- ಗೆಳೆಯರು, ಒಡನಾಡಿಗಳಿಂದ ಅಂತಿಮ ನಮನ
- ಅನಾರೋಗ್ಯದಿಂದ ಮಂಗಳೂರಿನಲ್ಲಿ ಜು.1ರಂದು ನಿಧನ
ಅಲ್ಪಕಾಲದ ಅನಾರೋಗ್ಯದಿಂದ ಜು.1ರಂದು ಮಂಗಳೂರಿನಲ್ಲಿ ನಿಧನರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ, ಚಿಂತಕ, ಸಾಹಿತ್ಯ ವಿಮರ್ಶಕ, ಮಾನವತಾವಾದಿ ಪ್ರೊ. ಎಚ್. ಪಟ್ಟಾಭಿರಾಮ ಸೋಮಯಾಜಿ(64)ಯವರ ಅಂತ್ಯಕ್ರಿಯೆಯು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕೂರಾಡಿಯಲ್ಲಿ ಭಾನುವಾರ ನಡೆಯಿತು.
ಪಟ್ಟಾಭಿರಾಮ ಸೋಮಯಾಜಿಯವರ ಅಕ್ಕ ಅನಸೂಯ ಕಲ್ಕೂರರವರ ಮನೆಯ ವಠಾರದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಟ್ಟಾಭಿಯವರ ಗೆಳೆಯರು, ಒಡನಾಡಿಗಳು ಭಾಗವಹಿಸಿದ್ದರು.

ಪ್ರೊ. ಕೆ. ಪಣಿರಾಜ್, ಕೆ.ಎಲ್. ಅಶೋಕ್, ಉಮರ್ ಯು.ಹೆಚ್., ಕಲ್ಕುಳಿ ವಿಠಲ ಹೆಗಡೆ, ರಾಘವೇಂದ್ರ ಚಾರ್ವಾಕ, ಇದ್ರೀಸ್ ಹೂಡೆ, ಹುಸೈನ್ ಕೋಡಿಬೆಂಗ್ರೆ, ಇರ್ಶಾದುಲ್ಲಾಹ್ ಆದಿಲ್, ಡಾ. ಹಯವದನ ಉಪಾಧ್ಯಾಯ, ಶಾಮರಾಜ್ ಬಿರ್ತಿ, ಶಾರದಾ ಮೂಡುಸಗ್ರಿ, ಜಿ. ವಿಷ್ಣು, ಹಸೀನಾ ಬಾನು, ಶಿವಕುಮಾರ್ ಗುಳಘಟ್ಟ, ಬಾಬು ರಾಜ್, ವಿನ್ಸೆಂಟ್ ಆಳ್ವ, ವಿಕ್ಟರ್ ವಾಝ್, ಲಕ್ಷ್ಮಣ್ ಮತ್ತಿತರರು ಭಾಗವಹಿಸಿ, ಅಂತಿಮ ನಮನ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಇನ್ನಿಲ್ಲ
ಪಟ್ಟಾಭಿರಾಮ ಸೋಮಯಾಜಿ ಅಕ್ಕ ಅನಸೂಯ ಕಲ್ಕೂರ, ಅಕ್ಕಳ ಮಗ ಅಂಬರೀಷ್ ಕಲ್ಕೂರ, ಅಣ್ಣ ರಂಗನಾಥ್ ಸೋಮಯಾಜಿ, ಅತ್ತೆ ನಿವೇದಿತಾ ಹಾಗೂ ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.