ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಆಗ್ರಹಿಸಿ ಯಾದಗಿರಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಚನ್ನಪ್ಪ ಆನೇಗುಂದಿ ಬೆಂಬಲ ಸೂಚಿಸಿ, ಧರಣಿ ನಡೆಸಿದಾಗ ಪೊಲೀಸರು ಅಮಾನವೀಯತೆಯಿಂದ ನಡೆದುಕೊಂಡು, ಮನಬಂದಂತೆ ಎಳೆದಾಡಿ ಪೊಲೀಸ್ ಜೀಪಿನೊಳಗೆ ಹಾಕಿ ವಶಕ್ಕೆ ಪಡೆದ ಘಟನೆ ನಡೆದಿದೆ.
ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ICDS ಪ್ರತ್ಯೇಕ ನಿರ್ದೇಶನಾಲಯ ಮಾಡಿ, ಪೂರಕ ಪೌಷ್ಠಿಕ ಆಹಾರದ ಬದಲು ಸಂಪೂರ್ಣ ಆಹಾರ ನೀಡಿ, ಗ್ರಾಜ್ಯುವಿಟಿ ಅನುದಾನದ ಬಿಡುಗಡೆಗಾಗಿ ಒತ್ತಾಯಿಸಿ, 2018ರಿಂದ ಕೇಂದ್ರ ಸರ್ಕಾರದ ವೇತನ ಹೆಚ್ಚಿಸದ ಧೋರಣೆ ಖಂಡಿಸಿ ಮತ್ತು ಬಜೆಟ್‌ನಲ್ಲಿ ಅನುದಾನ ಹೆಚ್ಚಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(CITU) ವತಿಯಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು
— eedina.com ಈ ದಿನ.ಕಾಮ್ (@eedinanews) December 18, 2024
ಆಗ್ರಹಿಸಿ ಯಾದಗಿರಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಚನ್ನಪ್ಪ ಆನೇಗುಂದಿ ಬೆಂಬಲ ಸೂಚಿಸಿ, ಧರಣಿ ನಡೆಸಿದಾಗ ಪೊಲೀಸರು ಅಮಾನವೀಯತೆಯಿಂದ ನಡೆದುಕೊಂಡು, ಮನಬಂದಂತೆ ಎಳೆದಾಡಿ ಪೊಲೀಸ್ ಜೀಪಿನೊಳಗೆ ಹಾಕಿ ವಶಕ್ಕೆ ಪಡೆದ ಘಟನೆ ನಡೆದಿದೆ. pic.twitter.com/egl206s1Mf
ಜಿಲ್ಲಾ ಕೇಂದ್ರದಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿಗೆ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆಗೆ ಬೆಂಬಲ ಸೂಚಿಸಿ ರೈತ ಮುಖಂಡ ಚನ್ನಪ್ಪ ಆನೇಗುಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವಾಗ ಪೋಲಿಸ್ ಅಧಿಕಾರಿ (ಪಿಎಸ್ಐ) ಪ್ರತಿಭಟನಾನಿರತರೊಂದಿಗೆ ಅಮಾನವೀಯತೆಯಿಂದ ನಡೆದುಕೊಂಡು ಅವರನ್ನು ಮನಬಂದಂತೆ ಎಳೆದಾಡಿ ಪೋಲಿಸ್ ಜಿಪ್ ಕರೆದುಕೊಂಡು ಹೋಗಿದ್ದಾರೆ.
ಕೂಲಿ ಕಾರ್ಮಿಕ ಸಂಘದ ಜಿಲ್ಲಾ ಮುಖಂಡ ಮಾತನಾಡಿ, “ಪ್ರತಿಭಟನಾನಿರತರೊಂದಿಗೆ ಪಿಎಸ್ಐ ಅಸಭ್ಯವಾಗಿ ವರ್ತಿಸಿ ರೈತ ಮುಖಂಡ ಚನ್ನಪ್ಪ ಆನೇಗುಂದಿ ಅವರನ್ನು ಎಳೆದುಕೊಂಡು ಪೋಲಿಸ್ ಜಿಪ್ ನಲ್ಲಿ ಕರೆದುಕೊಂಡು ಹೊಗಿರುವುದನ್ನು ಖಂಡನೀಯ” ಎಂದರು.
“ಪ್ರತಿಭಟನಾನಿರತರೊಂದಿಗೆ ಅಮಾನವೀಯತೆಯಿಂದ ನಡೆದುಕೊಂಡ ಯಾದಗಿರಿ ಪಿಎಸ್ಐ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಅವರನ್ನುಅಮಾನತು ಮಾಡಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
