಮಹತ್ವವಿಲ್ಲ. ಹಸಿರು ಟವೆಲ್ ಕಂಡರೆ ಅವರೇ ನಮ್ಮ ಕುಟುಂಬ ಎಂಬ ಭಾವನೆ ರೈತ ಸಂಘದ ಕಾರ್ಯಕರ್ತರಲ್ಲಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಾಂಧವ್ಯ ಕಳೆಯುತ್ತಿದೆ. ಅದನ್ನು ಪುನಃ ಗಟ್ಟಿಗೊಳಿಸುವ ಅಗತ್ಯವಿದೆ ಎಂದರು.

ಸಮಾಜವಾದ, ಮಾರ್ಕ್ಸ್‌ವಾದ ಸೇರಿದಂತೆ ಪ್ರಗತಿಪರ ಸಂಘಟನೆಗಳ ಚಟುವಟಿಕೆಗಳನ್ನು ನಡೆಸಲು ಚಳುವಳಿಯ ಸ್ಪಷ್ಟ ಸೈದ್ಧಾಂತಿಕ ನೆಲೆಗಟ್ಟು ಅಗತ್ಯ. ರೈತ ಚಳುವಳಿ ಮೂಲತಃ ಪ್ರಜಾಪ್ರಭುತ್ವದ ಚಳುವಳಿಯಾಗಿದ್ದು, ಜನರ ಭಾಗವಹಿಸುವಿಕೆಯೇ ಅದರ ಶಕ್ತಿ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ನರಗುಂದ-ನವಲಗುಂದ ಹೋರಾಟದ ಹಿನ್ನೆಲೆ

ಕರ್ನಾಟಕ ರಾಜ್ಯ ರೈತ ಸಂಘದ ಇತಿಹಾಸವನ್ನು ವಿವರಿಸಿದ ಅವರು, 1980ರ ಅಕ್ಟೋಬರ್ 17ರಂದು ದಾವಣಗೆರೆಯಲ್ಲಿ ರೈತ ಸಂಘದ ಸ್ಥಾಪನೆ ನಡೆಯಿತು. ರುದ್ರಪ್ಪ ಮೊದಲ ಅಧ್ಯಕ್ಷರಾಗಿದ್ದು, ಸುಂದರೇಶ್ ಪ್ರಧಾನ ಕಾರ್ಯದರ್ಶಿ ಹಾಗೂ ಡಾ. ಚಿಕ್ಕಸ್ವಾಮಿ ಖಜಾಂಚಿಯಾಗಿದ್ದರು. ಸುಮಾರು ಆರು ತಿಂಗಳ ಬಳಿಕ ಪ್ರೊ. ನಂಜುಂಡಸ್ವಾಮಿ ಅವರು ರೈತ ಸಂಘದ ಚಟುವಟಿಕೆಗೆ ಪ್ರವೇಶಿಸಿ ಹೋರಾಟ ಸಮಿತಿಯ ಸಂಚಾಲಕರಾದರು. ಮುಂದೆ ಇದೇ ಹೋರಾಟದ ನೆಲೆ ನರಗುಂದ–ನವಲಗುಂದ ರೈತ ಬಂಡಾಯಕ್ಕೆ ಕಾರಣವಾಯಿತು ಎಂದು ವಿವರಿಸಿದರು. ಪ್ರತಿಯೊಂದು ಸಂಘಟನೆ ಹುಟ್ಟಿಕೊಳ್ಳುವುದಕ್ಕೂ ನಿರ್ದಿಷ್ಟ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂದರ್ಭ ಇರುತ್ತದೆ. ರೈತ ಸಂಘ ಹುಟ್ಟಿಕೊಂಡ ಸಂದರ್ಭವೂ ರೈತರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿದ್ದ ಹಲವು ಸಮಸ್ಯೆಗಳಿಂದ ಕೂಡಿತ್ತು ಎಂದರು.

