ಕಾವೇರಿ ಆರತಿಗಲ್ಲ – ನದಿ ಸಂರಕ್ಷಣೆಗೆ ಆದ್ಯತೆ ಕೊಡಿ!

Date:

Advertisements

ಕಾವೇರಿ ನದಿಗೆ ಪೂಜೆ ಮಾಡುವ ಬದಲಾಗಿ, ನದಿಗೆ ತಂದು ಸುರಿಯುತ್ತಿರುವ ತ್ಯಾಜ್ಯವನ್ನು ತಡೆದು ಶುದ್ಧವಾಗಿ ಇಟ್ಟುಕೊಂಡರೆ ಅದೇ ಶ್ರೇಷ್ಠವಾದ ಕೆಲಸ. ಅದನ್ನು ಮಾಡುವುದು ಬಿಟ್ಟು ಪೂಜೆ ಮಾಡುತ್ತೇವೆಂದು ಹೇಳುವುದು ಕೇವಲ ತೋರಿಕೆಯ ಕೆಲಸವಷ್ಟೇ. ಸಾರ್ವಜನಿಕರ ತೆರಿಗೆಯ ಹಣವನ್ನು ಇಂತಹ ಅನಗತ್ಯ ಉದ್ದೇಶಕ್ಕೆ ಬಳಸುವುದು ಜನರಿಗೆ ಮಾಡುವ ವಂಚನೆ ಎಂದು ಮಂಡ್ಯದ ಸಾಮಾಜಿಕ ಹೋರಾಟಗಾರ ಎಂ.ವಿ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ಹೊರಟಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಾವೇರಿ ಆರತಿ ಎಂಬುದು ಅನಗತ್ಯವೆಂದು ಮಂಡ್ಯದ ರೈತರು, ಚಿಂತಕರು, ಹೋರಾಟಗಾರರು ಹೇಳುತ್ತಿದ್ದಾರೆ. ಕಾವೇರಿ ಆರತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಎಂ.ವಿ ಕೃಷ್ಣ, “ಗಂಗಾ ಆರತಿಯಿಂದಾಗಿ ಗಂಗಾ ನದಿ ಇನ್ನಷ್ಟು ಮಲಿವಾಗುತ್ತಿದೆ. ಈ ಕಾರ್ಯಕ್ರಮದಿಂದ ವ್ಯರ್ಥವಾಗಿ ಹಣ ಪೋಲಾಗಿದೆ. ಅದನ್ನೇ ರಾಜ್ಯ ಸರ್ಕಾರವು ಮಾಡಲು ಹೊರಟಿದೆ. ಅದರ ಬದಲಾಗಿದೆ, ಕಾವೇರಿ ನದಿಯುದ್ಧಕ್ಕೂ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ನದಿ ದಂಡೆಯಲ್ಲಿ ಕಸ, ಪ್ಲಾಸ್ಟಿಕ್ಅನ್ನು ಸುರಿಯಲಾಗುತ್ತಿತ್ತು. ಅದನ್ನು ತೆರವುಗೊಳಿಸಿ, ನದಿಯನ್ನು ಸಂರಕ್ಷಿಸುವ ಕೆಲಸವಾಗಬೇಕು” ಎಂದಿದ್ದಾರೆ.

ಕೆಂಬೂತಗೆರೆ ಶಿವಲಿಂಗಯ್ಯ ಮಾತನಾಡಿ, “ಕರ್ನಾಟಕ ಸರ್ಕಾರ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತಿದೆ. ಮೋದಿ ನೇತೃತ್ವದ ಸರ್ಕಾರ ಗಂಗಾ ಆರತಿ ಮಾಡಿದ್ದನ್ನು ಒಂದು ನೆಪವಾಗಿ ಇಟ್ಟುಕೊಂಡು ಇವರು ಕೂಡ ಮಂಗಳಾರತಿ ಮಾಡಲು ಹೊರಟಿದ್ದಾರೆ. ಮೋದಿ ಜನಗಳ ಭಾವನೆಯನ್ನು ಬಂಡವಾಳ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಅವರು ಜನರ ಹಿತಾಸಕ್ತಿಗಿಂತ ಭಾವನೆಗಳನ್ನು ಕೆರಳಿಸಿ ಲಾಭ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡ ಅದೇ ದಾರಿಯಲ್ಲಿ ಹೊರಟಿರುವುದು ವಿಪರ್ಯಾಸ. ಜನರ ಸಮಸ್ಯೆಗಳಾದ ಅನ್ನ, ವಸತಿ ಇತ್ಯಾದಿ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇವತ್ತು ಮೌಢ್ಯವನ್ನು ಬಿತ್ತಲು ಹೊರಟಿರುವುದು ನಾಚಿಕೆಗೇಡು” ಎಂದಿದ್ದಾರೆ.

