ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರಿಗಾಗಿ ನೂತನ ‘BLR Pulse’ ಆ್ಯಪ್

Date:

Advertisements
  • ಗ್ರೇಮ್ಯಾಟರ್ ಸಾಫ್ಟ್‌ವೇರ್ ಸರ್ವೀಸಸ್ ಸಹಯೋಗದೊಂದಿಗೆ ‘ಬಿಎಲ್‌ಆರ್ ಪಲ್ಸ್’ ರಚನೆ
  • ಪ್ರಯಾಣಿಕರ ನಾನಾ ಪ್ರಶ್ನೆಗಳಿಗೆ ಚಾಟ್‌ಬಾಟ್‌ ಮಾಡುವ ಮೂಲಕ ಉತ್ತರ ಹುಡುಕಬಹುದು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಬರುವ ಪ್ರಯಾಣಿಕರಿಗೆ ಸಿಹಿ ಸುದ್ದಿಯಿದ್ದು, ಕೆಐಎಎಲ್ ಪ್ರಯಾಣಿಕರಿಗಾಗಿಯೇ ನೂತನ ‘BLR Pulse’ (ಬಿಎಲ್‌ಆರ್‌ ಪಲ್ಸ್) ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.

ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್‌) ‘ಬಿಎಲ್‌ಆರ್ ಪಲ್ಸ್’ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಗ್ರೇಮ್ಯಾಟರ್ ಸಾಫ್ಟ್‌ವೇರ್ ಸರ್ವೀಸಸ್ ಸಹಯೋಗದೊಂದಿಗೆ ಕೆಐಎಎಲ್ ‘ಬಿಎಲ್‌ಆರ್ ಪಲ್ಸ್’ಅನ್ನು ಅಭಿವೃದ್ಧಿಪಡಿಸಿದೆ. ಇದು ವಿಮಾನಗಳ ವೇಳಾಪಟ್ಟಿ, ಪ್ರಯಾಣಿಕರಿಗೆ ಅಗತ್ಯ ಅಪ್‌ಡೇಟ್‌ಗಳು, ವಿಮಾನ ನಿಲ್ದಾಣದ ಸಾಮಾನ್ಯ ಚಟುವಟಿಕೆಗಳು ಸೇರಿದಂತೆ ಕ್ಷಣ ಕ್ಷಣದ ಮಾಹಿತಿಯನ್ನು ಒದಗಿಸುತ್ತದೆ.

ಇದು ಪ್ರಯಾಣಿಕರ ದೀರ್ಘ ಸರತಿ ಸಾಲು, ಭದ್ರತಾ ಸರತಿ ಸಾಲು, ಕಾಯುವ ಸಮಯವನ್ನು ಕಡಿತ ಮಾಡುತ್ತದೆ. ಜತೆಗೆ ಪ್ರಯಾಣಿಕರಿಗೆ ಪ್ರವೇಶದ ದ್ವಾರ, ನಿರ್ಗಮನ ದ್ವಾರ, ಆಹಾರ, ಇತರೆ ಮಳಿಗೆಗಳ ಬಗ್ಗೆ ರಿಯಲ್ ಟೈಮ್ ಮಾಹಿತಿಯನ್ನು ನೀಡುತ್ತದೆ.

Advertisements

“ಇದು ಪ್ರಯಾಣಿಕರಿಗೆ ಟರ್ಮಿನಲ್ ಒಳಗೆ ತಾವು ಹೋಗಬೇಕಿರುವ ನಿರ್ಗಮನದ ದ್ವಾರ ಹುಡುಕಲು, ನಿಲ್ದಾಣದ ಪ್ರವೇಶ, ನಿರ್ಗಮನಗಳ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತದೆ. ಜತೆಗೆ ವಿಮಾನ ನಿಲ್ದಾಣದ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ಪ್ರಯಾಣಿಕರಿಗೆ ನೆರವು ನೀಡುತ್ತದೆ. ಅಪ್ಲಿಕೇಶನ್‌ನಲ್ಲಿನ ಚಾಟ್‌ಬಾಟ್ ಮಾಡುವ ಅವಕಾಶವಿದ್ದು, ಪ್ರಯಾಣಿಕರು ತಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕಬಹುದು. ಕಾಲಾನಂತರದಲ್ಲಿ ಈ ಅಪ್ಲಿಕೇಶನ್ ಇನ್ನಷ್ಟು ಉತ್ತಮಗೊಳ್ಳಲಿದೆ” ಎಂದು ಬಿಐಎಎಲ್ ಹೇಳಿದೆ.

