ತಾಂತ್ರಿಕ ಸಮಸ್ಯೆ ಹಾಗೂ ಕಲ್ಲಿದ್ದಲು ಕೊರತೆಯಿಂದಾಗಿ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಆರ್‌ಟಿಪಿಎಸ್) ನಾಲ್ಕು ಘಟಕಗಳು ಹಾಗೂ ವೈಟಿಪಿಎಸ್‌ನ ಒಂದು ಘಟಕ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.
ಆರ್‌ಟಿಪಿಎಸ್‌ನಲ್ಲಿ 1720 ಮೆವ್ಯಾ ವಿದ್ಯುತ್ ಉತ್ಪಾದಿಸುವ 8 ಘಟಕಗಳಲ್ಲಿ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಐದನೇ ಘಟಕದಲ್ಲಿಯೂ ಉತ್ಪಾದನೆ ಇಳಿಕೆಯಾಗಿದ್ದು, 430 ಮೆವ್ಯಾ ಮಾತ್ರ ಉತ್ಪಾದನೆಯಾಗುತ್ತಿದೆ. 210 ಮೆವ್ಯಾ ವಿದ್ಯುತ್ ಉತ್ಪಾದಿಸುವ ಒಂದು ಮತ್ತು ಎರಡನೇ ಘಟಕ ಸ್ಥಗಿತಗೊಂಡು ತಿಂಗಳು ಗತಿಸುತ್ತಿದೆ. ಆರನೇ ಘಟಕಕ್ಕೆ ಕಲ್ಲಿದ್ದಲು ಕೊರತೆ, ಏಳನೇ ಘಟಕದಲ್ಲಿ ಕಲ್ಲಿದ್ದಲು ಸಮಸ್ಯೆಯಿಂದ ಸ್ಥಗಿತಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಭಾರೀ ಮಳೆಯಿಂದ ರಸ್ತೆ, ಬೆಳೆ ಜಲಾವೃತ; ಜನಜೀವನ ಅಸ್ತವ್ಯಸ್ತ
800 ಮೆವ್ಯಾ ವಿದ್ಯುತ್ ಉತ್ಪಾದಿಸುವ ವೈಟಿಪಿಎಸ್ ಎರಡನೇ ಘಟಕ ಬ್ಲಾಯರ್ ಟ್ಯೂಬ್ ಸೋರಿಕೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಒಟ್ಟು 1,720 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯವಿರುವ ಕೇಂದ್ರದಿಂದ ಪ್ರಸ್ತುತ ಕೇವಲ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ರಾಯಚೂರು ಸಿಟಿ ಜರ್ನಲಿಸ್ಟ್ ಹಫೀಜ್ ಅವರ ಮಾಹಿತಿ ಆಧರಿಸಿದ ವರದಿ