- ಬೆಂಗಳೂರಿನ ಹೊರವಲಯದಲ್ಲಿ ನಡೆಯಲಿರುವ ಸ್ಕ್ರೀನಿಂಗ್ ಕಮಿಟಿ ಸಭೆ
- ಬಾಕಿ ಇರುವ 100 ಕ್ಷೇತ್ರಗಳಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಇಂದು(ಮಾ. 27) ನಡೆಯಲಿದೆ. ಬೆಂಗಳೂರು ಹೊರ ವಲಯದ ಖಾಸಗಿ ರೆಸಾರ್ಟ್‌ನಲ್ಲಿ ಈ ಸಭೆ ನಡೆಯಲಿದೆ.
ಸ್ಕ್ರೀನಿಂಗ್ ಕಮಿಟಿ ಸದಸ್ಯ ಮೋಹನ್ ಪ್ರಕಾಶ್ ನೇತೃತ್ವದ ಸಭೆಯಲ್ಲಿ, ಬಾಕಿ ಉಳಿದಿರುವ 100 ಕ್ಷೇತ್ರಗಳಿಗೆ ಉಮೇದುವಾರರನ್ನು ಅಂತಿಮಗೊಳಿಸಲಾಗುವುದೆಂದು ಮೂಲಗಳು ತಿಳಿಸಿವೆ.
ಮೊದಲ ಪಟ್ಟಿಯಲ್ಲಿ ಘೋಷಣೆ ಆಗದೆ ಉಳಿದಿರುವ ಆರು ಮಂದಿ ಹಾಲಿ ಶಾಸಕರ ಕ್ಷೇತ್ರಗಳನ್ನೂ ಒಳಗೊಂಡಂತೆ ಇಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳನ್ನು ಹೊಂದಿರುವ ಸ್ಪರ್ಧಾಕಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಎರಡನೇ ಪಟ್ಟಿಯಲ್ಲಿ 60 ಕ್ಷೇತ್ರಗಳ ಸ್ಪರ್ಧಾಕ್ಷೇತ್ರಗಳು ಅಂತಿಮವಾಗಿದ್ದು. ಹೊಸದಾಗಿ ಅವುಗಳಿಗೆ ಬಂದಿರುವ ಅಹವಾಲುಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಳಿದಂತೆ ಬಿಜೆಪಿ, ಜೆಡಿಎಸ್ ಪಟ್ಟಿಗೆ ಕಾದಿರುವ ಕಾಂಗ್ರೆಸ್ ಆ ಪಕ್ಷಗಳ ನಡೆ ನೋಡಿ ಮುಂದೆ ತಮ್ಮ ಹೆಜ್ಜೆ ಇಡಲಿದೆ. ಹಾಗೆಯೇ ಅನ್ಯ ಪಕ್ಷಗಳಿಂದ ವಲಸೆ ಬರಲಿರುವ ಹಾಗೂ ಅಭ್ಯರ್ಥಿಗಳಿಲ್ಲದ ಕ್ಷೇತ್ರಗಳಿಗೆ ಹೊಸಬರನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ ಎರಡನೇ ಪಟ್ಟಿ ಬಿಡುಗಡೆ ತಡವಾಗಲಿದೆ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? :ಕೈ ಹಿಡಿಯದ ಕಮಲ ಶಾಸಕರು: ಹಲವು ಕ್ಷೇತ್ರಗಳ ಗೊಂದಲಕ್ಕೆ ಬಹುತೇಕ ತೆರೆ
ಸ್ಕ್ರೀನಿಂಗ್ ಕಮಿಟಿ ಸಭೆ ಆರಂಭಕ್ಕೂ ಮುನ್ನ ಟಿಕೆಟ್ ಘೋಷಿತ ಅಭ್ಯರ್ಥಿಗಳಿಗೆ ಚುನಾವಣೆ ತಯಾರಿ ಬಗ್ಗೆ ಪಕ್ಷ ಪ್ರಮುಖರು ಸಲಹೆ ನೀಡಲಿದ್ದಾರೆ. ಇಂದಿನ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.