ರಾಯಚೂರು | ಅಂಬೇಡ್ಕರ್ ಅರಿವು ಪುಸ್ತಕ ಮಕ್ಕಳ ಮನ ಮುಟ್ಟುವುದಕ್ಕೆ ಸಹಕಾರಿ: ಎಂ ಅರ್ ಬೇರಿ

Date:

Advertisements

ಅಂಬೇಡ್ಕರ್ ಅರಿವು ಪುಸ್ತಕ ಮನೆ ಮನಗಳಿಗೆ ಮುಟ್ಟಿಸುವ ಮೂಲಕ ಮಕ್ಕಳ ಮನಸ್ಸನ್ನು ಮುಟ್ಟುವುದಕ್ಕೆ ಸಹಕಾರಿಯಾಗಿದೆ ಎಂದು ದಲಿತ ಮುಖಂಡ ಎಂ ಆರ್ ಬೇರಿ ಹೇಳಿದರು.

ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಲ್ಕುಂಡಿ ಮಹದೇವಸ್ವಾಮಿ ಅವರ ಅಂಬೇಡ್ಕರ್ ಅರಿವು ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

“ಅಂಬೇಡ್ಕರ್ ಅವರ ಚಿಂತನೆಗಳು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅರಿವು ಕುರಿತು ಪುಸ್ತಕ ರಚನೆ ಮಾಡಿದ್ದಾರೆ. ಅಂಬೇಡ್ಕರ್ ಅವರ ಕನಸನ್ನು ಬಿತ್ತರಿಸಲು ಭರವಸೆ ಮೂಡಿಸುವ ಪುಸ್ತಕವಾಗಿದ್ದು, ದೇಶವೇ ಸಂವಿಧಾನದ ಮೇಲೆ ಆಧಾರವಾಗಿದೆ. ಸಂವಿಧಾನದ ರಚನೆಗೆ ಕಾರಣರಾಗಿರುವ ಅಂಬೇಡ್ಕರ್ ಅವರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಮೊದಲು ಮಕ್ಕಳಿಗೆ ಅಂಬೇಡ್ಕರ್ ಅವರ ಚಿಂತನೆಗಳು, ಅವರ ಆಶಯಗಳ ಕುರಿತು ಮನ ಮುಟ್ಟುವಂತಹ ಕೆಲಸ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಸುತ್ತಿದ್ದು, ಅಂಬೇಡ್ಕರ್ ಅರಿವು ಪುಸ್ತಕ ಇದರ ಭಾಗವಾಗಿದೆ” ಎಂದರು.

Advertisements

“ಸಾಕಷ್ಟು ಜನರಿಗೆ ಸಂವಿಧಾನದ ಬಗ್ಗೆ ಅರಿವು ಇಲ್ಲ. ಕೆಲವರು ನೋಡಿದರೂ ನೊಡದಂತೆ ಇದ್ದಾರೆ.
ಇದರಿಂದ ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸುವಲು ಆಗುತ್ತಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಅಂಬೇಡ್ಕರ್ ಎನ್ನುವುದು ಸಮುದ್ರವಿದ್ದಂತೆ. ಸಾಕಷ್ಟು ಕಲಿಯಬೇಕಿದೆ, ಎಷ್ಟು ಕಲಿತರೂ ಕಡಿಮೆ, ಮನೆ ಮನೆಗೆ ಅಂಬೇಡ್ಕರ್ ಅರಿವು ಕುರಿತು ಮಕ್ಕಳಿಗೆ ಮನದಟ್ಟು ಮಾಡುವಂತಹ ಕೆಲಸಗಳು ನಿರಂತರವಾಗಿ ನಡೆಯಬೇಕಿದೆ” ಎಂದು ತಿಳಿಸಿದರು.

