ಕೆಎಸ್‌ಆರ್‌ಟಿಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 75ರ ಮಲ್ಲರಬಾಣವಾಡಿ ಬಳಿ ನಡೆದಿದೆ.
ಅಪಘಾತದಲ್ಲಿ ಆಟೋ ಚಾಲಕ ಶ್ರೀನಿವಾಸ(40), ಪುಟ್ಟಮ್ಮ(55), ವರ್ಷಿಣಿ(13) ಮೃತಪಟ್ಟಿದ್ದು, ಅದೇ ಆಟೋದಲ್ಲಿದ್ದ ಲೇಖನ(11) ಸ್ಥಿತಿ ಗಂಭೀರವಾಗಿದೆ. ನಾಗರತ್ನಮ್ಮ(35), ವೆಂಕಟೇಶ(37) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಒಂದೇ ಕುಟುಂಬದ ಆರು ಮಂದಿ ಆಟೋದಲ್ಲಿ ಶಾಂತಿನಗರದಿಂದ ನೆಲಮಂಗಲಕ್ಕೆ ವಾಪಸ್ಸಾಗುತ್ತಿತ್ತು ಎನ್ನಲಾಗಿದೆ.

ಬಸ್‌ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರೂ, ಯಾರಿಗೂ ಹಾನಿಯಾಗಿಲ್ಲ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನೆಲಮಂಗಲ | ಭೀಕರ ಅಪಘಾತ; ಫ್ಲೈಓವರ್ ಮೇಲಿಂದ ಬಿದ್ದು ಓರ್ವ ಸ್ಥಳದಲ್ಲೇ ಸಾವು
