ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಚಿತ್ರತಂಡ ‘ ನಿಂಬಿಯ ಬನಾದ ಮ್ಯಾಗ ” ಇದೇ ಏಪ್ರಿಲ್ ಒಂದರಂದು ತೆರೆ ಕಾಣುತ್ತಿದೆ. ನಟ ಸಾರ್ವಭೌಮ ಡಾ ರಾಜಕುಮಾರ್ ಅವರ ದೊಡ್ಡ ಮಗಳಾದ ಲಕ್ಷ್ಮಿ ಗೋವಿಂದ ರಾಜ ರವರ ಪುತ್ರ ಷಣ್ಮುಖ ಗೋವಿಂದರಾಜ್ ನಾಯಕ ನಟನಾಗಿ ನಟಿಸಿರುವ ಚೊಚ್ಚಲ ಚಲನಚಿತ್ರವಾಗಿದೆ ಎಂದು ಮಾಹಿತಿ ನೀಡಿದರು.
ನಾಯಕ ನಟ ಷಣ್ಮುಖ ಗೋವಿಂದರಾಜ್ ಮಾತನಾಡಿ ” ಸಿನಿಮಾ ಮಾಡಲು ಇಷ್ಟವಿದ್ದರೂ ನನ್ನನ್ನು ಹಾಕಿಕೊಳ್ಳಲು ಯಾರು ಮುಂದೆ ಬರುತ್ತಿರಲಿಲ್ಲ. ತಂದೆ ತಾಯಿಯು ಸಹ ನಟನೆ ಬಗ್ಗೆ ನನ್ನನ್ನು ಕೇಳಲಿಲ್ಲ . ನಾನೊಂದು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದೆ. ನನ್ನನ್ನು ನಿರ್ಮಾಪಕರಾದ ಮಹಾದೇಶ ಹಾಗೂ ನಿರ್ದೇಶಕ ಅಶೋಕ್ ಕಡಬ ಸಂಪರ್ಕಿಸಿ, ನಿಮಗಾಗಿ ಒಂದು ಚಿತ್ರಕಥೆ ಇದೆ ದಯವಿಟ್ಟು ನೀವೇ ಅದರಲ್ಲಿ ನಾಯಕ ನಟನ ಪಾತ್ರ ಮಾಡಬೇಕು ಎಂದು ಕೇಳಿಕೊಂಡರು.
ತಂದೆ, ತಾಯಿಗೆ ಒಪ್ಪಿಸಿ ಚಿತ್ರಕಥೆ ಕೇಳಿದಾಗ ನಟಿಸಲು ತಿಳಿಸಿದರು. ಇದೊಂದು ಸುಂದರ ಸಂಸಾರಿಕ ಚಿತ್ರವಾಗಿದ್ದು, ತಂದೆ ತಾಯಿ ಮಗನ ಸುತ್ತ ಹೆಣೆದ ಕಥೆಯಾಗಿದೆ. ಸುಂದರವಾದ ನಾಲ್ಕು ಹಾಡುಗಳು ಮೂಡಿಬಂದಿವೆ. ತಾತ ರಾಜ್ ಕುಮಾರ, ಶಿವಣ್ಣ,ಪುನೀತ್, ರಾಘಣ್ಣನವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತೇನೆ ” ಎಂದು ತಿಳಿಸಿದರು.
ನಿರ್ಮಾಪಕ ಮದೇಶ್ ಮಾತನಾಡಿ ‘ ಕರ್ನಾಟಕದ 70 ಸಿನಿಮಾ ಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಸುಮಾರು ಒಂದು ಕೋಟಿ ಬಜೆಟ್ ನಲ್ಲಿ ಮೂಡಿ ಬಂದಿದೆ.ಸಿನಿ ರಸಿಕರು ಚಿತ್ರ ಮಂದಿರದಲ್ಲಿ ವೀಕ್ಷಿಸಿ ಬೆಂಬಲಿಸಬೇಕು ‘ ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಸಮಾಜದಲ್ಲಿ ಒಡೆದ ಮನಸ್ಸುಗಳನ್ನು ಬೆಸೆಯುವ ಶಕ್ತಿ ಪತ್ರಕರ್ತರಿಗಿದೆ : ಎಂ ಎ ನಿರಂಜನ್
ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ಮಾಪಕ ಎಸ್ ಎ ಶ್ರೀನಿವಾಸ್. ಸುನಾದ್ ರಾಜ್. ಸಂದೀಪ್ ಮಲಾನಿ ಸೇರಿದಂತೆ ಇನ್ನಿತರರು ಇದ್ದರು.