Advertisements

ಗುಳಘಟ್ಟ ಉಜಿನಿಗೌಡ ಮಾತನಾಡಿ, “ಮಂಡ್ಯ ಅಂದರೆ ಹಸಿರು ಕ್ರಾಂತಿ, ಸಕ್ಕರೆ ನಾಡು ಅಂತ ಮಾಧ್ಯಮಗಳು ವೈಭವಿಕರಿಸುತ್ತಿದ್ದವು. ಇವತ್ತು ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳು ಸಮಸ್ಯೆಯಲ್ಲಿವೆ. ಕಾಲಕಾಲಕ್ಕೆ ಮಳೆ. ಬೆಳೆ ಆಗುತ್ತಿಲ್ಲ. ಕಾಂಗ್ರೆಸ್ಸಿನವರು ಜನರಲ್ಲಿ ವೈಚಾರಿಕತೆ ಮೂಡಿಸುವ ಬದಲು ಮೌಢ್ಯ ಬಿತ್ತಲು ಹೊರಟಿದ್ದಾರೆ. ರಾಜಕಾರಣಿಗಳು ಜನರ ಗಮನವನ್ನು ಬೇರೆ ಕಡೆಗೆ ಸೆಳೆದು, ವಿಷಯಾಂತರ ಮಾಡಿ, ವಾಸ್ತವ ಸಮಸ್ಯೆಯಿಂದ ದೂರ ಮಾಡಿ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಆಲೂರಿನ ನಿವೃತ್ತ ಶಿಕ್ಷಕರಾದ ಚನ್ನಪ್ಪ ಮಾತನಾಡಿ, “ಕರ್ನಾಟಕ ಸರ್ಕಾರ ಗಂಗಾರತಿಯನ್ನು ಕಾವೇರಿ ಆರತಿಯಾಗಿ ಪರಿವರ್ತನೆ ಮಾಡ ಹೊರಟಿದೆ. ಚೆಲುವರಾಯಸ್ವಾಮಿ ಮುಂದಾಳತ್ವದ ತಂಡ ಉತ್ತರ ಭಾರತದಲ್ಲಿ ಅಧ್ಯಯನ ಮಾಡಿ ಬಂದು ಅನುಕರಣೆ ಮಾಡಲು ಹೊರಟಿದೆ. ಇದರಲ್ಲಿ ಪರಿಸರವನ್ನು ನೋಡಬೇಕಾಗುತ್ತದೆ. ನಾನು ಮೂರು ಸಲ ಗಂಗಾ ಆರತಿಯಲ್ಲಿ ಭಾಗವಹಿಸಿದ್ದೇನೆ. ಒಂದು ಮಣ್ಣಿನ ತಟ್ಟೆಯಲ್ಲಿ ದೀಪವನ್ನು ಇಟ್ಟು ನದಿಯಲ್ಲಿ ತೇಲಿ ಬಿಡುವುದೇ ಗಂಗಾ ಆರತಿ. ಲಕ್ಷಾಂತರ ಜನ ಹೀಗೆ ದೀಪಗಳನ್ನು ತೇಲಿ ಬಿಟ್ಟರೆ ನದಿಯ ಪಾವಿತ್ರ್ಯತೆ ಹಾಳಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ

ಬೊಪ್ಪಸಮುದ್ರದ ಪೃಥ್ವಿರಾಜ್ ಮಾತನಾಡಿ, “ಕಳೆದ ವರ್ಷ ಬೀಕರ ಬರಗಾಲ ಎದುರಾಗಿತ್ತು. ಉತ್ತಮ ಬೆಳೆ ಇಲ್ಲದೆ, ರೈತರು ಅಪಾರ ನಷ್ಟ ಅನುಭಿವಿಸಿದ್ದಾರೆ. ಈಗ ಮಳೆ ಚೆನ್ನಾಗಿ ಆಗಿದ್ದು ಅಣೆಕಟ್ಟುಗಳು ತುಂಬಿವೆ. ಆದರೆ, ಕೊನೆ ಭಾಗದ ರೈತರ ಜಮೀನುಗಳಿಗೆ ಇನ್ನೂ ಸರಿಯಾಗಿ ನೀರು ತಲುಪಿಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಇಂತಹ ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದ ರೀತಿ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಗಂಗಾ ಆರತಿ ಎಂಬ ಕಾರ್ಯಕ್ರಮದ ಮೂಲಕ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುವುದಲ್ಲದೆ, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವುದು ರಾಜ್ಯದ ಜನರಿಗೆ ಮಾಡುವ ಅನ್ಯಾಯ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ನ್ಯಾಯ, ಬಡವರ ಪರವಾಗಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಲ್ಲಿ ಮೌಢ್ಯ ಬಿತ್ತಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ.

ಈಗಾಗಲೇ ಕಾವೇರಿ ನದಿಯ ನೀರು ‘ಸಿ’ ಗುಣಮಟ್ಟ ತಲುಪಿದೆ. ಅಂದರೆ, ಈಗ ಕೈಗಾರಿಕೆಗಳ ಬಳಕೆಗಷ್ಟೆ ಯೋಗ್ಯವಾಗಿದೆ.
ನದಿ ಹರಿಯುವ ಊರು, ಪಟ್ಟಣಗಳ ಗಲೀಜು ನೇರವಾಗಿ ನದಿಗೆ ಸೇರುತ್ತಿವೆ. ಕಾರ್ಖಾನೆಗಳ ತ್ಯಾಜ್ಯವೂ ನದಿಯನ್ನು ಸೇರುತ್ತಿದೆ. ಇದೆಲ್ಲವನ್ನೂ ತಡೆದು, ನದಿಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕಿರುವ ಸರ್ಕಾರ, ಆರತಿ ಹೆಸರಿನಲ್ಲಿ ಅನಗತ್ಯ ಹಣ ವ್ಯರ್ಥ ಮಾಡಲು ಮುಂದಾಗಿರುವುದು ಸರಿಯಲ್ಲ. ಸರ್ಕಾರವು ತನ್ನ ನಿರ್ಧಾರವನ್ನು ಬದಲಿಸಬೇಕು. ನದಿ ರಕ್ಷಣೆಗೆ ಆಧ್ಯತೆ ಕೊಡಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X