ಹಸಿರು ಕ್ರಾಂತಿಯ ಸಂದರ್ಭದಲ್ಲಿ ಹೈಬ್ರಿಡ್ ಬೀಜಗಳ ಬಳಕೆ ಹೆಚ್ಚಾಯಿತು. ರೈತರು ಹೊಸ ಕೃಷಿ ಪದ್ಧತಿಗಳತ್ತ ಸಾಗಿದರೂ, ಮತ್ತೊಂದೆಡೆ ಸಾಲದ ಹೊರೆ ಹೆಚ್ಚಾಯಿತು. ದೇಶಕ್ಕೆ ಅನ್ನ ನೀಡುವ ರೈತನೇ ಸಾಲ ತೀರಿಸಲಾಗದ ಸಂಕಷ್ಟಕ್ಕೆ ಸಿಲುಕಿದ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕುಂಠಿತವಾಗಿದ್ದ ಸಂದರ್ಭದಲ್ಲಿ ಅಧಿಕಾರದ ದರ್ಪ, ದಬ್ಬಾಳಿಕೆ ಹಾಗೂ ರೈತರ ಜಮೀನುಗಳ ಜಪ್ತಿ ಹೆಚ್ಚಾಗಿತ್ತು ಎಂದು ಹೇಳಿದರು.

ಸತತ ಬರಗಾಲ, ಬಡತನ ಮತ್ತು ಸಾಲದ ಸಂಕಷ್ಟದಿಂದ ರೈತರು ತತ್ತರಿಸಿದ್ದ ಸಂದರ್ಭದಲ್ಲಿ ಗುಂಡೂರಾವ್ ಸರ್ಕಾರ ರೈತರಿಂದ ಕಡ್ಡಾಯವಾಗಿ ಕಂದಾಯ ವಸೂಲಿ ಮಾಡುತ್ತಿದ್ದ ಪರಿಸ್ಥಿತಿ ಇತ್ತು. ರೈತರ ಮನವಿಗೂ ಸ್ಪಂದಿಸದ ಆಡಳಿತದ ವಿರುದ್ಧವೇ ನರಗುಂದ–ನವಲಗುಂದ ಹೋರಾಟದ ಕಿಡಿ ಹೊತ್ತಿಕೊಂಡಿತು ಎಂದು ವಿವರಿಸಿದರು.

ಗೋಲಿಬಾರ್ ರೈತ ಚಳುವಳಿಗೆ ತಿರುವು

ಜುಲೈ 21ರಂದು ಅಸಂಘಟಿತ ಸಂಘಟನೆಗಳೂ ಹೋರಾಟದಲ್ಲಿ ಭಾಗವಹಿಸಿದವು. ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರಿಂದ ಸೂಕ್ತ ಬಂದೋಬಸ್ತ್ ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ತಾಲೂಕು ಕಚೇರಿಯ ಬೀಗ ತೆರೆಯಲು ಜಿಲ್ಲಾಧಿಕಾರಿ ಸೂಚಿಸಿದರೂ ತಹಶೀಲ್ದಾರ್ ನಿರಾಕರಿಸಿದ ಘಟನೆ ಹಾಗೂ ರೈತರೊಂದಿಗೆ ನಡೆದ ಅನುಚಿತ ವರ್ತನೆ ಆಕ್ರೋಶಕ್ಕೆ ಕಾರಣವಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಹತ್ಯೆಯಾದ ಘಟನೆ ಹಾಗೂ ನಂತರ ನಡೆದ ಗೋಲಿಬಾರ್‌ನಲ್ಲಿ ರೈತರು ಮೃತಪಟ್ಟದ್ದು ಹೋರಾಟದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಯಿತು. ಗ್ರಾಮೀಣ ಭಾಗದ ಜನರ ಮೇಲೆ ನಡೆದ ದಬ್ಬಾಳಿಕೆಯ ವಿರುದ್ಧ ಆಕ್ರೋಶ ಮತ್ತಷ್ಟು ತೀವ್ರಗೊಂಡಿತು ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ರೈತ ಸಂಘಕ್ಕೆ ಬಲ ನೀಡಿದ ಚಿಂತಕರು

ಸಮಾಜವಾದಿ ಚಿಂತನೆ ಹಾಗೂ ರಾಜಕೀಯ ಹೋರಾಟಗಳ ಪ್ರಭಾವವೂ ರೈತ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ ಸೇರಿದಂತೆ ಸಮಾಜವಾದಿ ಚಿಂತಕರ ಪ್ರಭಾವವನ್ನು ಅವರು ಸ್ಮರಿಸಿದರು.

