ಕನ್ನಡ ರಾಜ್ಯೋತ್ಸವದ ದಿನವಾದ ನವಂಬರ್ 1ರಂದು ‘ಉತ್ತಮ ಭವಿಷ್ಯಕ್ಕಾಗಿ’ ಎಂಬ ಟ್ಯಾಗ್ ಲೈನ್‌ನೊಂದಿಗೆ ಪ್ರಜಾಧ್ವನಿ ಎಂಬ ಸಂಘಟನೆಯು ಲಾಂಛನ ಬಿಡುಗಡೆ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
ಸಂಪಾಜೆ ಕಲ್ಲುಗುಂಡಿ ಸಹಕಾರಿ ಕೃಷಿಪತ್ತಿನ ಸಂಘದಲ್ಲಿ ರಾಜ್ಯೋತ್ಸವದ ಧ್ವಜಾರೋಹಣವನ್ನು ಸೊಸೈಟಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ನೆರವೇರಿಸಿದರು.
ಆ ಬಳಿಕ ಸೊಸೈಟಿಯ ಸಮನ್ವಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕ ಮೈಕಲ್ ಪಾಯಸ್ ಪ್ರಜಾಧ್ವನಿ ಸಂಘಟನೆಯ ಲಾಂಛನ ಬಿಡುಗಡೆಗೊಳಿಸಿದರು.

ಕೆ. ಪಿ ಜಾನಿ ಸ್ವಾಗತಿಸಿ, ಲಕ್ಷ್ಮೀಶ ಗಬಲಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಜಾಧ್ವನಿಯ ಸಂಚಾಲಕ ಗೋಪಾಲ್ ಪೆರಾಜೆ ತಮ್ಮ ಸಂಘಟನೆಯ ರೂಪುರೇಷೆ ಕಾರ್ಯವಿಧಾನಗಳ ಬಗ್ಗೆ ವಿವರಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ: ಓರ್ವ ಮೃತ್ಯು; ಮತ್ತೋರ್ವ ಗಂಭೀರ
ಕೊನೆಯಲ್ಲಿ ಲುಕಾಸ್ ಟಿ ಐ ವಂದಿಸಿದರು. ವೇದಿಕೆಯಲ್ಲಿ ಲಿಸಿ ಮೊನಾಲಿಸ, ಶ್ರೀಮತಿ ಸುಶೀಲ, ಇಬ್ರಾಹಿಮ್ ಎ. ಬಿ. ಉಪಸ್ಥಿತರಿದ್ದರು.