ಸಾಮಾಜಿಕ ಚಿಂತಕ, ಹೋರಾಟಗಾರ ಆರ್ ಮಾನಸಯ್ಯ ಮಾತನಾಡಿ, “ಮೈಸೂರು ಸಾಂಸ್ಕೃತಿಕ ನಗರಿಯಾಗಿದ್ದು, ಅಲ್ಲಿಂದ ಬಂದು ಇಲ್ಲಿ ಅಂಬೇಡ್ಕರ್ ಅರಿವು ಪುಸ್ತಕ ಬಿಡುಗಡೆಗೊಳಿಸುತ್ತಿರುವುದು ಇಲ್ಲಿನ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದಾರೆ. ಈ ಹಿಂದೆ ಶಾಲೆಯ ಗೋಡೆಗಳ ಮೇಲೆ ಬರಹಗಳಿದ್ದವು, ಇಂದಿನ ಬಾಲಕರು ಮುಂದಿನ ನಾಗರಿಕರು, ಬೆಳೆಯುವ ಸಿರಿ ಮೊಳಕೆಯಲ್ಲಿ ಈ ಬರಹಗಳು ಇಂದು ಮರೆಯಾಗಿವೆ. ಈ ಗಾದೆಗಳು ಸಾಕಷ್ಟು ಪ್ರಭಾವ ಬೀರುತ್ತಿದ್ದವು. ಮಕ್ಕಳಿಗೆ ದೇಶದ ಚರಿತ್ರೆ, ಅಧ್ಯಯನದ ಅರಿವಿಲ್ಲ. ಸಾಂಸ್ಕೃತಿಕ ಪರಂಪರೆ, ಅಧ್ಯಯನದ ಕೊರತೆ ಇದೆ” ಎಂದರು.

“ಮಕ್ಕಳಲ್ಲಿ ವಿಷ ಬೀಜ ಬಿತುತ್ತಿದ್ದಾರೆ, ಮಕ್ಕಳಲ್ಲಿ ದ್ವೇಷ, ಅಸೂಯೆ, ಜಾತಿವಾದ, ತಾರತಮ್ಯ ಬೆಳೆಸುತ್ತಿದ್ದಾರೆ. ಮನುವಾದದತ್ತ ಕೊಡ್ಯೊಯ್ಯುತ್ತಿದ್ದಾರೆ. ಇದು ದೇಶಕ್ಕೆ ಮಾರಕವಾಗಿದೆ. ಮನುವಾದ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ಅಂಬೇಡ್ಕರ್ ಅರಿವಿನ ಪುಸ್ತಕ ಔಷಧವಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ಜಗತ್ತಿನಲ್ಲಿ ಅತಿ ಹೆಚ್ಚು ಕಡೆಗಣಿಸ್ಪಡುತ್ತಿರುವವರು ವೃದ್ಧ ತಂದೆ ತಾಯಂದಿರು: ಮಹಮ್ಮದ್‌ ಕುಂಞಿ

“ಅಂಬೇಡ್ಕರ್ ಅರಿವು ಪುಸ್ತಕದಲ್ಲಿ ಅನೇಕ ದಾರ್ಶನಿಕರ ಕಿರುಪರಿಚಯವಿದೆ. ಬಸವಣ್ಣ, ಭೀಮಾಬಾಯಿ, ಗೌತಮ ಬುದ್ಧ, ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಸೇರಿದಂತೆ ಸಾಕಷ್ಟು ಮಾಹಿತಿ ಇದರಲ್ಲಿ ಲಭ್ಯವಿದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಜಿ ಅಮರೇಶ, ಆರ್‌ಸಿಎಫ್ ಉಪಾಧ್ಯಕ್ಷ ಆದಿ ನಗನೂರು, ಕೆಎಸ್‌ಆರ್‌ಡಿಪಿಆರ್‌ ಎಸ್‌ಸಿ/ಎಸ್‌ಟಿಯ ರಾಜ್ಯ ಖಜಾಂಚಿ ಚಂದ್ರಕಾಂತ ನೇರಳೆ, ಕೃತಿ ಕರ್ತೃ ಮಲ್ಕುಂಡಿ ಮಹದೇವಸ್ವಾಮಿ ಸೇರಿದಂತೆ ಬಹುತೇಕರು ಇದ್ದರು.

ವರದಿ : ಅಜೀಜ್ ಜಾಗಿರದಾರ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X