ಧಾರವಾಡದಲ್ಲಿ ರೈತ ಸಂಘದ ಮೊದಲ ಪ್ರಮುಖ ಸಭೆ ನಡೆಯಿತು. ಗೋಲಿಬಾರ್ ನಡೆದ ಸ್ಥಳದಲ್ಲಿಯೇ ರೈತರ ಸಭೆ ನಡೆಸಲಾಯಿತು. ಸುಂದರೇಶ್ ಅವರು ಕಬ್ಬು ಬೆಳೆಗಾರರ ಪರವಾಗಿ ಕಠಿಣ ಧ್ವನಿಯಲ್ಲಿ ಮಾತನಾಡಿದರು. “ಏ ಗುಂಡೂರಾಯ, ವಿಧಾನಸಭೆಯನ್ನು ನಿಮಗೆ ಬರೆದುಕೊಟ್ಟಿಲ್ಲ; ಐದು ವರ್ಷ ಆಯ್ಕೆಯಾಗಿ ಕಳುಹಿಸಿದ್ದೇವೆ” ಎಂಬ ರೀತಿಯ ಕಠೋರ ರಾಜಕೀಯ ಪ್ರತಿರೋಧದ ಮಾತುಗಳು ರೈತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದವು ಎಂದು ವಿವರಿಸಿದರು.

ಕನ್ನಡ ಪ್ರಭ ಪತ್ರಿಕೆಯ ಖಾದ್ರಿ ಶಾಮಣ್ಣ ಸೇರಿದಂತೆ ಪತ್ರಕರ್ತರು ರೈತರ ಪರವಾಗಿ ಬರಹಗಳ ಮೂಲಕ ಧ್ವನಿ ಎತ್ತಿದರು. ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಹಾಗೂ ಶಾಮಣ್ಣ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಜನರ ಮುಂದಿಟ್ಟರು.

“ರೈತ ಸಾಲಗಾರನಲ್ಲ; ಸರ್ಕಾರವೇ ಬಾಕಿದಾರ” ಎಂಬ ಚಿಂತನೆ ರೈತ ಚಳುವಳಿಯಲ್ಲಿ ಪ್ರಮುಖ ಘೋಷಣೆಯಾಗಿ ರೂಪುಗೊಂಡಿತು.

ಹಸಿರು ಟವೆಲ್ ರೈತ ಚಳುವಳಿಯ ಸಂಕೇತ

ತಮಿಳುನಾಡಿನ ರೈತ ಚಳುವಳಿಯ ಅನುಭವ ಮತ್ತು ನಾರಾಯಣಸ್ವಾಮಿ ನಾಯ್ಡು ಅವರ ಸಹಭಾಗಿತ್ವದ ಹಿನ್ನೆಲೆಯಲ್ಲಿ ಹಸಿರು ಟವೆಲ್ ರೈತ ಚಳುವಳಿಯ ಪ್ರಮುಖ ಸಂಕೇತವಾಗಿ ರೂಪುಗೊಂಡಿತು ಎಂದು ಅವರು ಹೇಳಿದರು.

ಸರ್ಕಾರದೊಂದಿಗೆ ನಡೆದ ಮೊದಲ ಸಭೆಯಲ್ಲಿ ವಿದ್ಯುತ್, ಸಾಲಮನ್ನಾ, ಜಪ್ತಿ ಮಾಡಬಾರದು ಸೇರಿದಂತೆ ಒಂಬತ್ತು ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಯಿತು. ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂದರ್ಭದಲ್ಲೂ ರೈತರ ಸಾಲದ ಹೆಸರಿನಲ್ಲಿ ಬಲವಂತದ ಜಪ್ತಿ ನಡೆಯುತ್ತಿತ್ತು. ಇದಕ್ಕೆ ವಿರುದ್ಧವಾಗಿ ಹೋರಾಟಗಳು ತೀವ್ರಗೊಂಡವು.