‘ವೇ ಫೈಂಡರ್’ ಎಂಬ ಆಯ್ಕೆ ಮೂಲಕ ಪ್ರಯಾಣಿಕರು ಸುಲಭವಾಗಿ ವಿಮಾನ ನಿಲ್ದಾಣದಲ್ಲಿ ತಾವು ವಿಮಾನ ಏರುವ ಸ್ಥಳವನ್ನು ಕಂಡುಕೊಳ್ಳಬಹುದು. ಪ್ರಯಾಣಿಕರು ತಮ್ಮ ವಿರಾಮಕ್ಕಾಗಿ ಏರ್‌ಪೋರ್ಟ್‌ ಹೋಟೆಲ್ ಅನ್ನು ಬುಕ್ ಮಾಡಬಹುದು ಅಥವಾ ಅವರ ಕೊನೆಯ ನಿಮಿಷದ ಫ್ಲೈಟ್ ಚೆಕ್-ಇನ್‌ಗಳನ್ನು ಪೂರ್ಣಗೊಳಿಸಬಹುದು ಎಂದು ಹೇಳಿದೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್ ಮಾತನಾಡಿ, “ಪ್ರಯಾಣಿಕರು ವಿಮಾನ ನಿಲ್ದಾಣವನ್ನು ತಲುಪುವ ಮೊದಲೇ ತಮ್ಮ ಚೆಕ್‌ಇನ್‌ಅನ್ನು ಪೂರ್ಣಗೊಳಿಸಿಕೊಳ್ಳಬಹುದು. ನಾವು ನಮ್ಮ ಪ್ರಯಾಣಿಕರ ಸಮಯ ಮತ್ತು ಅಗತ್ಯಗಳನ್ನು ಗೌರವಿಸುತ್ತೇವೆ. ಆದ್ದರಿಂದ ಈ ಅಪ್ಲಿಕೇಶನ್ ಒಂದು ಪರಿಹಾರವಾಗಿದೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ₹100 ಸನಿಹಕ್ಕೆ 1ಕೆಜಿ ಟೊಮೆಟೊ ದರ!

“ಬಿಎಲ್‌ಆರ್‌ ಪಲ್ಸ್ ಮೂಲಕ ಪ್ರಯಾಣಿಕರಿಗೆ ವಿಶಿಷ್ಟವಾದ ಸಂವಾದಾತ್ಮಕ ಅನುಭವವನ್ನು ಪ್ರತಿಕ್ರಿಯೆಯಾಗಿ ಪಡೆದುಕೊಳ್ಳುತ್ತೇವೆ. ಪ್ರಯಾಣಿಕರ ಅನುಭವವು ನಮ್ಮ ವ್ಯವಹಾರದ ಮುಖ್ಯ ಭಾಗವಾಗಿದೆ. ನಾವು ಪ್ರಾರಂಭಿಸುವ ಪ್ರತಿಯೊಂದು ಸೇವೆಯೂ ಪ್ರಯಾಣಿಕರಿಗೆ ಸೌಕರ್ಯವನ್ನು ಹೆಚ್ಚಿಸಲು ಮತ್ತು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಯೊಂದು ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ” ಎಂದು ಹೇಳಿದ್ದಾರೆ.

ಆಪಲ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಪ್ರಯಾಣಿಕರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಬಿಎಂಟಿಸಿ ಬಸ್‌ ಚಾಲಕರಿಗೆ ಹೊಸ ನಿಯಮ: 2 ಬಾರಿ ಅಪಘಾತವೆಸಗಿದರೆ ಕೆಲಸದಿಂದ ವಜಾ

ಬೆಂಗಳೂರು ಮಹಾನಗರ ಸಾರಿಗೆಯ ಬಸ್​ ಚಾಲಕರು ಎರಡು ಸಲ ಅಪಘಾತವೆಸಗಿ, ತಪ್ಪು...

Download Eedina App Android / iOS

X