ನಾಡಹಬ್ಬ ದಸರಾ ಪ್ರಯುಕ್ತ ಬೀದರ ಲೋಕಸಭಾ ಕ್ಷೇತ್ರದ ಸಾರ್ವಜನಿಕರ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರಿನಿಂದ ಬೀದರಗೆ ಅ.20 ರಿಂದ 24 ವರೆಗೆ 3 ವಿಶೇಷ ರೈಲುಗಳು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ವಿಶೇಷ ರೈಲುಗಳ ಸದುಪಯೋಗ ಪಡೆದುಕೊಳ್ಳಲು ಕೇಂದ್ರ ಸಚಿವ ಭಗವಂತ ಖೂಬಾ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಅ. 20 (ಶುಕ್ರವಾರ) ಗಾಡಿ ಸಂಖ್ಯೆ 06521 ಯಶವಂತಪುರದಿಂದ ಬೀದರಗೆ ಹೊರಡಲಿದೆ. ಮರುದಿನ ಅ. 21 (ಶನಿವಾರ) ಗಾಡಿ ಸಂಖ್ಯೆ 06522 ಬೀದರನಿಂದ ಯಶವಂತಪುರಕ್ಕೆ ಹೊರಡಲಿದೆ. ಅ.21 (ಶನಿವಾರ) ಗಾಡಿ ಸಂಖ್ಯೆ 06523 ಯಶವಂತಪುರದಿಂದ ಬೀದರಗೆ, ಮರುದಿನ 22ನೇ ಅಕ್ಟೋಬರ್ (ರವಿವಾರ) ಗಾಡಿ ಸಂಖ್ಯೆ 06524 ಬೀದರನಿಂದ ಯಶವಂತಪುರಗೆ ಚಲಿಸಲಿದೆ .ಅ.23 (ಸೊಮುವಾರ) ಗಾಡಿ ಸಂಖ್ಯೆ 06505 ಯಲಹಂಕದಿಂದ ಬೀದರ, 24ನೇ ಅಕ್ಟೋಬರ್ (ಮಂಗಳವಾರ) ಗಾಡಿ ಸಂಖ್ಯೆ 06506 ಬೀದರನಿಂದ ಯಶವಂತಪುರವರೆಗೆ 3 ವಿಶೇಷ ರೈಲುಗಳು ಚಲಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 20 ಹಾಗೂ 21 ರಂದು ಹೊರಡುವ ರೈಲುಗಳು ಯಶವಂತಪುರದಿಂದ ರಾತ್ರಿ 11:15ಕ್ಕೆ ಹೊರಟು,
ಯಲಹಂಕ, ಧರ್ಮವರಂ, ಮಂತ್ರಾಲಯಂ, ವಾಡಿ, ಸೇಡಂ, ಕಲಬುರಗಿ, ತಾಜಸುಲ್ತಾನಪೂರ, ಕಮಲಾಪೂರ ಮಾರ್ಗವಾಗಿ ಹುಮನಾಬಾದಗೆ ಬೆಳಿಗ್ಗೆ10:49ಕ್ಕೆ ತಲುಪಿ, ಬೀದರಗೆ ಮ. 12:15ಕ್ಕೆ ತಲುಪಲಿವೆ. ಅ. 23ರಂದು ಹೊರಡುವ ರೈಲು ಮಾತ್ರ ಯಲಹಂಕದಿಂದ ರಾತ್ರಿ 11:30ಕ್ಕೆ ಬಿಟ್ಟು ಮರುದಿನ ಬೀದರಗೆ ಮ. 12:15ಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ರೈಲುಗಳು ಬಂದ ದಿನವೇ ಮ.02:30ಕ್ಕೆ ಬೀದರನಿಂದ ಹೊರಟು, ಹುಮನಾಬಾದಗೆ ಮ.03.00 ಗಂಟೆಗೆ ತಲುಪಿ, ಬಂದ ಮಾರ್ಗವಾಗಿಯೇ ಮರುದಿನ ನಸುಕಿನ ಜಾವ ಯಶವಂತಪುರಕ್ಕೆ 04:00 ಗಂಟೆಗೆ ತಲುಪಲಿವೆ. ನಮ್ಮ ಮನವಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಹಬ್ಬಕ್ಕೆ 3 ವಿಶೇಷ ರೈಲುಗಳು ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರೈಲ್ವೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | 82ರ ಇಳಿ ವಯಸ್ಸಿನಲ್ಲೂ ಆರದ ಉತ್ಸಾಹ; ಸ್ವತಃ ಖರ್ಚಿನಲ್ಲೇ ಊರಿನ ರಸ್ತೆ ದುರಸ್ತಿ
ರೈಲ್ವೆ ಇಲಾಖೆಯ ನಿಯಮಾವಳಿಗಳನ್ವಯ ಬಂದ್ ಆಗಿದ್ದ ಹುಮನಾಬಾದ ರಿಸರ್ವೇಷನ್ ಟಿಕೆಟ್ ಕೌಂಟರ್ ಕೂಡ ಸಾರ್ವಜನಿಕರ ಇಚ್ಛೆಯಂತೆ ಬರುವ ಎರಡು ದಿನದೊಳಗೆ ಪುನರ್ ಪ್ರಾರಂಭವಾಗಲಿದೆ. ಹಾಗೂ ಕಮಲಾಪುರದಲ್ಲಿಯೂ ಹೊಸದಾಗಿ ರಿಸರ್ವೇಷನ್ ಟಿಕೆಟ್ ಕೌಂಟರ್ ಪ್ರಾರಂಭಿಸಲಾಗುತ್ತಿದೆ ೇ