ಲೇವಿ ಪದ್ಧತಿಯ ವಿರುದ್ಧದ ಹೋರಾಟ, 1980–82ರ ಅವಧಿಯ ಬೃಹತ್ ಸಮಾವೇಶಗಳು ಹಾಗೂ ಬೆಂಗಳೂರಿನಲ್ಲಿ ನಡೆದ ಲಕ್ಷಾಂತರ ರೈತರ ಭಾಗವಹಿಸುವಿಕೆ ರೈತ ಚಳುವಳಿಯನ್ನು ರಾಜ್ಯವ್ಯಾಪಿಯಾಗಿ ವಿಸ್ತರಿಸಿತು.

ಚುನಾವಣಾ ರಾಜಕೀಯಕ್ಕೂ ರೈತ ಸಂಘದ ಪ್ರವೇಶ

1982ರಲ್ಲಿ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಪ್ರಮುಖ ಸಭೆಯಲ್ಲಿ ರೈತ ಸಂಘವು ಚುನಾವಣಾ ರಾಜಕೀಯದಲ್ಲಿ ಸ್ಪರ್ಧಿಸುವ ಕುರಿತು ನಿರ್ಧಾರ ಕೈಗೊಂಡಿತು. ರೈತ ಸಂಘದಿಂದ ಏಳು ಮಂದಿ ಹೊರಬಂದು ಚುನಾವಣಾ ಕಣಕ್ಕಿಳಿದಿದ್ದು, ಅವರಲ್ಲಿ ನಾಲ್ವರು ಶಾಸಕರಾಗಿ ಆಯ್ಕೆಯಾದರು.

ರೈತರ ಮೇಲೆ ಗೋಲಿಬಾರ್ ನಡೆಸಿದ ಗುಂಡೂರಾವ್ ಸರ್ಕಾರಕ್ಕೆ ಮತ ನೀಡಬಾರದು ಎಂಬ ನಿರ್ಧಾರವೂ ಆ ಸಂದರ್ಭದಲ್ಲಿ ಕೈಗೊಳ್ಳಲಾಯಿತು. ಗುಂಡೂರಾವ್ ಅವರನ್ನು ಸೋಲಿಸುವ ಉದ್ದೇಶದಿಂದ ಸೋಮವಾರಪೇಟೆ ಕ್ಷೇತ್ರದಲ್ಲಿ ಸುಂದರೇಶ್ ಅವರ ನೇತೃತ್ವದಲ್ಲಿ ಪ್ರಚಾರ ನಡೆಯಿತು. ಕುಶಾಲನಗರದಲ್ಲಿ ನಡೆದ ಪ್ರಚಾರದ ಸಂದರ್ಭದಲ್ಲಿ ಹಲವು ರಾಜಕೀಯ ಆರೋಪ-ಪ್ರತ್ಯಾರೋಪಗಳೂ ಕೇಳಿಬಂದವು.

ಈ ವಿಶೇಷ ವೀಡಿಯೊ ವೀಕ್ಷಿಸಿ: https://www.youtube.com/watch?v=b9DxzsqEiYo&t=75s

1983ರ ಚುನಾವಣಾ ಫಲಿತಾಂಶದ ಬಳಿಕ ರೈತ ಸಂಘದ ರಾಜಕೀಯ ಪ್ರವೇಶದ ಅನುಭವದ ಬಗ್ಗೆ ಚರ್ಚೆಗಳು ನಡೆದವು. ನಂತರದ ಅವಧಿಯಲ್ಲಿ ಹೆಗ್ಗಡೆ ಮುಖ್ಯಮಂತ್ರಿಯಾದಾಗಲೂ ರೈತ ವಿರೋಧಿ ನಿಲುವುಗಳ ಕುರಿತು ಚಳುವಳಿಯೊಳಗೆ ಟೀಕೆಗಳು ವ್ಯಕ್ತವಾದವು. ದಲಿತ ಚಳುವಳಿಯನ್ನು ವಿಭಜಿಸಿದ ಆರೋಪವೂ ಆ ಕಾಲಘಟ್ಟದ ರಾಜಕೀಯ ಚರ್ಚೆಯಲ್ಲಿ ಕೇಳಿಬಂದಿತು.

