ಹಾಸನ | ಬೇಲೂರು ರಥೋತ್ಸವದ ವೇಳೆ ಕುರಾನ್‌ ಪಠಣಕ್ಕೆ ವಿರೋಧ; ಪ್ರತಿಭಟನೆಗೆ ಕರೆ

Date:

Advertisements
  • ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಹಂತದಲ್ಲಿರುವ ದೇವಸ್ಥಾನ
  • ಮಾ. 28ರಂದು ಪ್ರತಿಭನಾ ಮೆರವಣಿಗೆ ಕರೆ ನೀಡಿದ ಸಂಘಟನೆಗಳು

ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವ ರಥೋತ್ಸವ ಏಪ್ರಿಲ್‌ 4ರಂದು ನಡೆಯಲಿದೆ. ರಥೋತ್ಸವಕ್ಕೂ ಮುನ್ನ ಕುರಾನ್‌ ಪಠಣ ಮಾಡುವುದು ಇಲ್ಲಿನ ವಿಶೇಷವಾಗಿದ್ದು, ಇದು ಹಿಂದೂ – ಮುಸ್ಲಿಂ ಸಾಮರಸ್ಯಕ್ಕೆ ಕಾರಣವಾಗಿದೆ. ಆದರೆ, ಈಗ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿರುವ ಕುರಾನ್ ಪಠಣವನ್ನು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ರಥೋತ್ಸವಕ್ಕೂ ಮೊದಲು ಕುರಾನ್‌ ಪಠಣ ಬೇಡ ಎಂದು ಆಗ್ರಹಿಸಿ ಹಿಂದೂ ಸಘಟನೆಗಳು ಮಾರ್ಚ್‌ 28ಕ್ಕೆ ಬೇಲೂರಿನಲ್ಲಿ ಹೋರಾಟಕ್ಕೆ ಕರೆ ನೀಡಿವೆ. ಆ ಮೂಲಕ ಐತಿಹಾಸಿಕ ಬೇಲೂರು ಚನ್ನಕೇಶವ ರಥೋತ್ಸವದ ಮೇಲೆ ವಿವಾದದ ಕರಿನೆರಳು ಬಿದ್ದಿದೆ.

ಹೊಯ್ಸಳರ ಕಾಲದ ವಿಶ್ವ ವಿಖ್ಯಾತ ಐತಿಹಾಸಿಕ ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯ ತನ್ನ ವಾಸ್ತು ಶಿಲ್ಪ ಕಲೆಗಳ ಮೂಲಕ ಕೆಲವೇ ದಿನಗಳಲ್ಲಿ ವಿಶ್ವ ಪಾರಂಪರಿಕ ತಾಣವಾಗುವ ಹೊತ್ತಿನಲ್ಲಿ, ರಥೊತ್ಸವದ ವೇಳೆ ಪರಂಪರಾಗತವಾಗಿ ನಡೆಯುತ್ತಿದ್ದ ಕುರಾನ್ ಪಠಣಕ್ಕೆ ಹಿಂದೂ ಧರ್ಮ ವಿರೋಧ ವ್ಯಕ್ತಪಡಿಸಿದೆ.

Advertisements

ಕಳೆದ ವರ್ಷ ಹಿಂದೂ ದೇವಾಲಯಗಳ ವ್ಯಾಪ್ತಿಯಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂಬ ವಿವಾದ ನಡೆದು, ಕೊನೆಗೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿದಿತ್ತು. ಕುರಾನ್ ಪಠಣದ ಮೂಲಕವೇ ಸಂಪ್ರದಾಯದಂತೆ ಜಾತ್ರೆ ನಡೆದಿತ್ತು.

ಎರಡು ದಿನಗಳ ಹಿಂದೆ ಹಾಸನದ ಡಾ. ಎನ್‌ ರಮೇಶ್ ರಚಿಸಿರುವ ‘ಬೇಲೂರಿನ ಶ್ರೀಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ’ ಎಂಬ ಪುಸ್ತಕವನ್ನು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಬಿಡುಗಡೆ ಮಾಡಿದ್ದರು. ಈ ಪುಸ್ತಕದಲ್ಲಿ ‘1932ರಲ್ಲಿ ರಥೋತ್ಸವಕ್ಕೂ ಮುನ್ನ ಕುರಾನ್‌ ಪಠಣ ಮಾಡುವ ಸಂಪ್ರದಾಯವನ್ನು ದೇವಾಲಯದ ಮ್ಯಾನ್ಯುಯಲ್​ನಲ್ಲಿ ಸೇರಿಸುವ ಮೂಲಕ ಪರಂಪರೆಗೆ ಅಪಚಾರ ಎಸಗಲಾಗಿದೆ’ ಎಂಬುವುದನ್ನು ವಿವರಿಸಲಾಗಿದೆ.

