ಬೀದರ್‌ | ನಾಡಹಬ್ಬ ದಸರಾ : ಬೀದರ್‌ – ಬೆಂಗಳೂರು ನಡುವೆ ಮೂರು ವಿಶೇಷ ರೈಲು

Date:

ನಾಡಹಬ್ಬ ದಸರಾ ಪ್ರಯುಕ್ತ ಬೀದರ ಲೋಕಸಭಾ ಕ್ಷೇತ್ರದ ಸಾರ್ವಜನಿಕರ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರಿನಿಂದ ಬೀದರಗೆ ಅ.20 ರಿಂದ 24 ವರೆಗೆ 3 ವಿಶೇಷ ರೈಲುಗಳು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ವಿಶೇಷ ರೈಲುಗಳ ಸದುಪಯೋಗ ಪಡೆದುಕೊಳ್ಳಲು ಕೇಂದ್ರ ಸಚಿವ ಭಗವಂತ ಖೂಬಾ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.

- Advertisement -

ಅ. 20  (ಶುಕ್ರವಾರ) ಗಾಡಿ ಸಂಖ್ಯೆ 06521 ಯಶವಂತಪುರದಿಂದ ಬೀದರಗೆ ಹೊರಡಲಿದೆ. ಮರುದಿನ ಅ. 21 (ಶನಿವಾರ) ಗಾಡಿ ಸಂಖ್ಯೆ 06522 ಬೀದರನಿಂದ ಯಶವಂತಪುರಕ್ಕೆ ಹೊರಡಲಿದೆ. ಅ.21  (ಶನಿವಾರ) ಗಾಡಿ ಸಂಖ್ಯೆ 06523 ಯಶವಂತಪುರದಿಂದ ಬೀದರಗೆ, ಮರುದಿನ 22ನೇ ಅಕ್ಟೋಬರ್ (ರವಿವಾರ) ಗಾಡಿ ಸಂಖ್ಯೆ 06524 ಬೀದರನಿಂದ ಯಶವಂತಪುರಗೆ ಚಲಿಸಲಿದೆ .ಅ.23 (ಸೊಮುವಾರ) ಗಾಡಿ ಸಂಖ್ಯೆ 06505 ಯಲಹಂಕದಿಂದ ಬೀದರ, 24ನೇ ಅಕ್ಟೋಬರ್ (ಮಂಗಳವಾರ) ಗಾಡಿ ಸಂಖ್ಯೆ 06506 ಬೀದರನಿಂದ ಯಶವಂತಪುರವರೆಗೆ 3 ವಿಶೇಷ ರೈಲುಗಳು ಚಲಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಅ. 20 ಹಾಗೂ 21 ರಂದು ಹೊರಡುವ ರೈಲುಗಳು ಯಶವಂತಪುರದಿಂದ ರಾತ್ರಿ 11:15ಕ್ಕೆ ಹೊರಟು,
ಯಲಹಂಕ, ಧರ್ಮವರಂ, ಮಂತ್ರಾಲಯಂ, ವಾಡಿ, ಸೇಡಂ, ಕಲಬುರಗಿ, ತಾಜಸುಲ್ತಾನಪೂರ, ಕಮಲಾಪೂರ ಮಾರ್ಗವಾಗಿ ಹುಮನಾಬಾದಗೆ ಬೆಳಿಗ್ಗೆ10:49ಕ್ಕೆ ತಲುಪಿ, ಬೀದರಗೆ ಮ. 12:15ಕ್ಕೆ ತಲುಪಲಿವೆ. ಅ. 23ರಂದು ಹೊರಡುವ ರೈಲು ಮಾತ್ರ ಯಲಹಂಕದಿಂದ ರಾತ್ರಿ 11:30ಕ್ಕೆ ಬಿಟ್ಟು ಮರುದಿನ ಬೀದರಗೆ ಮ. 12:15ಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ರೈಲುಗಳು ಬಂದ ದಿನವೇ ಮ.02:30ಕ್ಕೆ ಬೀದರನಿಂದ ಹೊರಟು, ಹುಮನಾಬಾದಗೆ ಮ.03.00 ಗಂಟೆಗೆ ತಲುಪಿ, ಬಂದ ಮಾರ್ಗವಾಗಿಯೇ ಮರುದಿನ ನಸುಕಿನ ಜಾವ ಯಶವಂತಪುರಕ್ಕೆ 04:00 ಗಂಟೆಗೆ ತಲುಪಲಿವೆ. ನಮ್ಮ ಮನವಿಗೆ ಸಾರ್ವಜನಿಕರ  ಅನುಕೂಲಕ್ಕಾಗಿ ಹಬ್ಬಕ್ಕೆ 3 ವಿಶೇಷ ರೈಲುಗಳು ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರೈಲ್ವೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | 82ರ ಇಳಿ ವಯಸ್ಸಿನಲ್ಲೂ ಆರದ ಉತ್ಸಾಹ; ಸ್ವತಃ ಖರ್ಚಿನಲ್ಲೇ ಊರಿನ ರಸ್ತೆ ದುರಸ್ತಿ

ರೈಲ್ವೆ ಇಲಾಖೆಯ ನಿಯಮಾವಳಿಗಳನ್ವಯ ಬಂದ್ ಆಗಿದ್ದ ಹುಮನಾಬಾದ ರಿಸರ್ವೇಷನ್ ಟಿಕೆಟ್ ಕೌಂಟರ್ ಕೂಡ ಸಾರ್ವಜನಿಕರ ಇಚ್ಛೆಯಂತೆ ಬರುವ ಎರಡು ದಿನದೊಳಗೆ ಪುನರ್ ಪ್ರಾರಂಭವಾಗಲಿದೆ. ಹಾಗೂ ಕಮಲಾಪುರದಲ್ಲಿಯೂ ಹೊಸದಾಗಿ ರಿಸರ್ವೇಷನ್ ಟಿಕೆಟ್ ಕೌಂಟರ್ ಪ್ರಾರಂಭಿಸಲಾಗುತ್ತಿದೆ ೇ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...

ಬೀದರ್‌ | ಬರದಲ್ಲೂ ಪಪ್ಪಾಯಿ ಬೆಳೆದು ₹25 ಲಕ್ಷ ಗಳಿಕೆ: ರೈತ ವೆಂಕಟರೆಡ್ಡಿ ತೋಟಕ್ಕೆ ಶಾಸಕರ ಭೇಟಿ

ಬರ ಪರಿಸ್ಥಿತಿಯ ನಡುವೆಯೂ ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿ...

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...