ಚಳುವಳಿಗೆ ಮತ್ತೆ ಅಧ್ಯಯನದ ಅವಶ್ಯಕತೆ

ರೈತ ಸಂಘದ ಇತಿಹಾಸವನ್ನು ಕೇವಲ ನೆನಪಿಸಿಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಅದರ ಹಿಂದಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳನ್ನು ಹೊಸ ತಲೆಮಾರಿನ ಕಾರ್ಯಕರ್ತರು ಅಧ್ಯಯನ ಮಾಡಬೇಕು. ಹಿಂದಿನ ಹೋರಾಟಗಳ ಅನುಭವದಿಂದ ಪಾಠ ಕಲಿತು ಇಂದಿನ ರೈತರ ಸಮಸ್ಯೆಗಳಿಗೆ ಸಂಘಟಿತವಾಗಿ ಸ್ಪಂದಿಸಬೇಕು.

ಈ ವಿಶೇಷ ಸುದ್ದಿ ಓದಿದ್ದೀರಾ? 43.81 ಲಕ್ಷ ನೋಟಿಸ್‌: 7.31 ಲಕ್ಷ ಮಾತ್ರ ವಿತರಣೆ; ‘SIR’ ಪ್ರಕ್ರಿಯೆಯ ವೇಗಕ್ಕೆ ಸವಾಲು

“ಹೋರಾಟದ ಅಧ್ಯಯನ, ತಿಳುವಳಿಕೆ ಮತ್ತು ಬದ್ಧತೆಯೇ ನಾಯಕತ್ವದ ತಳಹದಿ. ಚಳುವಳಿಯಲ್ಲಿ ತೊಡಗಿಸಿಕೊಳ್ಳುವಿಕೆಯೇ ಅದರ ಯಶಸ್ಸಿನ ದಾರಿ” ಎಂದು ಬಡಗಲಪುರ ನಾಗೇಂದ್ರ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮನೆಯಲ್ಲಿಯೇ ವ್ಯಕ್ತಿ ಹತ್ಯೆ; ಪ್ರಕರಣ ದಾಖಲು 

ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರದಿಂದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ...

ಕೋಲಾರ | ಆಗ್ನೇಯ ಪದವೀಧರರ ಕ್ಷೇತ್ರ : ಕೋಲಾರ ಜಿಲ್ಲೆಯಲ್ಲಿ ಶೇ. 76.99 ರಷ್ಟು ಮತದಾನ : ಚುನಾವಣಾಧಿಕಾರಿ ಎಂ.ಆರ್. ರವಿಕುಮಾರ್

ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಕೋಲಾರ ಜಿಲ್ಲೆಯಲ್ಲಿ...

ನಾಡ ದೇವತೆಯ ಬಳಿ ನನ್ನ ಅಳಲು; ವಿವೇಕಾನಂದ ಎಚ್. ಕೆ

ನಾಡ ದೇವಿ ತಾಯಿ ಚಾಮುಂಡೇಶ್ವರಿ, ನಿನಗೆ ತುಂಬು ಹೃದಯದ ಧನ್ಯವಾದಗಳು. ನಿನ್ನ...

ಸೌಜನ್ಯ ಕೊಲೆ ಪ್ರಕರಣ: ಎಸ್‌ಐಟಿ ತನಿಖೆ ಚುರುಕು, ತಾಯಿ ಕುಸುಮಾವತಿ ರಕ್ತದ ಮಾದರಿ ಸಂಗ್ರಹ

ಧರ್ಮಸ್ಥಳದಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ...