ವಿಜಯಪುರ | ಪ್ರಾದೇಶಿಕ ಅಸಮಾನತೆಯಿಂದ ಉತ್ತರ ಕರ್ನಾಟಕ ಹಿಂದುಳಿದಿದೆ: ನ್ಯಾಯವಾದಿ ದಾನೇಶ ಅವಟಿ

Date:

Advertisements

ಹಲವಾರು ಮಹನೀಯರ ತ್ಯಾಗ, ಬಲಿದಾನ ಹಾಗೂ ಹೋರಾಟದ ಪ್ರತಿಫಲವಾಗಿ ಅಖಂಡ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು,ಕನ್ನಡನಾಡು,ನುಡಿ,ನೆಲ, ಜಲ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು ಎಪ್ಪತ್ತು ವರ್ಷ ಗತಿಸುತ್ತಿದ್ದರೂ, ಪ್ರಾದೇಶಿಕ ಅಸಮಾನತೆಯಿಂದ ಉತ್ತರ ಕರ್ನಾಟಕ ಭಾಗ ಎಲ್ಲ ರಂಗದಲ್ಲೂ ಹಿಂದುಳಿದಿದೆ. ಇದು ದುರದೃಷ್ಟಕರ ಎಂದು ನ್ಯಾಯವಾದಿ ದಾನೇಶ ಅವಟಿ ತಿಳಿಸಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಜಯಪುರ ನಗರದ ಸಿಂದಗಿ ರಸ್ತೆಯ ಜೈ ಕರ್ನಾಟಕ ಕಾಲೋನಿಯ ಇಮ್ಮಡಿ ಪುಲಿಕೇಶಿ ಯುವಕ ಸಂಘಟನೆಯ ಮಿತ್ರರೊಂದಿಗೆ ತಾಯಿ ಶ್ರೀ ಭುವನೇಶ್ವರಿ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಭಾಗ ಎಲ್ಲ ರಂಗದಲ್ಲೂ ಹಿಂದುಳಿಯಲು ಕಾರಣ ಆಳುವ ಸರ್ಕಾರ ಮತ್ತು ಜನಪ್ರತಿನಿಧಿಗಳು. ಅಧಿಕಾರಿ ವರ್ಗ ಉತ್ತರ ಕರ್ನಾಟಕದ ಸಮಗ್ರ ಅಭಿವದ್ಧಿಗೆ ಆದ್ಯತೆ ನೀಡಬೇಕು ಎಂದು ಅವಟಿ ಇದೇ ವೇಳೆ ಆಗ್ರಹಿಸಿದರು.

Advertisements

ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ, ಮಹಾಜನ್, ಸರೋಜನಿ ಮಹಿಷಿ, ಬರಗೂರು ವರದಿಯಂತಹ ಮಹತ್ವದ ವರದಿಗಳ ಶಿಫಾರಸುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೂ, ಅವುಗಳನ್ನು ಇಷ್ಟು ದಿನ ರಾಜ್ಯಭಾರ ಮಾಡಿದ ಸರ್ಕಾರಗಳು, ಜನಪ್ರತಿನಿಧಿಗಳು ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿಲ್ಲ ಎಂದು ದೂರಿದರು.

WhatsApp Image 2024 11 01 at 7.20.53 PM

ಕೇವಲ ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಿ ಕೆಲವೊಂದಿಷ್ಟು ಜಾತ್ರೆ ಉತ್ಸವ ಮಾಡಲು ಅನುದಾನ ಕೊಟ್ಟರಷ್ಟೇ ಸಾಲದು. ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾದ ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿ,ನಗರಗಳ ಜನರ ಜೀವನಮಟ್ಟ ಸುಧಾರಣೆಗೆ, ಸರ್ವರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಆಳುವ ಸರ್ಕಾರಗಳು ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಶರಣು ಜೋಗುರ, ಮೋಹನಕುಮಾರ ಬಣ್ಣದ, ಪರಶುರಾಮ ರಜಪೂತ, ಡಾ.ಸಂಜು ಸಿಳ್ಳಿನ., ಡಾ.ವಾಸು ಢಗೆ, ಶಿವಲಿಂಗಯ್ಯ ತೆಗ್ಗಳ್ಳಿ, ಕರಣ ಸಿಂಗ ಹಜೇರಿ, ಶಿವು ಲೋಗಾವೀ, ಅಪ್ಪು ಗುನ್ನಾಪುರ, ಪ್ರಭು ಮಠ, ರಾಚಯ್ಯ ಚೌಕಿಮಠ, ಶ್ರೀಶೈಲ ಯಾದವಾಡಮಠ, ನಾಗೇಶ ನಿರ್ವಾಣಶೆಟ್ಟಿ, ರುದ್ರು ಪಾಟೀಲ, ಸಂತೋಷ ನಾವಿ, ಮಹಾದೇವ ನಾವಿ, ಬಸವರಾಜ ಇಂಡಿ, ಹರೀಶ್ ಚೌಕಿಮಠ, ಗಿರೀಶ ಚೌಕಿಮಠ, ಅನಿಲ್ ಕುಮಾರ್ ಇಂಡಿ, ರಮೇಶ್ ಹಜೇರಿ, ಜೈ ಕರ್ನಾಟಕ ಕಾಲೋನಿ, ಅಲ್ಲಾಪುರ ಅಗಸಿ, ಸ್ಟೇಟ್ ಬ್ಯಾಂಕ್ ಕಾಲೋನಿ, ನಾಗೇಶ ಕಾಲೋನಿಯ ಅನೇಕ ಜನರು ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X