“ಸೌಹಾರ್ದತೆ ಸರಿ, ಎಲ್ಲರೂ ಒಂದಾಗಿ ಇರಬೇಕು ಎಂಬುವುದು ಸರಿ. ಆದರೆ, ಚನ್ನಕೇಶವನ ಜಾತ್ರೆ ವೇಳೆ ಗೋವಿಂದ ನಾಮಸ್ಮರಣೆ ಮೊಳಗಬೇಕೇ ವಿನಃ ಕುರಾನ್ ಪಠಣ ಸರಿಯಲ್ಲ. ನಾವು ದರ್ಗಾಗೆ ಹೋಗಿ ಹನುಮಾನ್ ಚಾಲಿಸ ಹೇಳಲು ಸಾಧ್ಯವೇ? ಹಾಗೆಯೇ ಕೆಲವೇ ವರ್ಷಗಳ ಹಿಂದೆ ಸೇರಿಸಲಾಗಿರುವ ಇಂತಹ ಆಚರಣೆಯನ್ನು ಕೈಬಿಡಬೇಕು” ಎಂಬುದು ಪುಸ್ತಕದ ರಚನಕಾರ ಡಾ. ಎನ್‌ ರಮೇಶ್ ಅವರ ಒತ್ತಾಯವಾಗಿದೆ.

ಮುಂದುವರಿದು, ‘ಬೇಲೂರಿನ ಶ್ರೀಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ’ ಎಂಬ ಪುಸ್ತಕ ಮತ್ತು ಕೆಲವು ದಾಖಲೆಗಳನ್ನು ಮುಂದಿಟ್ಟು ರಥೋತ್ಸವದ ವೇಳೆ ಕುರಾನ್ ಪಠಣೆ ನಿಲ್ಲಬೇಕು ಎಂದು ಹಿಂದೂ ಸಂಘಟನೆಗಳು ಹೋರಾಟಕ್ಕಿಳಿದಿವೆ. ಪುಸ್ತಕ ಬಿಡುಗಡೆಯಾದ ಬಳಿಕ ಮಾ. 26ರಂದು ಬೇಲೂರಿನಲ್ಲಿ ಹಿಂದೂ ಸಂಘಟನೆಗಳ ಮುಖಂಡರು ತಹಶೀಲ್ದಾರ್​ಗೆ ಮನವಿ ಸಲ್ಲಿಸಿ, ‘ಹಿಂದೂಗಳ ಭಾವನೆಗೆ ಧಕ್ಕೆ ತರುವ ಇಂತಹ ಆಚರಣೆ ಬೇಡ’ ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಜೇನು ದಾಳಿ; ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಒಟ್ಟಿನಲ್ಲಿ ಕಳೆದ ವರ್ಷ ವ್ಯಾಪಾರದ ವಿಚಾರಕ್ಕೆ ಆರಂಭವಾಗಿದ್ದ ವಿವಾದ ಮುಗಿದು ಈ ವರ್ಷ ಹೊಸ ವಿವಾದ ಹುಟ್ಟಿಕೊಂಡಿದೆ. ಹಿಂದೂ ದೇವರ ರಥೊತ್ಸವದ ವೇಳೆ ಕುರಾನ್​ ಪಠಣ ಸೌಹಾರ್ದತೆಯ ಸಂಕೇತ ಎಂದು ಹೇಳಲಾಗುತ್ತಿದ್ದ ವಿಚಾರವೇ ಈಗ ವಿವಾದದ ರೂಪ ಪಡೆದಿದ್ದು, ಈ ಆಚರಣೆಯನ್ನ ನಿಲ್ಲಿಸಲು ಆಗ್ರಹ ಕೇಳಿ ಬಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X