ಚಾಮರಾಜನಗರ ಜಿಲ್ಲೆ, ಹನೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ವೇದಿಕೆ ಆಯೋಜಿಸಿದ್ದ ‘ ಜಾನಪದ ಉತ್ಸವ ಮತ್ತು ಜಾನಪದ ಸಿರಿ ‘ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ‘ ಹುಟ್ಟೂರಿನಲ್ಲಿ ವರನಟ ಡಾ ರಾಜ್ ಮ್ಯೂಸಿಯಂ ನಿರ್ಮಾಣ ‘ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.
” ಸಾಂಸ್ಕೃತಿಕ ರಾಯಭಾರಿ ನಟ ಸಾರ್ವಭೌಮ, ವರನಟ ಡಾ ರಾಜ್ ಕುಮಾರ್ ಅವರ ಕೊಡುಗೆ ಅಪಾರವಾಗಿದ್ದು. ಚಾಮರಾಜನಗರ ನಗರದ ಸಿಂಗನಲ್ಲೂರಿನಲ್ಲಿ ಪುಟ್ಟಸ್ವಾಮಯ್ಯನವರ ಸುಪುತ್ರರಾಗಿ ಜನಸಿದರು. ರಂಗಭೂಮಿ ಹಾಗೂ ಚಲನಚಿತ್ರ ಚಿತ್ರರಂಗಕ್ಕೆ ಮೆರುಗಾದಂತಹ ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತರ ಮ್ಯೂಸಿಯಂ ನಿರ್ಮಾಣ ಮಾಡುವ ಕುರಿತಾಗಿ
ಸ್ಥಳೀಯ ಮುಖಂಡರು, ಜನಪ್ರತಿನಿದಿಗಳು, ಸಾಹಿತಿಗಳು, ಚಿಂತಕರು ತೀರ್ಮಾನಿಸಿದ್ದು ಈ ವಿಚಾರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ ಗಮನಕ್ಕೆ ತರಲಾಗುವುದು ” ಎಂದರು.
ಗಡಿ ಜಿಲ್ಲೆ ಚಾಮರಾಜನಗರದ ಸಿಂಗಾನಲ್ಲೂರಿನಲ್ಲಿ ಪುಟ್ಟಸ್ವಾಮಯ್ಯ, ಡಾ ರಾಜಕುಮಾರ್, ಪುನೀತ್ ರಾಜಕುಮಾರ್ ರವರ ಮ್ಯೂಸಿಯಂ ನಿರ್ಮಾಣ ಮಾಡಿದರೆ ಪ್ರವಾಸಿ ತಾಣವಾಗಿ ರೂಪುಗೊಳ್ಳುವುದು. ಪ್ರವಾಸಿಗರನ್ನು ಸೆಳೆಯಲು, ಸ್ಥಳೀಯವಾಗಿ ಅಭಿವೃದ್ದಿಗೊಳಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಯೋಜನೆ ಸಾಕಾರಗೊಂಡರೆ ಪ್ರವಾಸೋದ್ಯಮವೂ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಹಿಂದುಳಿದ ಜಿಲ್ಲೆಗೆ ಪ್ರವಾಸೋಧ್ಯಮದ ಮೂಲಕ ಚೇತರಿಕೆ ಸಿಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಸಿಂಗನಲ್ಲೂರಿನಲ್ಲಿ ವಸ್ತು ಸಂಗ್ರಹಾಲಯ ಮಾಡುವುದರಿಂದ ಅಣ್ಣಾವ್ರ ಕುಟುಂಬದ ಪರಿಚಯ ಪ್ರವಾಸಿಗರಿಗೆ ತಿಳಿಯುವ ನಿಟ್ಟಿನಲ್ಲಿ, ವ್ಯವಸ್ಥಿತವಾಗಿ ನಿರ್ಮಾಣ ಮಾಡುವ ಮೂಲಕ ಕುಟುಂಬದ ಮೂರು ತಲೆಮಾರುಗಳ ಪರಿಚಯ ಮಾಡಲು ಸಹಕಾರಿಯಾಗಲಿದೆ ಎಂದು ಸಾಹಿತಿಗಳು, ಚಿಂತಕರು, ಸ್ಥಳೀಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಮುಂಗಾರಿನ ಮೊದಲ ಉಳುಮೆ ‘ ಹೊನ್ನಾರು ‘
ಕಲಾ ಕೂಟದ ಚಂದ್ರಶೇಖರ್, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ದತ್ತೇಶ್ ಕುಮಾರ್, ಎಂ ಕೈಲಾಶ್ ಮೂರ್ತಿ, ನಂಜೇಗೌಡ, ಡಾ ಪ್ರೇಮ, ಹರೀಶ್, ಕಂದವೇಲು, ಮಹೇಶ್ ಚಿಕ್ಕಲ್ಲೂರು, ಪ್ರಾಂಶುಪಾಲೆ ಚಂದ್ರಮ್ಮ, ಡಾ ಆರ್ ನಾಗಭೂಷಣ್ ಸೇರಿದಂತೆ ಇನ್ನಿತರರು ಇದ್ದರು.